ಕಿನ್ನಿಗೋಳಿ : ಜಿಎಸ್‌ಬಿ ಸಮಾವೇಶ ಸಿದ್ಧತಾ ಸಭೆ

ಕಿನ್ನಿಗೋಳಿ: ಉಡುಪಿ ಜಿಲ್ಲೆಯಲ್ಲಿ ನಡೆದ ಜಿಎಸ್‌ಬಿ ಸಮಾವೇಶಕ್ಕೆ ಸಮಾಜ ಭಾಂದವರ ಉತ್ತಮ ಸ್ಪಂದನೆ ದೊರಕಿದೆ, ದ. ಕ. ಜಿಲ್ಲೆಯ ಬಿ. ಸಿ. ರೋಡ್ , ಪುತ್ತೂರು ಗಳಲ್ಲಿ ಮುಂದಿನ ಹಂತದಲ್ಲಿ ಸಮಾವೇಶ ನಡೆಸಿ 2016 ರಲ್ಲಿ ಮಂಗಳೂರು ಬೃಹತ್ ವಿಶ್ವ ಸಮಾವೇಶ ಮಾಡುವ ಉzಶ ಹಾಗೂ ಸಮಾಜ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು. ಎಂದು ಜಿಎಸ್‌ಬಿ ಹಿತರಕ್ಷಣಾ ವೇದಿಕೆಯ ಸಂಚಾಲಕ ಆರ್. ವಿವೇಕಾನಂದ ಶೆಣೈ ಹೇಳಿದರು.
ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಹಿತರಕ್ಷಣಾ ವೇದಿಕೆ ಮೂಡಬಿದರೆ ವಲಯದ ಆಶ್ರಯದಲ್ಲಿ ಕಿನ್ನಿಗೋಳಿ ಶ್ರೀ ರಾಮ ಮಂದಿರ ಸಭಾಗೃಹದಲ್ಲಿ ಶನಿವಾರ ನಡೆದ ಮೂಡಬಿದಿರೆಯ ವಲಯ ಸಮಾವೇಶದ ಸಿದ್ಧತಾ ಸಭೆಯಲ್ಲಿ ಮಾತನಾಡಿದರು.
ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಮಾತನಾಡಿ ಫೆಬ್ರವರಿ 1 ರಂದು ದ.ಕ ಜಿಲ್ಲೆಯಲ್ಲಿ ಪ್ರಥಮ ವಲಯ ಮಟ್ಟದ ಸಮಾವೇಶವನ್ನು ಮೂಡಬಿದಿರೆಯ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ನಮ್ಮ ಸಮಾಜ, ಸಂಘಟನಾ ಶಕ್ತಿಯೊಂದಿಗೆ ಜಾಗೃತಿ ಮೂಡಿಸಬೇಕು. ಜನವರಿ 31 ರಂದು ಸಮಾವೇಶದ ಪೂರ್ವಾಭಾವಿಯಾಗಿ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಮಾವೇಶ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಜಿ. ಉಮೇಶ್ ಪೈ , ಸಂಯೋಜಕ ಅಶೋಕ್ ಮಲ್ಯ, ಸಹ ಸಂಯೋಜಕ ರಾಮದಾಸ ಪೈ, ಹಿರಿಯ ಸಾಹಿತಿ ಕೆ. ಜಿ. ಮಲ್ಯ ಸಮಾವೇಶದ ರೂಪು ರೇಷೆಗಳ ವಿವರ ನೀಡಿದರು.
ಕಿನ್ನಿಗೋಳಿ, ಕಟೀಲು, ಬಜಪೆ, ನಿಡ್ಡೋಡಿ, ಕಲ್ಲಮುಂಡ್ಕೂರು, ದಾಮಸಕಟ್ಟೆ ವ್ಯಾಪ್ತಿಗೆ ಒಳಪಟ್ಟ ಜಿಎಸ್‌ಬಿ ಸಮಾಜದ ಮುಖ್ಯಸ್ಥರು ಉಪಸ್ಥಿತರಿದ್ದರು.
ಕಿನ್ನಿಗೋಳಿ ಜಿಎಸ್‌ಬಿ ಅಧ್ಯಕ್ಷ ಕೆ. ಅಚ್ಚುತ ಮಲ್ಯ ಸ್ವಾಗತಿಸಿ ರಾಜೇಶ್ ನಾಯಕ್ ವಂದಿಸಿದರು. ಸುರೇಂದ್ರನಾಥ ವಿ ಶೆಣೈ ಕಾರ್ಯಕ್ರಮ ನಿರೂಪಿಸಿದರು.

Kinnigoli-12011501 Kinnigoli-12011502 Kinnigoli-12011503

Comments

comments

Comments are closed.

Read previous post:
Kinnigoli-12011512
ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ ಭರತ್ ರಾಜ್‌ಧನ್ ಪ್ರಥಮ ಸ್ಥಾನ

ಹಳೆಯಂಗಡಿ: ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯ ಕುಮಿಟೆ ಮತ್ತು ಕಟಾ ವಿಭಾಗಗಳಲ್ಲಿ ಮಂಗಳೂರಿನ ”ವೇ ಆಫ್ ಟ್ರೆಡಿಶನಲ್ ಮಾರ್ಶಲ್ ಆರ್ಟ್ಸ್”ನ...

Close