ಬಪ್ಪನಾಡಿನಲ್ಲಿ ಚಂಡಿಕಾಯಾಗ

ಮೂಲ್ಕಿ:  ರಾಜ್ಯ ಸರಕಾರದ ನಗರಾಬಿವೃದ್ದಿ ಸಚಿವರೂ ಉಡುಪಿ ಉಸ್ತುವಾರಿ ಸಚಿವರೂ ಆಗಿರುವ ವಿನಯ ಕುಮಾರ್ ಸೊರಕೆಯವರ ಕುಟುಂಬ ಸಮೇತರಾಗಿ ಮೂಲ್ಕಿಯ ಬಪ್ಪನಾಡು ದುರ್ಗಾಪರಮೇಶ್ವರಿ ದೇವಳದಲ್ಲಿ ಚಂಡಿಕಾಯಾಗ ಗುರುವಾರ ನಡೆದಿದೆ.
ಸಚಿವರ ಸಂಬಂದಿಗಳಾದ ಮೂಲ್ಕಿ ಸಮೀಪದ ಗೇರುಕಟ್ಟೆ ಬಸ್ಸು ಉದ್ಯಮಿಯವರು ಚಂಡಿಕಾ ಯಾಗಕ್ಕೆ ಸೂತ್ರದಾರಿಯಾಗಿದ್ದರು ಎನ್ನಲಾಗಿದೆ.ಪತ್ರಕರ್ತರು ಸಹಿತ ಯಾರಿಗೂ ತಿಳಿಸದೆ ಕೇವಲ ಕೆಲ ನೆಂಟರಿಷ್ಟರಿಗೆ ತಿಳಿಸಿ ಬೆಳಗ್ಗಿನಿಂದಲೇ ಬೃಹತ್ ಚಂಡಿಕಾ ಯಾಗ ಕ್ಷೇತ್ರದ ಪೌರೋಹಿತ್ಯರಿಂದ ದೇವಳದ ಒಳಭಾಗದಲ್ಲಿ ನಡೆಯಿತು.ಯಾಗ ಮುಗಿದ ಬಳಿಕ ಯಾಗ ನಡೆಯುತ್ತದೆ ಎಂಬ ಸುದ್ದಿಯೊಂದಿಗೆ ದೇವಳಕ್ಕೆ ಬಂದ ಪರ್ತಕರ್ತರೊಂದಿಗೆ ಮಾತನಾಡಿದ ಸಚಿವ ಸೊರಕೆ ಚುನಾಣೆ ಸಂದರ್ಭದಲ್ಲಿ ದೇವರಿಗೆ ಹರಕೆ ಹೊತ್ತಿದ್ದು ಅದರಂತೆ ಚಂಡಿಕಾಯಾಗದಲ್ಲಿ ಪಾಲ್ಗೊಂಡಿದ್ದೇನೆ ಎಂದರು.
ಅವಿಭಾಜಿತ ಜಿಲ್ಲೆಗಳಿಗೆ ಕುಡಿಯುವ ನೀರಿನ ಯೋಜನೆಗೆ 588 ಕೊಟಿ
ಅವಿಭಾಜಿತ ದ.ಕ, ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅನೇಕ ಕುಡಿಯುವ ನೀರಿನ ಯೋಜನೆಗಳು ಅನುಷ್ಠಾನಗೊಳ್ಳುತ್ತಿದ್ದು ಇದಕ್ಕಾಗಿ 588 ಕೋಟಿ ಬಿಡುಗಡೆಗೊಳಿಸಲಾಗಿದೆ ಎಂದು ಹೇಳಿದರು.ಸುಳ್ಯ ಹಾಗೂ ಸಾಲಿಗ್ರಾಮದಲ್ಲಿ ಕುಡಿಯುವ ನೀರಿನ ಯೋಜನೆ ಅಂತಿಮ ಹಂತದಲ್ಲಿದೆ ಎಂದು ಹೇಳಿದರು. ಮೂಲ್ಕಿ ಸಮೀಪದ ಕೊಲ್ಲೂರಿನಲ್ಲಿ ನಿರ್ಮಾಣವಾಗುತ್ತಿರುವ 18 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವಿಳಂಬ ಕುರಿತು ಕೇಳಿದ ಪ್ರಶ್ನೆಗೆ ನನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದಷ್ಟೇ ಉತ್ತರಿಸಿದರು.ಮೂಲ್ಕಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಮಾಸ್ಟರ್ ಪ್ಲಾನ್ ಏನಾದರೂ ಇದೇಯೇ? ಎಂದು ಕೇಳಿದ ಪ್ರಶ್ನೆಗೆ ಸ್ಥಳೀಯ ನಗರ ಪಂಚಾಯತ್ ಪ್ರಪೋಸಲ್ ಕಳಿಸಿದರೆ ಯೋಜನೆ ಸಿದ್ದಗೊಳಿಸಬಹುದು ಎಂದು ಹೇಳಿದರು. ವಾರಾಹಿ ಕುಡಿಯುವ ನೀರಿನ ಯೋಜನೆ ವಿವಾದದ ಬಗ್ಗೆ ಕೇಳಿದಾಗ ‘ನೋಕಮೆಂಟ್ಸ್’ ಎಂದಷ್ಟೇ ಉತ್ತರಿಸಿದರು.

Puneethakrishna

Kinnigoli--15011505

 

 

Comments

comments

Comments are closed.