ಕಟೀಲಿನಲ್ಲಿ ಯಕ್ಷಗಾನ ಬಯಲಾಟ ರಂಗಸಂಭ್ರಮ ಆರಂಭ

ಕಟೀಲು : ಕಾಲದ ಒತ್ತಡವನ್ನು ನಿಭಾಯಿಸಿಕೊಂಡು ಯಕ್ಷಗಾನವನ್ನು ಸಕಾಲಿಕವಾಗಿ ಸಾರ್ವಕಾಲಿಕವಾಗಿಸಬೇಕು. ಯಕ್ಷಗಾನಕ್ಕೆ ಒಪ್ಪುವ ಹಾಗೆ ಬದಲಾವಣೆ ಅಗತ್ಯವಿದೆ ಎಂದು ಮಂಗಳೂರು ವಿವಿಯ ಡಾ. ಚಿನ್ನಪ್ಪ ಗೌಡ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಸರಸ್ವತೀ ಸದನದಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿಯ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯುವ ಯಕ್ಷಗಾನ ಬಯಲಾಟ ರಂಗಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಕಾಡಮಿ ಅಧ್ಯಕ್ಷ ನಾಡೋಜ ಬೆಳಗಲ್ಲು ವೀರಣ್ಣ ಮಾತನಾಡಿ ಎರಡು ಮೂರು ಜಿಲ್ಲೆಗಳಲ್ಲಿ ಹುಟ್ಟಿಕೊಂಡ ಯಕ್ಷಗಾನ ಇವತ್ತು ವಿಶ್ವವ್ಯಾಪಿಯಾಗಿದೆ. ಇಲ್ಲಿನ ವೀರಪ್ಪ ಮೊಯ್ಲಿಯಂತಹವರೂ ತಾನು ಯಕ್ಷಗಾನಕ್ಕೆ ಗೆಜ್ಜೆ ಕಟ್ಟಿದ್ದೇನೆ ಎಂದು ಹೆಮ್ಮೆ ಪಡುತ್ತಾರೆ. ಆದರೆ ಉತ್ತರಕರ್ನಾಟಕದಲ್ಲಿ ರಾಜಕೀಯ ಹಾಗೂ ಜನರ ಅಸಡ್ಡೆಯ ಕಾರಣದಿಂದ ಮೂಡಲಪಾಯ, ದೊಡ್ಡಾಟ, ಸಣ್ಣಾಟದಂತಹ ಪ್ರಕಾರಗಳು ಬೆಳವಣಿಗೆ ಕಂಡಿಲ್ಲ ಎಂದು ವಿಷಾದಿಸಿದರು.
ಆಶಯ ಭಾಷಣ ಮಾಡಿದ ಅಕಾಡಮಿ ಸದಸ್ಯ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಯಕ್ಷಗಾನ ರಂಗಪ್ರಾಕಾರವನ್ನು ಇನ್ನಷ್ಟು ಪ್ರೋತ್ಸಾಹಿಸುವ ಹಿನ್ನಲೆಯಲ್ಲಿರಾಜ್ಯಾದ್ಯಂತ 16 ಕಡೆಗಳಲ್ಲಿ ರಂಗಸಂಭ್ರಮವನ್ನು ನಡೆಸುತ್ತಿದ್ದೇವೆ ಎಂದರು.
ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಕಸಾಪದ ಹರಿಕೃಷ್ಣ ಪುನರೂರು, ಪ್ರದೀಪಕುಮಾರ ಕಲ್ಕೂರ, ಶ್ರೀಮತಿ ಗೋಪಿಕಾ ಮಯ್ಯ, ರಮೇಶ್ ಭಟ್, ವಾಸುದೇವ ಶೆಣೈ ಮತ್ತಿತರರಿದ್ದರು.
ಅಕಾಡಮಿ ರಿಜಿಸ್ಟ್ರಾರ್ ಡಿ.ಆರ್.ಮೈಥಿಲಿ ಸ್ವಾಗತಿಸಿದರು. ಸದಸ್ಯ ತಾರಾನಾಥ ವರ್ಕಾಡಿ ವಂದಿಸಿದರು. ಸುಮಂಗಲಾ ರತ್ನಾಕರ್ ರಾವ್ ಕಾರ‍್ಯಕ್ರಮ ನಿರೂಪಿಸಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಹಾಗೂ ಶ್ರೀ ದುರ್ಗಾ ಮಕ್ಕಳ ಮೇಳದ ಸಹಯೋಗದಲ್ಲಿ ಈ ರಂಗ ಸಂಭ್ರಮ ನಡೆಯುತ್ತಿದೆ.
ಶುಕ್ರವಾರ ದುರ್ಗಾ ಮಕ್ಕಳ ಮೇಳದವರಿಂದ ಯಕ್ಷಗಾನ ಪಂಚವಟಿ, ಬೆಳಗಾವಿ ಅಥಣಿಯ ವೀರಭದ್ರೇಶ್ವರ ತಂಡದಿಂದ ಶ್ರೀ ಕೃಷ್ಣ ಪಾರಿಜಾತ, ಶಿವಮೊಗ್ಗ ಶ್ರೀ ಸಾಯಿ ಕಲಾ ಪ್ರತಿಷ್ಟಾನದಿಂದ ಬಡಗುತಿಟ್ಟು ಯಕ್ಷಗಾನ ದಕ್ಷಯಜ್ಞ ಪ್ರದರ್ಶನಗೊಂಡಿತು.

Mithuna Kodethuru

Kateel-10011501 Kateel-10011502

Comments

comments

Comments are closed.

Read previous post:
Kinnigoli-09011503
ಗುತ್ತಕಾಡು ಭವನಕ್ಕೆ ಕುರ್ಚಿ ಕೊಡುಗೆ

ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯಿತಿಯ ಪರಿಶಿಷ್ಟ ಜಾತಿ-ಪಂಗಡದ ಅನುದಾನದಿಂದ ಗುತ್ತಕಾಡು ಕೊರಗರ ಸಮುದಾಯ ಭವನಕ್ಕೆ ಸುಮಾರು 25000ರೂಪಾಯಿ ಮೊತ್ತದ ಕುರ್ಚಿಗಳನ್ನು ಪಂಚಾಯಿತಿ ಅಧ್ಯಕ್ಷೆ ಶ್ಯಾಮಲ ಪಿ ಹೆಗ್ಡೆ...

Close