ವಾರ್ಷಿಕೋತ್ಸವ ಹಾಗೂ ಪ್ರತಿಭಾ ಸಂಗಮ-2015

Mulki-12011501

ಮೂಲ್ಕಿ: ಮೂಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘ, ಶ್ರೀ ನಾರಾಯಣ ಗುರು ಮಹಿಳಾ ಮಂಡಳಿ ಮತ್ತು ಶ್ರೀ ನಾರಾಯಣ ಗುರು ಸೇವಾ ದಳದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಸಂಗಮ-2015 ಕಾರ್ಯಕ್ರಮವು ಜನವರಿ 18ರಂದು ಮೂಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದ ರುಕ್ಕರಾಮ ಸಾಲ್ಯಾನ್ ಸಭಾಗೃಹದಲ್ಲಿ ಜರಗಲಿದೆ.
ಜನವರಿ 18ರ ಬೆಳಿಗ್ಗೆ ಜರಗಲಿರುವ ಪ್ರತಿಭಾ ಸಂಗಮ ಸಮಾರಂಭದ ಉದ್ಘಾಟನೆಯನ್ನು ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ ನೆರವೇರಿಸಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಹರಿಶ್ಚಂದ್ರ ಪಿ ಸಾಲ್ಯಾನ್ ವಹಿಸಲಿದ್ದಾರೆ. ಸಾಹಿತಿ ಉಡುಪಿಯ ಅಂಶುಮಾಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದು ಸಂಘದ ಶ್ರೀ ನಾರಾಯಣ ಗುರು ಮಹಿಳಾ ಮಂಡಳಿಯ ಅಧ್ಯಕ್ಷೆ ಸರಸ್ವತಿ ಸುವರ್ಣ ಮತ್ತು ಶ್ರೀ ನಾರಾಐ ಗುರು ಸೇವಾ ದಳದ ದಳಪತಿ ಸತೀಶ್ ಅಂಚನ್ ಉಪಸ್ಥಿತರಿರುವರು.
ಬೆಳಿಗ್ಗೆಯಿಂದ ಸಂಜೆಯವರೆಗೆ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ವ್ಯಾಪ್ತಿಯ ಶ್ರೀ ನಾರಾಯಣ ಗುರು ಕ್ರಿಯಾ ಸಮಿತಿಯ ಸದಸ್ಯರಿಂದ ಪ್ರತಿಭಾ ಸಂಗಮ-2015 ಸಾಂಸ್ಕ್ರತಿಕ ವೈವಿಧ್ಯ ಪ್ರದರ್ಶನ ಜರಗಲಿದೆ. ಸಂಜೆ 4ರಿಂದ 5 ರವರೆಗೆ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘ, ಶ್ರೀ ನಾರಾಐ ಗುರು ಮಹಿಳಾ ಮಂಡಳಿ ಮತ್ತು ಶ್ರೀ ನಾರಾಯಣ ಗುರು ಸೇವಾ ದಳದ ಸದಸ್ಯರಿಂದ ಪರಮಾನಂದ ಸಾಲ್ಯಾನ್ ಸಸಿಹಿತ್ಲು ರಚನೆ, ನಿರ್ದೇಶನದ ಬಲಿದಾನ ತುಳು-ಕನ್ನಡ ಗೀತಾ ರೂಪಕ ಪ್ರದರ್ಶನ ನಡೆಯಲಿದೆ. ಸಂಜೆ 5 ರಿಂದ ಜರಗಲಿರುವ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಡಿಸೆಂಬರ್ 14ರಂದು ಶ್ರೀ ನಾರಾಯಣ ಗುರು ಸೇವಾ ದಳದ ಸಂಯೋಜನೆಯಲ್ಲಿ ನಡೆದ ಕ್ರಿಕೆಟ್ ಪಂದ್ಯಾಟ ಹಾಗೂ ಡಿಸೆಂಬರ್ 21ರಂದು ವಾರ್ಷಿಕೋತ್ಸವದ ಪ್ರಯುಕ್ತ ಜರಗಿದ ಕಾಂತಾ ಬಾರೆ-ಬೂದಾಬಾರೆ ಕ್ರೀಡೋತ್ಸವದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಆಧ್ಯಕ್ಷ ಹರಿಶ್ಚಂದ್ರ ಪಿ ಸಾಲ್ಯಾನ್ ವಹಿಸಲಿದ್ದು ರಾಷ್ತ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಜಯ ಸಿ ಸುವರ್ಣ ಬಹುಮಾನ ವಿತರಣೆ ಮಾಡಲಿದ್ದಾರೆ. ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ಮತ್ತು ನಿಕಟಪೂರ್ವಾಧ್ಯಕ್ಷ ಉಮಾನಾಥ ಕೋಟ್ಯಾನ್ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದು
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕೆ ಸುಂದರ ಸುವರ್ಣ ಕೊಕ್ಕರ್ ಕಲ್, ಆನಂದ ದೇವಾಡಿಗ ಮತ್ತು ಭಾಸ್ಕರ ಸಫಳಿಗರನ್ನು ಸನ್ಮಾನಿಸಲಾಗುವುದೆಂದು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಹರಿಶ್ಚಂದ್ರ ಪಿ ಸಾಲ್ಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Prakash Suvarna

Comments

comments

Comments are closed.

Read previous post:
Kinnigoli--10011503
ಪಿಡಿಓ ಗಣೇಶಪ್ಪ ಬಿ ಬಡಿಗೇರ ಸನ್ಮಾನ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯಿಂದ ವರ್ಗಾವಣೆಗೊಂಡ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಣೇಶಪ್ಪ ಬಿ ಬಡಿಗೇರ ಅವರನ್ನು ಮೆನ್ನಬೆಟ್ಟು ಪಂಚಾಯಿತಿ ಸದಸ್ಯರ ಹಾಗೂ ಭ್ರಾಮರಿ ಮಹಿಳಾ ಸಮಾಜದ ವತಿಯಿಂದ...

Close