ಪ್ರತಿಭಾಕಾರಂಜಿ ಮತ್ತು ಪ್ರತಿಭಾ ಪುರಸ್ಕಾರ

ಮೂಲ್ಕಿ: ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಬೆಳೆಸಿ ಅವರಿಗೆ ಶಿಕ್ಷಣದಲ್ಲಿ ಆಸಕ್ತಿ ಹೆಚ್ಚಿಸಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ ಎಂದು ಶಾಸಕ ಮೊದಿನ್ ಬಾವ ಹೇಳಿದರು. ಮೂಲ್ಕಿ ಶಾಫಿ ಕೇಂದ್ರ ಮಸೀದಿ ಹಾಗೂ ನುಸ್ರತುಲ್ ಮಸಾಕೀನ್ ಇದರ ಜಂಟಿ ಆಶ್ರಯದಲ್ಲಿ ಮದ್ರಸ ವಿದ್ಯಾರ್ಥಿಗಳ ಪ್ರತಿಭಾಕಾರಂಜಿ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಪ್ರತಿಭೆಯ ಬಗ್ಗೆ ಸಮಾಜ ಆಸಕ್ತಿ ವಹಿಸಿ ಪ್ರೋತ್ಸಾಹಿಸುವ ಮೂಲಕ ಮಕ್ಕಳ ಆಸಕ್ತಿ ಹೆಚ್ಚಾಗಿ ಪ್ರತಿಭಾನ್ವಿತ ಯುವ ಸಮಾಜ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಮೂಲ್ಕಿ ಕೇಂದ್ರ ಮಸೀದಿಯ ಅಧ್ಯಕ್ಷರಾದ ಇಕ್ಪಾಲ್ ಅಧ್ಯಕ್ಷತೆ ವಹಿಸಿದರು ಅಂಗರಗುಡ್ಡೆ ಇಬ್ರಾಹಿಂ ಹಾಜಿ ತಂಙಳ್ ದುವಾಃರ್ಶೀವಾಚನಗೈದರು.ಸಲೀಂ ಫೈಝಿ ಮತ್ತು ಮುಸ್ತಾಫ ಹನೀಫಿ ಸುಭಾಶಂಶನೆಗೈದರು. ಕಿನ್ಯ ಖತೀಬ್ ಕಾಸಿಂ ದಾರಿಮಿ, ಪುತ್ತೂರು ಬದ್ರಿಯಾ ಜುಮಾ ಮಸೀದಿ ಖತೀಬ್ ಎಸ್.ಬಿ, ದಾರ್ಮಿಕ ಉಪನ್ಯಾಸ ನೀಡಿದರು ಮೂಲ್ಕಿ ಕೇಂದ್ರ ಮದ್ರಸ ಮತ್ತು ನೂರಿಯ್ಯಃ ಮದ್ರಸ ಕಾರ್ನಾಡು ಇದರ ಎಸ್.ಕೆ.ಎಸ್.ಬಿ.ವಿ ವಿದ್ಯಾರ್ಥಿಗಳಿಂದ ಪ್ರತಿಭಾ ಕಾರಂಜಿ ನಡೆಯಿತು ಸಮಾರಂಭದಲ್ಲಿ ಜಮಾಅತ್ ಪ್ರಧಾನ ಕಾರ್ಯದರ್ಶಿ ಲಿಯಾಕತ್ ಜೊತೆ ಕಾರ್ಯದರ್ಶಿಗಳಾದ ಮುಹಮ್ಮದ್ ಹುಸೈನ್ ಮೂಲ್ಕಿ, ರಿಜ್ವಾನ್ ಬಪ್ಪನಾಡು, ಫಾರೂಕ್ ಹಾಜಿ, ಉಪಾಧ್ಯಕ್ಷರಾದ ಅಮಾನುಲ್ಲಾ, ನುಸ್ರತುಲ್ ಮಸಾಕೀನ್ ಅಧ್ಯಕ್ಷರಾದ ಎಮ್.ಎ ಅಮಾನುಲ್ಲಾ, ಕಾರ್ಯದರ್ಶಿ ಅಬ್ದುಲ್‌ರಝಾಕ್ ದೊಡ್ಡಮನೆ, ಹಸನ್ ಬಾವ, ಎಮ್.ಕೆ ಹುಸೈನ್ ಕಾರ್ನಾಡು, ಮದ್ರಸ ಶಿಕ್ಷಕರಾದ ಅಬ್ದುಲ್ ರೆಹಮಾನ್ ಫೈಝಿ, ಶರೀಫ್,ಇಂದಾದಿ, ಹಮೀದ್ ಮುಸ್ಲಿಯಾರ್, ಮುಹಮ್ಮದ್ ಮುಸ್ಲಿಯಾರ್, ನಾಲೂರು ಬಾವಾಕ, ಎಸ್.ಕೋಡಿ ಬಾವಾಕ ಉಪಸ್ಥಿತರಿದ್ದರು ಸುರತ್ಕಲ್ ರೇಂಜ್ ಅಧ್ಯಕ್ಷರಾದ ಅಬ್ದುಲ್ಲ ದಾರಿಮಿ ಬೈತಡ್ಕ ಸ್ವಾಗತಿಸಿದರು. ಹೈದರ್‌ಆಲಿ ಮುಸ್ಲಿಯಾರ್ ಚೊಕ್ಕಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಚಿತ್ರ:ಎಂಯುಎಲ್_ಜ.೯_೫ ಶಾಸಕ ಮೊದಿನ್ ಬಾವ ಮಾತನಾಡುತ್ತಿದ್ದಾರೆ.

Bhagyavan Sanil

Mulki-09011502

Comments

comments

Comments are closed.

Read previous post:
Mulki-09011501
ಅರ್ಹರಿಗೆ ದಾನ ನೀಡಬೇಕು

ಮೂಲ್ಕಿ: ಸ್ವಗಳಿಕೆಯ ಸಂಪನ್ಮೂಲದ ಅಂಶವನ್ನು ಅರ್ಹರಿಗೆ ದಾನ ಮಾಡುವ ಮೂಲಕ ಜೀವನದಲ್ಲಿ ಸಂತೋಷ ಶಾಂತಿ ಕಂಡುಕೊಳ್ಳಲು ಸಾಧ್ಯವಿದೆ ಎಂದು ಸಿ.ಎಸ್.ಐ ದಕ್ಷಿಣ ದರ್ಮ ಸಭೆಯ ಧಮಾಧ್ಯಕ್ಷರಾದ ರೈಟ್...

Close