ಸ್ವಾಮಿ ವಿವೇಕಾನಂದ ನಮ್ಮ ಜೀವನದ ಮಾದರಿ

ಮೂಲ್ಕಿ: ಭಾರತದ ಸಂಸ್ಕೃತಿ ಮತ್ತು ಗೌರವವನ್ನು ವಿಶ್ವ ದೆಲ್ಲೆಡೆ ಪಸರಿಸಿದ ಸ್ವಾಮಿ ವಿವೇಕಾನಂದರನ್ನು ನಮ್ಮ ಜೀವನದ ಮಾದರಿ ವ್ಯಕ್ತಿಯಾಗಿಸಿಕೊಂಡಲ್ಲಿ ಸಶಕ್ತ ಯುವ ಸಮಾಜದ ಉದಯ ಸಾಧ್ಯ ಎಂದು ಮೂಲ್ಕಿ ನಗರ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಸುನಿಲ್ ಆಳ್ವಾ ಹೇಳಿದರು.
ಮೂಲ್ಕಿಯಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 152ನೇ ಜನ್ಮದಿನಾಚರಣೆಯ ಪ್ರಯುಕ್ತ ಅವರು ಮಾತನಾಡಿದರು.
ಈ ಸಂದರ್ಭ ಸ್ವಾಮಿ ವಿವೇಕಾನಂದ ನನಪಿನಲ್ಲಿ ವೀವೇಕ ಬ್ಯಾಂಡ್ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಎಂ.ಬಂಗೇರಾ ವಹಿಸಿದ್ದರು.
ಮೂಲ್ಕಿ ನ.ಪಂ.ಉಪಾಧ್ಯಕ್ಷೆ ವಸಂತಿ ಭಂಡಾರಿ,ಸದಸ್ಯರಾದ ಪುರುಷೋತ್ತಮ ರಾವ್, ಮೂಲ್ಕಿ ಲಯನ್ಸ್ ಅಧ್ಯಕ್ಷ ದೇವಪ್ರಸಾದ್ ಪುನರೂರು,ನವೀನ್ ರಾಜ್, ಪ್ರಾಣೇಶ್ ಭಟ್ ದೇಂದಡ್ಕ, ವಿದ್ಯಾರ್ಥಿ ನಾಯಕ ಮಂಜುನಾಥ, ಗುರುಪ್ರಸಾದ್ ರಜನೀಶ, ಎ.ಬಿ.ವಿ.ಪಿ ಅಧ್ಯಕ್ಷ ವಿನೀತ್ ಶೆಟ್ಟಿ ಮತ್ತು ಸದಸ್ಯರು ಉಪಸ್ಥಿತರಿದ್ದರು.

Bhagyawan Sanil

Kinnigoli--15011501

Comments

comments

Comments are closed.