ಮಕರ ಸಂಕಾಂತಿ ತಾಳಮದ್ದಳೆ ಸಮ್ಮಾನ

ಕಿನ್ನಿಗೋಳಿ: ಯಕ್ಷಗಾನ ಜನರನ್ನು ಧಾರ್ಮಿಕವಾಗಿ ಪ್ರಜ್ಞಾವಂತರನ್ನಾಗಿ ಮಾಡುವ ಜೊತೆಗೆ ಜ್ಞಾನಸತ್ರವನ್ನು ಮಾಡುತ್ತಿದೆ ಈ ನಿಟ್ಟಿನಲ್ಲಿ ಇಲ್ಲಿನ ಯಕ್ಷಲಹರಿ-ಯುಗಪುರುಷ ಸಂಸ್ಥೆಯ ಕೆಲಸ ಶ್ಲಾಘನೀಯ ಎಂದು ಕರ್ಣಾಟಕ ಬ್ಯಾಂಕ್‌ನ ಮಹಾಪ್ರಬಂಧಕ ಜೈರಾಮ್ ಹಂದೆ ಹೇಳಿದರು. ಅವರು ಜ. ೧೪ ರಂದು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕಿನ್ನಿಗೋಳಿ ಯಕ್ಷಲಹರಿ (ರಿ)- ಯುಗಪುರುಷ, ಯಕ್ಷಲಹರಿ ( ರಿ) ರಜತವರ್ಷ ಸಂಭ್ರಮ -೨೦೧೫ ಮಕರ ಸಂಕ್ರಾಂತಿ ತಾಳಮದ್ದಳೆ ಹಾಗೂ ಸಂಮಾನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಯಕ್ಷಗಾನ ಸಂಘಟಕ ಕಲಾಪೋಷಕ ನಾರಾಯಣ ಪ್ರಭು ನಿಡ್ಡೋಡಿಯವರನ್ನು ಸಮ್ಮಾನಿಸಲಾಯಿತು. ಕಟೀಲಿನ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ , ಧರ್ಮದರ್ಶಿ ಹರಿಕೃಷ್ಣ ಪುನರೂರು ಮೂಡಬಿದಿರೆ ಧನಲಕ್ಷ್ಮೀಸಮೂಹ ಸಂಸ್ಥೆಗಳ ಸಂಸ್ಥಾಪಕ ಕೆ. ಶ್ರೀಪತಿ ಭಟ್, ಕರ್ನಾಟಕ ಬಯಲಾಟ ಅಕಾಡೆಮಿಯ ಸದಸ್ಯ ತಾರಾನಾಥ ಬಲ್ಯಾಯ, ಕಿನ್ನಿಗೋಳಿ ಸ್ಟೇಟ್ ಬ್ಯಾಂಕ್ ಪ್ರಬಂಧಕ ಕೇಶವ ನಾಯ್ಕ್, ಕೆನರಾ ಬ್ಯಾಂಕ್ ಹಿರಿಯ ಪ್ರಬಂಧಕ ಎನ್. ಸುಧಾಕರ್ , ಯಕ್ಷಲಹರಿಯ ಉಪಾಧ್ಯಕ್ಷ ಪಶುಪತಿ ಶಾಸ್ತ್ರಿ, ಉಪಸ್ಥಿತರಿದ್ದರು.ಯಕ್ಷಲಹರಿಯ ಅಧ್ಯಕ್ಷ ಇ. ಶ್ರೀನಿವಾಸ ಭಟ್ ಸ್ವಾಗತಿಸಿದರು. ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಪ್ರಸ್ತಾವನೆಗೈದರು. ಪ್ರೋ. ಜಗದೀಶ ಹೊಳ್ಳ ಅಭಿನಂದನಾ ಭಾಷಣಗೃದರು. ಡಾ|ರಾಧಾಕೃಷ್ಣ ಭಟ್ ಪೆರ್ಲ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಚೂಡಾಮಣಿ- ಉತ್ತರನ ಪೌರುಷ ತಾಳಮದ್ದಳೆ ನಡೆಯಿತು.

Raghunath Kamath

Kinnigoli--15011504

Comments

comments

Comments are closed.

Read previous post:
ಉಳೆಪಾಡಿ: ಉಚಿತ ಸಾಮೂಹಿಕ ವಿವಾಹ

ಕಿನ್ನಿಗೋಳಿ: ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಾಮ್ಮಯಿ ದೇವಾಲಯದಲ್ಲಿ ಮೇ. 25 ರಂದು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಜರಗಲಿದೆ. ಐದನೇ ವರ್ಷದ ಪ್ರತಿಷ್ಠಾ ವರ್ಧಂತಿಯ ಸಂದರ್ಭದಲ್ಲಿ ಕಾರ್ಯಕ್ರಮ...

Close