ಬಪ್ಪನಾಡು-ಕಾಲೇಜು ರಸ್ತೆ ಕಳಪೆ ಕಾಮಗಾರಿ

ಮೂಲ್ಕಿ: ಸುಮಾರು ಎರಡೂ ವರೆ ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಬಪ್ಪನಾಡು ರಾಷ್ಟ್ರೀಯ ಹೆದ್ದಾರಿಯಿಂದ ಒಳಗಡೆ ಏಳಿಂಜೆಯವರೆಗೆ ಹೋಗುವ ರಸ್ತೆ ವಿಜಯಾ ಕಾಲೇಜಿನವರೆಗೆ ಕಾಂಕ್ರಿಟೀಕರಣ ನಡೆಯುತ್ತಿದ್ದು ಕಳಪೆಯಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.ಇದಕ್ಕೆ ಸಾಕ್ಷಿ ಎಂಬಂತೆ ಕಾಲೇಜು ಬಳಿಯಿರುವ ಚಡಾವಿನಲ್ಲಿ ರಸ್ತೆಗೆ ಹಾಕಿದ ಕಾಂಕ್ರೀಟು ಒಡೆದು ಹೋಗಿದ್ದು ಸ್ಥಳೀಯರು  ಗುತ್ತಿಗೆ ದಾರನಿಗೆ ತಿಳಿಸಿ ಒಡೆದು ಹೋದ ಜಾಗವನ್ನು ತೆಗೆಸಿದ್ದಾರೆ.ಇಲ್ಲಿ ಕಾಂಕ್ರಿಟೀಕರಣ ನಿದಾನಗತಿಯಲ್ಲಿ ನಡೆಯುತ್ತಿದೆ.
ನಿದಾನಗತಿಯ ಕಾಮಗಾರಿ
ಬಪ್ಪನಾಡಿನಿಂದ ಏಳಿಂಜೆ ರಸ್ತೆಯ ಕವಾತ್ತಾರು ಗುಡ್ಡೆಯಂಗಡಿ ರಸ್ತೆ ಕಾಮಗಾರಿಯನ್ನು ಮಂಗಳೂರಿನ ಶರೀಫ್ ಕನ್ಟ್ರಕ್ಷನ್ಸ್ ವಹಿಸಿಕೊಂಡಿದೆ. ಕಾಮಗಾರಿ ಮಾತ್ರ ನಿದಾನಗತಿಯಲ್ಲಿ ನಡೆಯುತ್ತಿದ್ದು ಸ್ಥಳೀಯರು ಗುತ್ತಿಗೆದಾರನ ವಿರುದ್ದ ಪ್ರತಿಭಟನೆಗೆ ಸಜ್ಜಾಗುತ್ತಿದ್ದಾರೆ. ಮೂಲ್ಕಿ ಕಾಲೇಜಿನಿಂದ ಕವಾತ್ತಾರಿನ ಗುಡ್ಡೆಯಂಗಡಿಯವರೆಗೆ ಫೇವರ್ ಫಿನಿಶ್ ಡಾಮಾರೀಕರಣ ನಡೆಯಬೇಕಾಗಿದ್ದು ಇದಕ್ಕಾಗಿ ರಸ್ತೆಯಲ್ಲಿನ ಬೃಹದಾಕಾರದ ಹೊಂಡಗುಂಡಿಗಳನ್ನು ದೂಳು ತೆಗೆದು ಹಾಗೇಯೇ ಬಿಟ್ಟು ಒಂದು ವಾರವಾದರೂ ಡಾಮರೀಕರಣ ಮಾಡಿಲ್ಲ. ಇದರಿಂದ ವಾಹನಿಗರು, ದ್ವಿಚಕ್ರ ವಾಹನ ಸವಾರರು ಕಂಗಾಲಾಗಿದ್ದಾರೆ. ರಸ್ತೆಯ ಹೊಂಡಕ್ಕೆ ಬಿದ್ದು ಅನೇಕ ಸಣ್ಣಪುಟ್ಟ ಅಪಘಾತಗಳು ಕೂಡ ಸಂಭವಿಸಿದೆ. ಈ ಬಗ್ಗೆ ಸ್ಥಳೀಯ ಪಂಚಾಯತಿ ಸದಸ್ಯ ಮನೋಹರ ಕೋಟ್ಯಾನ್ ಗುತ್ತಿಗೆದಾರರೊಡನೆ ಮಾತನಾಡಿದಾಗ ಕೆಲಸಕ್ಕೆ ಜನ ಇಲ್ಲ ಎಂದು ಉಡಾಫೆಯಾಗಿ ಉತ್ತರ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಕಾಮಗಾರಿ ನಡೆಸುವಾಗ ಸ್ಥಳೀರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬೇಕಾಬಿಟ್ಟಿಯಾಗಿ ಕಳಪೆ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರನ ವಿರುದ್ದ ಸ್ಥಳೀಯರು ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಈ ಬಗ್ಗೆ ಸ್ಥಳೀಯ ಶಾಸಕರಿಗೆ ದೂರು ನೀಡುವುದೇ ಅಲ್ಲದೆ ಗುತ್ತಿಗೆದಾರನ ಕಳಪೆ ಹಾಗೂ ನಿದಾನಗತಿಯ ಕಾಮಗಾರಿ ವಿರುದ್ದ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Puneethakrishna

Kinnigoli--15011502 Kinnigoli--15011503

Comments

comments

Comments are closed.

Read previous post:
Kinnigoli--15011501
ಸ್ವಾಮಿ ವಿವೇಕಾನಂದ ನಮ್ಮ ಜೀವನದ ಮಾದರಿ

ಮೂಲ್ಕಿ: ಭಾರತದ ಸಂಸ್ಕೃತಿ ಮತ್ತು ಗೌರವವನ್ನು ವಿಶ್ವ ದೆಲ್ಲೆಡೆ ಪಸರಿಸಿದ ಸ್ವಾಮಿ ವಿವೇಕಾನಂದರನ್ನು ನಮ್ಮ ಜೀವನದ ಮಾದರಿ ವ್ಯಕ್ತಿಯಾಗಿಸಿಕೊಂಡಲ್ಲಿ ಸಶಕ್ತ ಯುವ ಸಮಾಜದ ಉದಯ ಸಾಧ್ಯ ಎಂದು...

Close