ಉಳೆಪಾಡಿ: ಉಚಿತ ಸಾಮೂಹಿಕ ವಿವಾಹ

ಕಿನ್ನಿಗೋಳಿ: ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಾಮ್ಮಯಿ ದೇವಾಲಯದಲ್ಲಿ ಮೇ. 25 ರಂದು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಜರಗಲಿದೆ. ಐದನೇ ವರ್ಷದ ಪ್ರತಿಷ್ಠಾ ವರ್ಧಂತಿಯ ಸಂದರ್ಭದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಧರ್ಮದರ್ಶಿ ಮೋಹನದಾಸ ಸುರತ್ಕಲ್ ತಿಳಿಸಿದ್ದಾರೆ. ತೀರಾ ಬಡವರ್ಗದವರಿಗಾಗಿ ಸಂಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ವಧುವಿಗೆ ಕರಿಮಣಿಸರ-ತಾಳಿ-ಸೀರೆ-ರವಕೆಕಣ, ಹಾಗೂ ವರನಿಗೆ ಪಂಚೆ-ಶಾಲು , ಪೇಟಾಗಳನ್ನು ನೀಡಲಾಗುವುದು. ವಧೂವರರ ಕಡೆಯಿಂದ ಗರಿಷ್ಟ ನೂರು ಮಂದಿಗೆ ಊಟೋಪಚಾರದ ವ್ಯವಸ್ಥೆಮಾಡಲಾಗುತ್ತಿದೆ. ಹಿಂದೂ ಧರ್ಮದ ಪ್ರಕಾರ ವಿವಾಹ ಆಗಲು ಬಯಸುವ ಅನ್ಯಧರ್ಮಿಯಾರಿಗೂ ಈ ಕಾರ್ಯಕ್ರಮದ ಸದುಪಯೋಗ ಪಡಯಬಹುದಾಗಿದೆ ವಿಚ್ಛೇದತರಿಗೂ ಅವಕಾಶ ಕಲ್ಪಿಸಲಾಗಿದೆ. ಆಸಕ್ತರು ಎಪ್ರಿಲ್ 25 ರ ಮೊದಲು ಈ ಕೆಳಗಿನ ದೂರವಾಣಿಗಳನ್ನು ಸಂಪರ್ಕಿಸಬಹುದು- 9945933837

Comments

comments

Comments are closed.

Read previous post:
Kinnigoli--15011503
ಬಪ್ಪನಾಡು-ಕಾಲೇಜು ರಸ್ತೆ ಕಳಪೆ ಕಾಮಗಾರಿ

ಮೂಲ್ಕಿ: ಸುಮಾರು ಎರಡೂ ವರೆ ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಬಪ್ಪನಾಡು ರಾಷ್ಟ್ರೀಯ ಹೆದ್ದಾರಿಯಿಂದ ಒಳಗಡೆ ಏಳಿಂಜೆಯವರೆಗೆ ಹೋಗುವ ರಸ್ತೆ ವಿಜಯಾ ಕಾಲೇಜಿನವರೆಗೆ ಕಾಂಕ್ರಿಟೀಕರಣ ನಡೆಯುತ್ತಿದ್ದು ಕಳಪೆಯಾಗಿದೆ...

Close