ಕಟೀಲು : ಯಕ್ಷಗಾನ ಸಮಾರೋಪ

ಕಟೀಲು : ಅಕಾಡಮಿ ಇರುವುದು ಅಧ್ಯಯನ, ಸಂಶೋಧನೆ, ಪ್ರಕಾಶನದಂತಹ ಅಕಾಡೆಮಿಕ್ ಚಟುವಟಿಕೆಗಳಿಗೆ. ಪ್ರದರ್ಶನಗಳನ್ನು ಆಯೋಜಿಸುವುದಕ್ಕಲ್ಲ. ಪ್ರಶಸ್ತಿ, ಅನುದಾನಗಳನ್ನು ನೀಡುವಾಗ ಅಕಾಡಮಿ ಅಧ್ಯಕ್ಷರ ನಿರ್ಧಾರ ಸರಿಯಾಗಿರಬೇಕು. ಅಕಾಡಮಿಗೆ ತನ್ನ ಕಾರ‍್ಯಕ್ರಮಗಳ ಬಗ್ಗೆ ಖಚಿತತೆ ಇರಲಿ ಎಂದು ಡಾ.ಪ್ರಭಾಕರ ಜೋಷಿ ಹೇಳಿದರು.
ಅವರು ಭಾನುವಾರ ಕಟೀಲು ಸರಸ್ವತೀ ಸದನದಲ್ಲಿ ದೇವಸ್ಥಾನ, ಶ್ರೀ ದುರ್ಗಾ ಮಕ್ಕಳ ಮೇಳ ಹಾಗೂ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿಯ ಪ್ರಾಯೋಜಕತ್ವದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಯಕ್ಷಗಾನ ಬಯಲಾಟ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಅವರು ಹೇಳಿದ್ದು; ಯಕ್ಷಗಾನ ಕಲೆಯನ್ನು ಸಂರಕ್ಷಣ, ಸಂವರ್ಧನ, ವಿಸ್ತರಣ ಅಗತ್ಯವಿದೆ. ಕರಾವಳಿಯಲ್ಲಿ 40ವೃತ್ತಿ ಮೇಳಗಳು, 100 ಹವ್ಯಾಸಿ ಮೇಳಗಳಿವೆ ಆದರೆ ಯಕ್ಷಗಾನ ಟ್ರೆಂಡ್‌ಗಳ ಹಿಂದೆ ಹೋಗುತ್ತಿದೆ. ಶಾಲೆಗಳಲ್ಲಿ ಯಕ್ಷಗಾನ ಕಲಿಸಲಾಗುತ್ತಿರುವುದು ಸರಿ, ಆದರೆ ಯಕ್ಷಗಾನ ಶಾಲೆಗಳ ಗತಿ ಏನು? ಕಲಾವಿದರೆ ಕಲೆಯ ನಾಶಕ್ಕೆ ಕಾರಣ. ಕಟೀಲಿನ ಆರು ಮೇಳಗಳಲ್ಲಿ ಒಂದಾದರೂ ತುಳು ಪ್ರದರ್ಶನವನ್ನು ನೀಡುವಂತಾಗಬೇಕು. ಗೆಜ್ಜೆ ಬ್ಯಾಂಕ್, ಡ್ರೆಸ್ ಬ್ಯಾಂಕ್‌ಗಳ ಸ್ಥಾಪನೆ ಯಕ್ಷಗಾನ ಮೇಳಗಳಿಗಾಗಿ ಮಾಡಬೇಕು. ದುರ್ಸು ಗರ್ನಲು ಬೇಡ ಎಂದು ಪ್ರತಿಪಾದಿಸಿದರು.
ವಿದ್ವಾನ್ ಪಂಜ ಭಾಸ್ಕರ ಭಟ್ ಮಾತನಾಡಿ ಯಕ್ಷಗಾನ ಮೇಳಗಳು ದೇಗುಲಗಳ ಆಶ್ರಯದಲ್ಲೇ ಉಳಿದು ಬೆಳೆಯುತ್ತಿವೆ. ಕಟೀಲಿನ ಮೇಳದ ಬಯಲಾಟವೆಂದರೆ ಉತ್ಸವವಿದ್ದಂತೆ. ಹಾಗಾಗಿ ಭಕ್ತರು ಬ್ಯಾಂಡು ಗರ್ನಲನ್ನು ವೈಭವಕ್ಕಾಗಿ ಬಳಸುತ್ತಾರೆಯೇ ಹೊರತು ಆಟವನ್ನು ಹಾಳು ಮಾಡುವುದಕ್ಕಲ್ಲ ಎಂದರು.
