ಯಕ್ಷಗಾನ ಸ್ಪರ್ದೆಯ ಸಮಾರೋಪ ಸಮಾರಂಭ

ಮೂಲ್ಕಿ: ವಿದ್ಯಾರ್ಥಿ ಸಮುದಾಯಕ್ಕೆ ಕಾಲೇಜು ಶಿಕ್ಷಣದೊಂದಿಗೆ ಯಕ್ಷಗಾನ ತರಬೇತಿಯನ್ನು ನೀಡಿ ಯಕ್ಷಗಾನ ಸಂಘಟಿಸುವ ಮೂಲಕ ಯುವ ಪೀಳೀಗೆಗೆ ಯಕ್ಷ ಕಲೆಯ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸುತ್ತಿರುವ ಪ್ರೊ.ನಾರಾಯಣ ರವರ ಶ್ರಮ ಶ್ಲಾಘನೀಯ ಎಂದು ಮೂಲ್ಕಿ ಲಯನ್ಸ್ ಅಧ್ಯಕ್ಷ ದೇವ ಪ್ರಸಾದ್ ಪುನರೂರು ಹೇಳಿದರು.

ಮೂಲ್ಕಿ ವಿಜಯಾ ಕಾಲೇಜಿನಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟ್ ಯಕ್ಷಗಾನ ಸ್ಪರ್ದೆಯ ಸಮಾರೋಪ ಸಮಾರಂಭದಲ್ಲಿ ಕಳೆದ ಸುಮಾರು 25 ವರ್ಷಗಳಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಯಕ್ಷಗಾನ ಶಿಕ್ಷಣ ನೀಡುತ್ತಾ ಬಂದಿರುವ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಪ್ರೊ.ನಾರಾಯಣ್ ರನ್ನು ಪತ್ನಿ ಹರಿಣಾಕ್ಷಿ ನಾರಾಯಣ್ ರವರ ಜೊತೆಯಲ್ಲಿ ಸನ್ಮಾನಿಸಲಾಯಿತು. ಯಕ್ಷಗಾನದ ಪದ್ಯ ಶೈಲಿಯಲ್ಲಿ ಸನ್ಮಾನ ಪತ್ರವನ್ನು ವಿದ್ಯಾರ್ಥಿಗಳು ವಾಚಿಸಿದರು.

ಈ ಸಂದರ್ಭ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ನ ಅಧ್ಯಕ್ಷ ಡಾ ಎಚ್ ಎಸ್ ಬಲ್ಲಾಳ್, ಆಡಳಿತಾಧಿಕಾರಿ ಡಾ ಎಚ್ ಶಾಂತರಾಮ್, ಸುರತ್ಕಲ್ ಉದ್ಯಮಿ ಅಗರಿ ರಾಘವೇಂದ್ರ ರಾವ್ . ಉಡುಪಿಯ ಉದ್ಯಮಿ ಮಹೇಶ್ ಸುವರ್ಣ, ಮಂಗಳೂರು ವಿ ವಿ ಯ ಡಾ ಪಿ ದಯಾನಂದ ಪೈ ಮತ್ತು ಸತೀಶ್ ಪೈ ಯಕ್ಷಗಾನ ಆಧ್ಯಯನ ಕೇಂದ್ರದ ನಿರ್ದೇಶಕ ಪ್ರೊ ಕೆ ಚೆನ್ನಪ್ಪ ಗೌಡ, ಮೂಲ್ಕಿ ನಗರ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಸುನೀಲ್ ಆಳ್ವ. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ ಎಂ ಎ ಆರ್ ಕುಡ್ವ, ಪ್ರಾಂಶುಪಾಲ ಪ್ರೊ. ಕೆ ಆರ್ ಶಂಕರ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪಮೀದಾ ಬೇಗಂ, ಕಾಲೇಜಿನ ವಿದ್ಯಾರ್ಥಿ ನಾಯಕ ಮಂಜುನಾಥ್, ಯಕ್ಷ ವಿಜಯ ಕೇಸರಿ ಸಮಿತಿಯ ಜೊತೆ ಕಾರ್ಯದರ್ಶಿ ರಜನೀಶ್, ಪ್ರಾಣೇಶ್ ಭಟ್ ದೇಂದಡ್ಕ ಮತ್ತಿತರರು ಉಪಸ್ಥ್ತಿತರಿದ್ದರು.

Bhagyavan Sanil

Mulki-08011502

Comments

comments

Comments are closed.

Read previous post:
Mulki-08011501
ರಸಾಯನಶಾಸ್ತ್ರ ವಿಚಾರ ಸಂಕಿರಣ

ಮೂಲ್ಕಿ: ಪ್ರಪಂಚದ ವಿವಿಧ ಅವಿಷ್ಕಾರಗಳಿಗೆ ಮೂಲ ವಿಜ್ಞಾನ ವಾಗಿರುವ ರಾಸಾಯನ ಶಾಸ್ತ್ರದ ಬಗ್ಗೆ ಸಂಶೋಧನೆಗಳು ಬಹಳಷ್ಟು ಮುಂದುವರೆದ ಪರಿಣಾಮ ವೈಮಾನಿಕ, ಅಂತರಿಕ್ಷ ರಕ್ಷಣೆ ಮತ್ತು ವೈದ್ಯಕೀಯ ವಿಭಾಗದಲ್ಲಿ...

Close