ಐಕಳ ಕಂಬಳದೊಂದಿಗೆ ಜಾನಪದ ಕ್ರೀಡಾ ಮೇಳ

kambula

ಕಿನ್ನಿಗೋಳಿ: ಐಕಳಬಾವ ಕಾಂತಾಬಾರೆ- ಬೂದಾಬಾರೆ ಐಕಳ ಕಂಬಳ ಹಾಗೂ ಐಕಳೋತ್ಸವ ಜ. 24 ರಂದು ನಡೆಯಲಿದೆ ಹಾಗೂ ಜ. 17 ರಂದು ಜಾನಪದ ಕ್ರೀಡಾಮೇಳ ನಡೆಯಲಿದೆ ಎಂದು ಐಕಳ ಕಂಬಳ ಸಮಿತಿಯ ಅಧ್ಯಕ್ಷ ಐಕಳಬಾವ ಡಾ| ದೇವಿಪ್ರಸಾದ್ ಶೆಟ್ಟಿ ಯವರು ಶನಿವಾರ ಐಕಳ ಭಾವದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜನವರಿ 24 ರಂದು ನಡೆಯುವ ಕಂಬಳವನ್ನು ಅಂತರಾಷ್ಟ್ರೀಯ ವಾಸ್ತು ತಜ್ಞ, ವೈಜ್ಞಾನಿಕ ಜ್ಯೋತಿಷಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಅರವಿಂದ ಲಿಂಬಾವಳಿ ಸಹಿತ ವಿವಿಧ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.
ಸಾಯಂಕಾಲ ನಡೆಯುವ ಸಭಾ ಕಾರ್ಯಕ್ರಮವನ್ನು ಕೇಂದ್ರ ಸರಕಾರದ ಕಾನೂನು ಸಚಿವ ಸದಾನಂದ ಗೌಡ ಉದ್ಘಾಟಿಸಲಿದ್ದು. . ದ. ಕ. ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ. ಎನ್. ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ದ.ಕ. ಜಿಲ್ಲಾ ಉಸ್ತುವಾರಿ ಮತ್ತು ಅರಣ್ಯ ಸಚಿವ ಬಿ. ರಮಾನಾಥ ರೈ, ಯುವಜನ ಸೇವೆ ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ, ಆರೋಗ್ಯ ಸಚಿವ ಯು. ಟಿ. ಖಾದರ್, ದ.ಕ. ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್, ಬೆಂಗಳೂರಿನ ಉದ್ಯಮಿ ಪ್ರಕಾಶ್ ಶೆಟ್ಟಿ , ಮಾಜಿ ಅಡ್ವಕೇಟ್ ಜನರಲ್ ಬಿ. ವಿ. ಆಚಾರ್ಯ , ಕರ್ನಾಟಕ ಸರಕಾರದ ಬಿ. ಎಂ. ಟಿ. ಸಿ ಅಧ್ಯಕ್ಷ ನಾಭಿರಾಜ ಜೈನ್ ಮತ್ತಿತರರು ಭಾಗವಹಿಸಲಿರುವರು.