ಶ್ರೀಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ ಬದಲಾವಣೆ ಒಮ್ಮಿಂದೊಮ್ಮೆಲೆ ಮಾಡಲಾಗುವುದಿಲ್ಲ. ದೇಗುಲಗಳಿಂದ ಮೇಳಗಳು ನಡೆಯುತ್ತಿರುವುದರಿಂದ ಬದಲಾವಣೆ ಭಕ್ತರ ಆಕ್ರೋಶಕ್ಕೆ ಕಾರಣವಾಗಬಹುದು. ಮನ ಒಲಿಕೆ ಮೂಲಕ ಬದಲಾವಣೆ ಮಾಡಿ ಕಲಾ ರಕ್ಷಣೆ ಮಾಡಬೇಕಾಗುತ್ತದೆ. ತುಳು ಯಕ್ಷಗಾನ ಮೇಳಗಳು ಉಳಿಯುವುದು ಕಷ್ಟ. ಹಾಗಾಗಿ ಆಪ್ರಯತ್ನ ಅಷ್ಟು ಸುಲಭವಲ್ಲ. ಆಟ ನೋಡಿದರೆ, ವೇಷ ಹಾಕಿದರೆ ರಂಗ ಪೂಜೆ ಮಾಡಿಸುವಂತಹ ಸ್ಥಿತಿ ಬದಲಾಗಿ ಅದೊಂದು ಸೇವೆಯ ರೂಪ ಬಂದಿದೆ ಎಂದರು.
ಅಕಾಡಮಿ ಸದಸ್ಯ ಕೆ.ಎಂ.ಶೇಖರ್ ಯಕ್ಷಗಾನ ಅಕಾಡಮಿ ಪ್ರತ್ಯೇಕವಾಗಬೇಕು. ಕಲಾವಿದರ ಸಮೀಕ್ಷೆ ಮಾಡಲಿದ್ದೇವೆ ಎಂದರು.
ಸಚಿವ ಅಭಯಚಂದ್ರ ಜೈನ್, ಅಕಾಡಮಿ ಮಾಜಿ ಅಧ್ಯಕ್ಷ ಎಂ.ಎಲ್.ಸಾಮಗ, ಡಾ.ಎನ್. ನಾರಾಯಣ ಶೆಟ್ಟಿ, ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ,  ಅನಂತಪದ್ಮನಾಭ ಆಸ್ರಣ್ಣ, ಉಬರಡ್ಕ ಉಮೇಶ್ ಶೆಟ್ಟಿ ಮತ್ತಿತರರಿದ್ದರು. ವಾಸುದೇವ ಶೆಣೈ ಕಾರ‍್ಯಕ್ರಮ ನಿರೂಪಿಸಿದರು. ಅಕಾಡಮಿ ಸದಸ್ಯ ತಾರಾನಾಥ ವರ್ಕಾಡಿ ವಂದಿಸಿದರು.
ಬಳಿಕ ಉಜಿರೆ ಬಿಂದು ಹವ್ಯಾಸಿ ಮಹಿಳಾ ಯಕ್ಷಗಾನ ತಂಡದಿಂದ ನರಕಾಸುರ ಮೋಕ್ಷ ಪ್ರದರ್ಶನಗೊಂಡಿತು.
ಮಹಿಳಾ ಯಕ್ಷಗಾನ ಉಗಮ ಮತ್ತು ವಿಕಾಸ ಹಾಗೂ ಮಹಿಳಾ ಮೇಳ ಕಲಾತ್ಮಕತೆ ಮತ್ತು ಕಲಾ ಪ್ರಸರಣ ವಿಚಾರಗೋಷ್ಟಿಯಲ್ಲಿ ಡಾ.ನಾಗವೇಣಿ ಮಂಚಿ, ಲೀಲಾವತೀ ಬೈಪಾಡಿತ್ತಾಯ, ವಿದ್ಯಾ ಕೋಳ್ಯೂರು, ವಿದ್ಯಾ ರಮೇಶ್ ಭಟ್, ದುರ್ಗಾಪರಮೇಶ್ವರೀ ಕುಕ್ಕಿಲ, ಸುಮಂಗಲಾ ರತ್ನಾಕರ್, ಶಯಭದಾ ಶೆಟ್ಟಿ, ಉಷಾ ನಾಯಕ್, ಮಂಜುಳಾ ಶೆಟ್ಟಿ, ಮಾಲಿನಿ ಅಂಚನ್, ಅಪೂರ್ವ ಸುರತ್ಕಲ್ ಭಾಗವಹಿಸಿದ್ದರು.

Mithuna Kodethuru

Mulki-12011503

Comments

comments

Comments are closed.

Read previous post:
Kateel-12011502
ಕಟೀಲು: ಮಿತ್ತಬೈಲ್ ಶ್ರಮದಾನ

ಕಟೀಲು: ಮಿತ್ತಬೈಲ್ ಶ್ರೀ ಧೂಮಾವತಿ ದೈವಸ್ಥಾನದ ವಠಾರದಲ್ಲಿ ಅಜಾರು ಕಟೀಲು ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಶ್ರಮದಾನ ನಡೆಯಿತು . ಈ ಸಂದರ್ಭ ಅಜಾರು ಬಿಲ್ಲವ ಸಮಾಜ...

Close