ಏಷ್ಯಾದಲ್ಲಿಯೇ ಪ್ರಥಮ ಕರ್ನಾಟಕದ ಸಾಂತ್ವನ ಯೋಜನೆ

ಮುಲ್ಕಿ : ಕರ್ನಾಟಕದ ಯಾವುದೇ ಕಡೆ ಅಪಘಾತಕ್ಕೀಡಾದ ತಕ್ಷಣ ಸರಕಾರಿ ವೆಚ್ಚದಲ್ಲಿ ಉಚಿತ ತುರ್ತು ಚಿಕಿತ್ಸೆ ನೀಡುವ ಮುಖ್ಯಮಂತ್ರಿಗಳ ಸ್ವಾಂತನ ಯೋಜನೆ ಏಷ್ಯಾ ಖಂಡದಲ್ಲಿಯೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಪ್ರಾರಂಭಗೊಳ್ಳಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದರು.
ಮಂಗಳವಾರ ಮೂಲ್ಕಿ ಲಯನ್ಸ್ ಕ್ಲಬ್ ಮತ್ತು ಇತರ ದಾನಿಗಳ ಸಹಕಾರದಲ್ಲಿ ಲಯನ್ ಪ್ರಾಂತೀಯ ಅಧ್ಯಕ್ಷ ಹರೀಶ್ ಎನ್.ಪುತ್ರನ್‌ರ ಪ್ರಾಂತೀಯ ಸಮ್ಮೇಳನ “ಕನಸು” ಇದರ ಸವಿನೆನಪಿಗಾಗಿ ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಲಯನ್ಸ್ ಶೀತಲೀಕರಣ ಶವಾಗಾರ ಘಟಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಸಮಾಜಸೇವೆಯಲ್ಲಿ ಮುಂಚೂಣಿಯಲ್ಲಿರುವ ಲಯನ್ಸ್ ಸೇವೆಯನ್ನು ಶ್ಲಾಘಿಸಿದ ಸಮಾಜಕ್ಕೆ ಶಾಶ್ವತ ಸೇವೆ ನೀಡಲು ಸಮಾಜ ಸೇವಾ ಸಂಘಟನೆಗಳು ಮನಸ್ಸು ಮಾಡಬೇಕು ಈ ನಿಟ್ಟಿನಲ್ಲಿ ಮೂಲ್ಕಿ ಲಯನ್ಸ್ ಮಾದರಿಯಾಗಿದೆ ಎಂದ ಅವರು. ಮೂಲ್ಕಿ ಭಾಗದ ಮಲೇರಿಯಾ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.
ಶೀತಲೀಕರಣ ಘಟಕವನ್ನು ಯುವಜನ ಸೇವೆ ಮತ್ತು ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಚಾಲನೆಗೊಳಿಸಿದರು. 7 ಕೆವಿ ಜನರೇಟರನ್ನು ಲಯನ್ಸ್ ರಾಜ್ಯಪಾಲ ಎಚ್‌ಎಸ್ ಮಂಜುನಾಥ ಮೂರ್ತಿ ಉದ್ಘಾಟಿಸಿದರು. ಶ್ರೀ ಕ್ಷೇತ್ರ ಕಟೀಲಿನ ಅರ್ಚಕ ಕಟೀಲು ವೆಂಕಟರಮಣ ಅಸ್ರಣ್ಣ ಆಶೀರ್ವಚಿಸಿದರು.
ಈ ಸಂದರ್ಭ ಶೀತಲೀಕರಣ ಘಟಕದ ದಾನಿಗಳನ್ನು ಸನ್ಮಾನಿಸಲಾಯಿತು.

