ರಸಾಯನಶಾಸ್ತ್ರ ವಿಚಾರ ಸಂಕಿರಣ

ಮೂಲ್ಕಿ: ಪ್ರಪಂಚದ ವಿವಿಧ ಅವಿಷ್ಕಾರಗಳಿಗೆ ಮೂಲ ವಿಜ್ಞಾನ ವಾಗಿರುವ ರಾಸಾಯನ ಶಾಸ್ತ್ರದ ಬಗ್ಗೆ ಸಂಶೋಧನೆಗಳು ಬಹಳಷ್ಟು ಮುಂದುವರೆದ ಪರಿಣಾಮ ವೈಮಾನಿಕ, ಅಂತರಿಕ್ಷ ರಕ್ಷಣೆ ಮತ್ತು ವೈದ್ಯಕೀಯ ವಿಭಾಗದಲ್ಲಿ ಮಹತ್ತರ ಬದಲಾವಣೆ ಹಾಗೂ ಆಧುನೀಕ ತಂತ್ರಜ್ಞಾನಗಳನ್ನು ಕಂಡುಕೊಳ್ಳಲು ಸಾಧ್ಯವಾಗಿದೆ ಎಂದು ಸೀಕ್ವೆಂಟ್ ಸೈಂಟಿಫಿಕ್ ಲಿಮಿಟೆಡ್‌ನ ಸಂಶೋದನಾ ವಿಭಾಗದ ಡಿ.ಜಿ.ಎಂ. ಡಾ| ಪಿ.ಕೆ.ವಾಸುದೇವ ಹೇಳಿದರು. ಮೂಲ್ಕಿ ವಿಜಯ ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ರಸಾಯನಶಾಸ್ತ್ರ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದರು.
ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸುರತ್ಕಲ್‌ನ ಎನ್.ಐ.ಟಿ.ಕೆ.ಯ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ| ಬಿ.ರಾಮಚಂದ್ರ ಭಟ್, ಸೆಂಟರ್ ಫಾರ್ ಸಾಫ್ಟ್ ಮೆಟೇರಿಯಲ್ಸ್ ಸ್ಟಡಿಯ ಸೀನಿಯರ್ ಸೈಂಟಿಸ್ಟ್ ಡಾ| ವೀಣಾ ಪ್ರಸಾದ್ ಹಾಗೂ ಮಂಗಳೂರು ಶ್ರೀನಿವಾಸ್ ಇನ್ಸ್ಟಿಟ್ಯೂಟ್‌ನ ನ್ಯಾನೋಟೆಕ್ನಾಲಜಿಯ ಮುಖ್ಯಸ್ಥರಾದ ಡಾ| ಪ್ರಸಾದ್ ಪಿ. ಇವರು ಭಾಗವಹಿಸಿ ಸಂಕಿರಣಕ್ಕೆ ಸಂಬಂಧಿಸಿದ ಉಪಯುಕ್ತ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಡಾ| ಎಂ.ಎ.ಆರ್.ಕುಡ್ವ ವಹಿಸಿದ್ದರು. ಅತಿಥಿಗಳಾಗಿ ರಾಘವ ಕಾಮತ್, ಡಾ|ವೀಣಾ ಪ್ರಸಾದ್, ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ.ಆರ್.ಶಂಕರ್ ಮತ್ತು ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ| ವಿ ಸೇತುಮಾಧವರವರು ಉಪಸ್ಥಿತರಿದ್ದರು.

ಪ್ರಾಧ್ಯಾಪಕರಾದ ಪ್ರೊ| ತಮ್ಮಯ್ಯ ಶೆಟ್ಟಿ ಸ್ವಾಗತಿಸಿದರು. ಪ್ರೊ| ವಿ ಸೇತುಮಾಧವರವರು ವಂದಿಸಿದರು. ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ| ವಿಜಯಕುಮಾರಿ ಕಾರ್ಯಕ್ರಮ ನಿರೂಪಿಸಿದರು.

Bhagyavan Sanil

Mulki-08011501

Comments

comments

Comments are closed.

Read previous post:
Kinnigoli-07011509
16 ನೇ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ

ಕಿನ್ನಿಗೋಳಿ: ತಾಳಿಪಾಡಿ ಗುತ್ತು ಮುಂಭಾಗದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಶಿಬಿರದಲ್ಲಿ ತಾಳಿಪಾಡಿ ಗುತ್ತು ಧನಪಾಲ ಶೆಟ್ಟಿ ಸದಾಶಿವ ಗುರುಸ್ವಾಮಿ ಕೊಪ್ಪ ಹಾಗೂ ಕಟೀಲು , ಕಿನ್ನಿಗೋಳಿ, ಸುರಗಿರಿ,...

Close