ಈ ಸಂದರ್ಭ ಉಭಯ ಜಿಲ್ಲೆಗಳ ತುಳುನಾಡಿನ ವಿಶೇಷ ಸಾಧಕರಾದ ಕರ್ನಾಟಕ ಸರಕಾರ ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಮುಲ್ಕಿ ರಾಷ್ಟ್ರೀಯ ಬಿಲ್ಲವ ಮಹಾ ಮಂಡಳಿ ಅಧ್ಯಕ್ಷ ಜಯ ಸಿ. ಸುವರ್ಣ, ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತ ಮನೋಹರ ಎಸ್.ಶೆಟ್ಟಿ, ಕಂಬಳ ಸಂರಕ್ಷಣೆ ಸಂಚಾಲಕ ಫ್ರೊ.ಕೆ.ಗುಣಪಾಲ ಕಡಂಬ, ಬೆಂಗಳೂರು ಬಂಟರ ಸಂಘ ಅಧ್ಯಕ್ಷ ಡಾ. ನರೇಶ್ ಶೆಟ್ಟಿ ಐಕಳಬಾವ, ಜಾನಪದ ಸಂಶೋಧಕ ಕೆ.ಎಲ್.ಕುಂಡಂತಾಯ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ರಾಜೀವ ಶೆಟ್ಟಿ ಎಡ್ತೂರು, ಕ್ರೀಡಾರತ್ನ ಪ್ರಶಸ್ತಿ ವಿಜೇತ ದೇವೇಂದ್ರ ಕೋಟ್ಯಾನ್ ಹಾಗೂ ದೇಹರ್ದಾಡ್ಯ ಪಟು ದೇವೀಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು. ಎಂದು ತಿಳಿಸಿದರು.
ಜನವರಿ 17 ರಂದು ಸ್ಥಳೀಯ ಐಕಳ ಏಳಿಂಜೆ , ಎಳತ್ತೂರು, ಉಳೆಪಾಡಿ, ತಾಳಿಪಾಡಿ, ಕೊಟ್ರಪಾಡಿ, ಕುದ್ರಿಪದವು ಗ್ರಾಮಸ್ಥರಿಗೆ ಕೆಸರುಗದ್ದೆ ಓಟ, ಕೃಷಿಗೆ ಸಂಬಂಧಪಟ್ಟ ವಸ್ತುಗಳ ಗುರುತಿಸುವಿಕೆ, ರಸಪ್ರಶ್ನೆ, ಈಜು ಸ್ಪರ್ಧೆ, ತೆಂಗಿನ ಮರ ಹತ್ತುವುದು, ತೆಪ್ಪಂಗಾಯಿ ಇನ್ನಿತರ ಕ್ರೀಡೆಗಳು ಮತ್ತು ಜಾನುವಾರು ಮೇಳ ಆಯೋಜಿಸಲಾಗುವುದು ಹಾಗೂ ಕಾರ್ಯಕ್ರಮದ ಉದ್ಘಾಟನೆಯನ್ನು ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಿನಿ ವಸಂತ್ ನೆರವೇರಿಸಲಿದ್ದಾರೆ. ಎಂದು ಐಕಳ ಕಂಬಳದ ಕಾರ್ಯಾಧ್ಯಕ್ಷ ಚಿತ್ತರಂಜನ್ ಭಂಡಾರಿ ತಿಳಿಸಿದರು.
ಐಕಳ ಕಂಬಳ ಸಮಿತಿಯ ಸಂಚಾಲಕ ಮುರಳೀಧರ ಶೆಟ್ಟಿ ಐಕಳ, ಉಪಾಧ್ಯಕ್ಷ ವೈ. ಯೋಗೀಶ್ ರಾವ್, ಸಂಘಟನಾ ಕಾರ್ಯದರ್ಶಿಗಳಾದ ಸಂಜೀವ ಶೆಟ್ಟಿ ಸ್ಥಳಂತ ಗುತ್ತು, ಶಶಿಧರ ಐಕಳ, ಕೋಶಾಧಿಕಾರಿ ಪ್ರಕಾಶ್‌ಶೆಟ್ಟಿ ಪಡುಹಿತ್ಲು, ಲೋಕೇಶ್ ಶೆಟ್ಟಿ ಮುಚ್ಚೂರು ಸುದ್ದಿ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments

comments

Comments are closed.

Read previous post:
Kateel-10011502
ಕಟೀಲಿನಲ್ಲಿ ಯಕ್ಷಗಾನ ಬಯಲಾಟ ರಂಗಸಂಭ್ರಮ ಆರಂಭ

ಕಟೀಲು : ಕಾಲದ ಒತ್ತಡವನ್ನು ನಿಭಾಯಿಸಿಕೊಂಡು ಯಕ್ಷಗಾನವನ್ನು ಸಕಾಲಿಕವಾಗಿ ಸಾರ್ವಕಾಲಿಕವಾಗಿಸಬೇಕು. ಯಕ್ಷಗಾನಕ್ಕೆ ಒಪ್ಪುವ ಹಾಗೆ ಬದಲಾವಣೆ ಅಗತ್ಯವಿದೆ ಎಂದು ಮಂಗಳೂರು ವಿವಿಯ ಡಾ. ಚಿನ್ನಪ್ಪ ಗೌಡ ಹೇಳಿದರು....

Close