ಕೆಮ್ರಾಲ್ ರಾಜೀವ ಗಾಂಧಿ ಸೇವಾ ಕೇಂದ್ರ ಉದ್ಘಾಟನೆ

ಕಿನ್ನಿಗೋಳಿ : 2015-16 ನೇ ಬಜೆಟ್‌ನಲ್ಲಿ ಉಭಯ ಜಿಲ್ಲೆಗಳ ಕುಡಿಯುವ ನೀರಿನ ಯೋಜನೆಗಾಗಿ 800 ಕೋಟಿ ರೂ. ಗಳ ಅನುದಾನ ನೀಡುವಂತೆ ಮಾನ್ಯ ಮುಖ್ಯ ಮಂತ್ರಿಗಳಿಗೆ ಒತ್ತಾಯಿಸಲಾಗಿದೆ ಎಂದು ಯುವಜನ ಸೇವೆ ಕ್ರೀಡಾ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.
ಸೋಮವಾರ ಕೆಮ್ರಾಲ್ ಗ್ರಾಮ ಪಂಚಾಯಿತಿನಲ್ಲಿ ನಿರ್ಮಾಣಗೊಂಡ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಕೆಮ್ರಾಲ್ ಗ್ರಾ. ಪಂ. ವ್ಯಾಪ್ತಿಯಲ್ಲಿ ಸುಮಾರು 3.5 ಕೋಟಿ ರೂ ವೆಚ್ಚದಲ್ಲಿ ಪಂಜ ರಸ್ತೆಯ ಅಭಿವೃದ್ಧಿ ಕಾಮಾಗಾರಿ ನಡೆಯುತ್ತಿದೆ, ಮುಂದಿನ ಹಂತಗಳಲ್ಲಿ ಪಂಜದಲ್ಲಿ ನಂದಿನಿ ನದಿಗೆ ಸೇತುವೆ ನಿರ್ಮಾಣ, ಅತ್ತೂರು ಹಾಗೂ ಇನ್ನಿತರ ಕೊಂಡಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.
ಕೆಮ್ರಾಲ್ ಗ್ರಾ. ಪಂ. ಅಧ್ಯಕ್ಷೆ ರೇವತಿ ಅಧ್ಯಕ್ಷತೆ ವಹಿಸಿದ್ದರು.
ದ.ಕ. ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್, ದ.ಕ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಜಿ. ಪಂ. ಸದಸ್ಯ ಈಶ್ವರ್ ಕಟೀಲ್, ತಾ. ಪಂ. ಸದಸ್ಯರಾದ ಸಾವಿತ್ರಿ ಜಿ. ಸುವರ್ಣ, ಬೇಬಿ ಸುಂದರ ಕೋಟ್ಯಾನ್, ಜಿಲ್ಲಾ ಪಂಚಾಯಿತಿ ಕಿರಿಯ ಅಭಿಯಂತರ ಪ್ರಶಾಂತ್ ಆಳ್ವ ಉಪಸ್ಥಿತರಿದ್ದರು.
ಪಿಡಿಒ ರಮೇಶ್ ರಾಥೋಡ್ ಸ್ವಾಗತಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-12011505 Kinnigoli-12011506 Kinnigoli-12011507 Kinnigoli-12011508 Kinnigoli-12011509 Kinnigoli-12011510

Comments

comments

Comments are closed.

Read previous post:
Kinnigoli-12011504
ಪದ್ಮನೂರು ಈದ್ ಮಿಲಾದ್ ಆಚರಣೆ

 ಕಿನ್ನಿಗೋಳಿ : ಸೇವೆ ಹಾಗೂ ಸೌಹಾರ್ಧತೆಯನ್ನು ಮೈಗೂಡಿಸಿದಾಗ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಪತ್ರಕರ್ತ ಶರತ್ ಶೆಟ್ಟಿ ಹೇಳಿದರು. ಪದ್ಮನೂರು ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿ ಆಶ್ರಯದಲ್ಲಿ...

Close