ಕಟೀಲು ಮೇಳದ ಕಾಣಿಕೆ ಡಬ್ಬಿ ಕದ್ದ ಆರೋಪಿ ಸೆರೆ

ಮೂಲ್ಕಿ: ಕಟೀಲು 4ನೇ ಮೇಳದ ಕಾಣಿಕೆ ಡಬ್ಬಿಯನ್ನು ಕಳವು ಮಾಡಿದ ಆರೋಪಿಯನ್ನು ಪೋಲೀಸರು ಬಂದಿಸಿದ್ದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿಯನ್ನು ಬೆಳ್ತಂಗಡಿ ತಾಲ್ಲೂಕಿನ ಉಜಿರೆ ಗುರಿಪಳ್ಳ ನಿವಾಸಿ ಯೋಗೀಶ ಗೌಡ(24) ಎಂದು ಗುರುತಿಸಲಾಗಿದೆ.
ಶೋಕಿ ಜೀವನ ನಡೆಸುತ್ತಿದ್ದ
ಶೋಕಿ ಜೀವನವನ್ನೇ ಕರಗತ ಮಾಡಿಕೊಂಡಿದ್ದ ಆರೋಪಿ ಯೋಗೀಶನು ಈ ಹಿಂದೆ ಬೆಳ್ತಂಗಡಿ ತಾಲ್ಲೂಕಿನ ಉಜಿರೆಯ ಗುರಿಪಳ್ಳ ಎಂಬಲ್ಲಿ ತಂದೆ ತಾಯಿ ಅಣ್ಣನೊಡನೆ ವಾಸವಾಗಿದ್ದನು. ತೀವ್ರ ಬಡತನದಲ್ಲಿ ವಾಸಿಸುತ್ತಿದ್ದ ಈತನ ತಂದೆಗೆ ಅಡಕೆ ತೋಟಕ್ಕೆ ಮದ್ದು ಬಿಡುವ ಕೆಲಸವಾಗಿದ್ದು ಈತ 6ನೇ ತರಗತಿವರೆಗೆ ಗುರಿಪಳ್ಳ ಶಾಲೆಯಲ್ಲಿ ಓದು ಮುಗಿಸಿದ್ದನು. ಬಳಿಕ ಸಮೀಪದ ಹೋಟೆಲು ಹಾಗೂ ಹೂವಿನ ವ್ಯಾಪಾರ ನಡೆಸುತ್ತಿದ್ದನು.ಅದರಲ್ಲಿ ಬಂದ ಹಣವನ್ನು ಕೋಳಿ ಅಂಕ, ದಂದೆಗಳಿಗೆ ಖರ್ಚು ಮಾಡಿ ಮೋಜು ಮಾಡುತ್ತಿದ್ದನು. ಸುಮಾರು 3 ವರ್ಷಗಳ ಹಿಂದೆ ಕಟೀಲಿನ 4ನೇ ಮೇಳಕ್ಕೆ ಕೆಲಸಕ್ಕೆ ಸೇರಿ ಕಲಾವಿದರ ಬಟ್ಟೆ ಸ್ವಚ್ಛಗೊಳಿಸುವುದೇ ಅಲ್ಲದೆ ವೇಷದಾರಿಗಳಿಗೆ ಬೇಕಾದ ಬಟ್ಟೆಗಳನ್ನು ಕಟ್ಟಿಕೊಡುವ ಕೆಲಸ ಮಾಡುತ್ತಿದ್ದನು. ಪ್ರತಿಯೊಂದು ಕಡೆಯಲ್ಲೂ ಕಟೀಲು ಮೇಳದ ಯಕ್ಷಗಾನ ನಡೆಯುವಲ್ಲಿ ಮೇಳದ ಕಾಣಿಕೆ ಡಬ್ಬಿ ಇದ್ದು ಅದರಲ್ಲಿ ಕಾಣಿಕೆಯನ್ನು ಕಳ್ಳತನ ಮಾಡಿ ಮೋಜು ಮಾಡುತ್ತಿದ್ದನು ಎಂದು ಪೋಲೀಸರು ತಿಳಿಸಿದ್ದಾರೆ.
ಕಿನ್ನಿಗೋಳಿಯಲ್ಲಿ ಸಿಕ್ಕಿ ಬಿದ್ದ
ಹಾಗೇಯೇ ಕಳೆದ ವಾರದಲ್ಲಿಕಿನ್ನಿಗೋಳಿಯ ಅಯ್ಯಪ್ಪ ಭಕ್ತ ವೃಂದದಿಂದ ಕಿನ್ನಿಗೋಳಿಯಲ್ಲಿ ಕಟೀಲು ಮೇಳದ ಯಕ್ಷಗಾನ ನಡೆಯುವ ಸಮಯ ದೇವರ ಕಾಣಿಕೆ ಡಬ್ಬಿಯನ್ನು ಇರಿಸಲಾಗಿದ್ದು ಹಣದ ಆಸೆಯಿಂದ ಕಾಣಿಕೆ ಡಬ್ಬಿಯನ್ನು ಗೋಣಿಯಲ್ಲಿ ಕೊಂಡು ಹೋಗಿ ಉಜಿರೆ ಸಮೀಪ ಒಡೆಯಲೆತ್ನಿಸಿದ್ದು ಮೇಳದ ಸಂಘಟಕರಿಗೆ ತಿಳಿದು ಬಂದು ಆರೋಪಿಯನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದ್ದಾರೆ.ಈತನ ವಿರುದ್ದ ಕಳೆದ ಎರಡು ತಿಂಗಳ ಹಿಂದೆ ಉಪ್ಪಿನಂಗಡಿ ಠಾಣೆಯಲ್ಲಿ ಕೂಡ ಪ್ರಕರಣ ದಾಖಲಾಗಿತ್ತು ಎಂದು ಪೋಲಿಸರು ತಿಳಿಸಿದ್ದಾರೆ.ಆರೋಪಿ ವಿರುದ್ದ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Puneethakrishna

Kinnigoli-17011507

Comments

comments

Comments are closed.

Read previous post:
Kinnigoli-17011506
ವ್ಯಾಸ ಮಹರ್ಷಿ ಮಡಿಲಿಗೆ ವಿಜ್‌ಐಟಿ ಪ್ರಶಸ್ತಿ 

ಮೂಲ್ಕಿ: ಮೂಲ್ಕಿ ವಿಜಯಾ ಕಾಲೇಜು ಕಂಪ್ಯೂಟರ್ ವಿಭಾಗ ಆಯೋಜಿಸಿರುವ ಅಂತರ್ ಹೈಸ್ಕೂಲು ವಿಭಾಗದ ಮಾಹಿತಿ ತಂತ್ರಜ್ಞಾನ ಸ್ಪರ್ದೆ ವಿಜ್‌ಐಟಿ ಟೆಕ್ನೊವಿಝಾಡ್ಸ್ ಸ್ಪರ್ದೆಯ ಸಮಗ್ರ ಪ್ರಶಸ್ತಿಯನ್ನು ಮೂಲ್ಕಿ ಕಿಲ್ಪಾಡಿ...

Close