ಅರ್ಹರಿಗೆ ದಾನ ನೀಡಬೇಕು

ಮೂಲ್ಕಿ: ಸ್ವಗಳಿಕೆಯ ಸಂಪನ್ಮೂಲದ ಅಂಶವನ್ನು ಅರ್ಹರಿಗೆ ದಾನ ಮಾಡುವ ಮೂಲಕ ಜೀವನದಲ್ಲಿ ಸಂತೋಷ ಶಾಂತಿ ಕಂಡುಕೊಳ್ಳಲು ಸಾಧ್ಯವಿದೆ ಎಂದು ಸಿ.ಎಸ್.ಐ ದಕ್ಷಿಣ ದರ್ಮ ಸಭೆಯ ಧಮಾಧ್ಯಕ್ಷರಾದ ರೈಟ್ ರೆ.ಮೋಹನ್ ಮನೋರಾಜ್ ಹೇಳಿದರು.
ಮೂಲ್ಕಿಯ ಸಿ.ಎಸ್.ಐ ಬಾಲಿಕಾಶ್ರಮದಲ್ಲಿ ನಡೆದ ನೂತನ ಅಡುಗೆ ಮನೆ ಹಾಗೂ ಇತರ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಿ ಮಾತನಾಡಿದರು.
ದೇವರ ಕೊಡುಗೆಯಾದ ಮಕ್ಕಳಿಗೆ ಅವರ ಹಕ್ಕುಗಳ ಬಗ್ಗೆ ತಿಳಿಸಿ ರಕ್ಷಿಸುವುದು ನಮ್ಮ ಆಧ್ಯ ಕರ್ತವ್ಯವಾಗಿದ್ದು ಮೂಲ್ಕಿ ಬಾಲಿಕಾಶ್ರಮ ಮಕ್ಕಳ ಒಳಿತಿಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.ಈ ಸಂದರ್ಭ ನೂತನವಾಗಿ ಧರ್ಮಾಧ್ಯಕ್ಷರಾದ ರೈಟ್ ರೆ.ಮೋಹನ್ ಮನೋರಾಜ್ ರವರನ್ನು ಬಾಲಿಕಾಶ್ರಮದ ಪರವಾಗಿ ಸನ್ಮಾನಿಸಲಾಯಿತು.

ಅತಿಥಿಗಳಾಗಿ ಧರ್ಮ ಸಭೆಯ ದಕ್ಷಿಣ ಕನ್ನಡ ವಲಯ ಸಭೆಯ ಅಧ್ಯಕ್ಷರಾದ ರೆ|ವಿನ್‌ಫ್ರೆಡ್ ಅಮ್ಮನ್ನ,ಮೂಲ್ಕಿ ಯುನಿಟಿ ಸಭೆಯ ಸಭಾಪಾಲಕರಾದ ರೆ|ಸಂತೋಷ್ ಕುಮಾರ್,  ಕನ್ವೀನರ್ ವಿನ್ಸೆಂಟ್ ಸಾಲಿನ್ಸ್,ಕೋ-ಆರ್ಡಿನೇಟರ್ ರೆಜಿನಾಲ್ಡ್ ಸೋನ್ಸ್,ಮೂಲ್ಕಿ ನಗರ ಪಂಚಾಯತ್ ಸದಸ್ಯ ಹರ್ಷರಾಜ ಶೆಟ್ಟಿ ಜಿಎಂ,ಸಿ.ಎಸ್.ಐ ಸಮೂಹ ವಿದ್ಯಾ ಸಂಸ್ಥೆಗಳ ಸಂಚಾಲಕ ಪ್ರೊ.ಸ್ಯಾಮ್ ಮಾಬೆನ್,ವಿವಿಧ ಧರ್ಮ ಸಭೆಗಳ ಸಭಾ ಪಾಲಕರು, ಸಾರ್ವಜನಿಕ ಹಿತೈಷಿಗಳು ಮತ್ತು ಬಾಲಿಕಾಶ್ರಮದ ಮಕ್ಕಳು ಉಪಸ್ಥಿತರಿದ್ದರು.

ಬಾಲಿಕಾಶ್ರಮದ ವಾರ್ಡನ್ ರೆ|ಶಶಿಕಲ ಅಂಚನ್, ಸ್ವಾಗತಿಸಿದರು. ಪ್ರವೀಣ್ ಆನಂದ್ ನಿರೂಪಿಸಿದರು, ಸುಜ್ಯೋತಿ ಪ್ಲೋರೆನ್ಸ್ ವಂದಿಸಿದರು.

Bhagyavan Sanil

Mulki-09011501

Comments

comments

Comments are closed.

Read previous post:
Mulki-08011502
ಯಕ್ಷಗಾನ ಸ್ಪರ್ದೆಯ ಸಮಾರೋಪ ಸಮಾರಂಭ

ಮೂಲ್ಕಿ: ವಿದ್ಯಾರ್ಥಿ ಸಮುದಾಯಕ್ಕೆ ಕಾಲೇಜು ಶಿಕ್ಷಣದೊಂದಿಗೆ ಯಕ್ಷಗಾನ ತರಬೇತಿಯನ್ನು ನೀಡಿ ಯಕ್ಷಗಾನ ಸಂಘಟಿಸುವ ಮೂಲಕ ಯುವ ಪೀಳೀಗೆಗೆ ಯಕ್ಷ ಕಲೆಯ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸುತ್ತಿರುವ ಪ್ರೊ.ನಾರಾಯಣ...

Close