ವಿಧಾನ ಪರಿಷತ್ ಶಾಸಕ ಐವನ್ ಡೀಸೋಜಾ, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎ. ರಾಮಕೃಷ್ಣ ರಾವ್, ಮುಲ್ಕಿ ನಗರ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಬಂಗೇರ, ಮುಖ್ಯಾಧಿಕಾರಿ ವಾಣಿ ಆಳ್ವ, ಲಯನ್ ಮಾಜಿ ರಾಜ್ಯಪಾಲ ಹರಿಕೃಷ್ಣ ಪುನರೂರು, ಲಯನ್ ಉಪರಾಜ್ಯಪಾಲೆ ಕವಿತಾ ಶಾಸ್ತ್ರಿ, ವಲಯಾಧ್ಯಕ್ಷರುಗಳಾದ ಯಾದವ ದೇವಾಡಿಗ ಮತ್ತು ಎಡ್ವಿನ್, ದಾನಿ ಕೆಎಸ್ ಸೈಯದ್ ಕರ್ನಿರೆ, ಮಾನಿಷ್ ಕ್ಲಬ್ ಅಧ್ಯಕ್ಷ ಸುಜಿತ್ ಸಾಲ್ಯಾನ್, ಮುಲ್ಕಿ ನಾಲ್ಕು ಪಟ್ಣ ಮೊಗವೀರ ಸಭಾ ಅಧ್ಯಕ್ಷ ಎನ್‌ಡಿ ಬಂಗೇರ, ಕಿಶೋರ್ ಶೆಟ್ಟಿ ಬಪ್ಪನಾಡು, ಸಮ್ಮೇಳನ ಸಮಿತಿ ಅಧ್ಯಕ್ಷ ವಿಜಯಕುಮಾರ್ ಕುಬೆವೂರು, ಗೌರವಾಧ್ಯಕ್ಷ ಸರ್ವೋತ್ತಮ ಅಂಚನ್, ಕಾರ್ಯದರ್ಶಿ ಉದಯಕುಮಾರ್ ಮಟ್ಟು, ಕೋಶಾಧಿಕಾರಿ ಪ್ರಬೋಧ್ ಕುಡ್ವ, ಕೋಶಾಧಿಕಾರಿ ಸದಾಶಿವ ಹೊಸದುರ್ಗ, ಮುಲ್ಕಿ ಲಯನ್ಸ್ ಅಧ್ಯಕ್ಷ ದೇವಪ್ರಸಾದ್ ಪುನರೂರು, ಪಾಂಡುರಂಗ ಕಾಮತ್, ಡಾ.ಸವಿತಾ ಭವಾನಿಶಂಕರ್ ಮುಖ್ಯ ಅತಿಥಿಗಳಾಗಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಯನ್ ಪ್ರಾಂತೀಯ ಅಧ್ಯಕ್ಷ ಹರೀಶ್ ಎನ್.ಪುತ್ರನ್ sಸ್ವಾಗತಿಸಿ,ಪ್ರಸ್ತಾವನೆಗೈದರು. ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರ್ವಹಿಸಿದರು. ಸದಾಶಿವ ಹೊಸದುರ್ಗ ವಂದಿಸಿದರು.

Bhagyavan Sanil

Kinnigoli-13011501 Kinnigoli-13011502

Comments

comments

Comments are closed.

Read previous post:
Kinnigoli-12011505
ಕೆಮ್ರಾಲ್ ರಾಜೀವ ಗಾಂಧಿ ಸೇವಾ ಕೇಂದ್ರ ಉದ್ಘಾಟನೆ

ಕಿನ್ನಿಗೋಳಿ : 2015-16 ನೇ ಬಜೆಟ್‌ನಲ್ಲಿ ಉಭಯ ಜಿಲ್ಲೆಗಳ ಕುಡಿಯುವ ನೀರಿನ ಯೋಜನೆಗಾಗಿ 800 ಕೋಟಿ ರೂ. ಗಳ ಅನುದಾನ ನೀಡುವಂತೆ ಮಾನ್ಯ ಮುಖ್ಯ ಮಂತ್ರಿಗಳಿಗೆ ಒತ್ತಾಯಿಸಲಾಗಿದೆ ಎಂದು ಯುವಜನ...

Close