ದರ್ಗಾ ಶರೀಫ್ ಸಸಿಹಿತ್ಲು,ಮುಕ್ಕ ಉರೂಸ್

ಹಳೆಯಂಗಡಿ: ಹಝ್ರತ್ ಸುಲ್ತಾನ್ ಸೈಯದ್ ಫತಾಹ್ ವಲಿಯುಲ್ಲಾ ದರ್ಗಾ ಶರೀಫ್ ಸಸಿಹಿತ್ಲು,ಮುಕ್ಕ ಇದರ ಉರೂಸ್ ಯಾನೆ ನೇರ್ಚ ಕಾರ್ಯಕ್ರಮದ ಸಮಾರೋಪ ಸಮಾರಂಭ ಆದಿತ್ಯವಾರ ದರ್ಗಾ ವಠಾರದಲ್ಲಿ ನಡೆಯಿತು.
ಸಮಾರಂಭದ ಉದ್ಘಾಟನೆಯನ್ನು ಚೊಕ್ಕಬೆಟ್ಟು ಜುಮಾ ಮಸೀದಿಯ ಖತೀಬ್ ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ನೆರವೇರಿಸಿದರು. ಅಧ್ಯಕ್ಷತೆಯನ್ನು ಸುರತ್ಕಲ್ ಲಿಬರ್ಟಿ ಗಾರ್ಡನ್ ಮಾಲಕ ಎಸ್. ಉಮರ್ ಲಿಬರ್ಟಿ ವಹಿಸಿದ್ದರು. ಅಸೈಯದ್ ಅಲ್ಹಾಜ್ ಜಾಫರ್‌ಸ್ವಾದೀಕ್ ತಂಙಳ್ ಕುಂಬೋಳ್ ದುವಾ ಆಶೀರ್ವಚನಗೈದರು. ಮಂಗಳೂರು ಉತ್ತರ ವಲಯ ಶಾಸಕ ಮೊಯ್ದಿನ್ ಬಾವಾ, ಬಾವಾ ಫಿಶ್‌ಮಿಲ್‌ನ ಮಾಲಕ ಹಾಜೀ ರಿಯಾಝ್ ಅಬ್ದುಲ್ ಖಾದರ್, ಎಚ್‌ಕೆಎ ಫಿಶ್‌ಮಿಲ್ ಮಾಲಕ ಹಾಜೀ ಆರೀಫ್ ಬಾವಾ, ಹಳೆಯಂಗಡಿ ಉರೂಸ್ ಸಮಿತಿ ಅಧ್ಯಕ್ಷ ಜೆ.ಸಾಹುಲ್ ಹಮೀದ್ ಕದಿಕೆ, ಶೋಬೇಂದ್ರ ಸಸಿಹಿತ್ಲು, ಸಿರಾಜ್ ಕುಳೂರು, ಹಾರಿಸ್ ಮರೈನ್‌ನ ಹಾಜಿ ರಝಾಕ್, ಹಳೆಯಂಗಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಎ.ಎಚ್ ವಸಂತ್ ಬೆರ್ನಾರ್ಡ್, ಇದಿನಬ್ಬ, ಹಳೆಯಂಗಡಿ ಗ್ರಾ.ಪಂ. ಉಪಾಧ್ಯಕ್ಷ ಅಬ್ದುಲ್ ಖಾದರ್, ಹಾಜೀ ಎಂ.ಎಸ್. ಅಹ್ಮದ್ ಬಾವಾ ಇಡ್ಯಾ ಉಪಸ್ಥಿತರಿದ್ದರು.

Abdul Rahman Haleangadi

Kinnigoli-12011511

Comments

comments

Comments are closed.

Read previous post:
Mulki-12011503
ಕಟೀಲು : ಯಕ್ಷಗಾನ ಸಮಾರೋಪ

ಕಟೀಲು : ಅಕಾಡಮಿ ಇರುವುದು ಅಧ್ಯಯನ, ಸಂಶೋಧನೆ, ಪ್ರಕಾಶನದಂತಹ ಅಕಾಡೆಮಿಕ್ ಚಟುವಟಿಕೆಗಳಿಗೆ. ಪ್ರದರ್ಶನಗಳನ್ನು ಆಯೋಜಿಸುವುದಕ್ಕಲ್ಲ. ಪ್ರಶಸ್ತಿ, ಅನುದಾನಗಳನ್ನು ನೀಡುವಾಗ ಅಕಾಡಮಿ ಅಧ್ಯಕ್ಷರ ನಿರ್ಧಾರ ಸರಿಯಾಗಿರಬೇಕು. ಅಕಾಡಮಿಗೆ ತನ್ನ...

Close