ಬಪ್ಪನಾಡು ಕಟ್ಟಡದಿಂದ ಬಿದ್ದು ಸಾವು

ಮೂಲ್ಕಿ: ಬಪ್ಪನಾಡಿನ ಸಪ್ತಗಿರಿ ಬಹುಮಹಡಿ ಕಟ್ಟಡದಲ್ಲಿ ಕಾಮಗಾರಿ ಮಾಡುತ್ತಿದ್ದ ಪೈಂಟರ್ ಕಿಟಿಕಿಯ ಮೇಲಿನ ಶೇಡ್ ತುಂಡಾಗಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಸುರತ್ಕಲ್ ಸಮೀಪದ ತಡಂಬೈಲ್ ವೆಂಕಟರಮಣ ಕಾಲೋನಿ ನಿವಾಸಿ ವೆಂಕಟೇಶ(35) ಎಂದು ಗುರುತಿಸಲಾಗಿದೆ.
ಕಳೆದ ಒಂದು ತಿಂಗಳಿನಿಂದ ಗುತ್ತಿಗೆದಾರ ರತ್ನೋಜಿ ನೇತೃತ್ವದಲ್ಲಿ ತಡಂಬೈಲ್ ನಿವಾಸಿಗಳ 4 ಜನರ ತಂಡ ಮೂಲ್ಕಿ ಸಮೀಪದ ರಾಷ್ಟ್ರೀಯ ಹೆದ್ದಾರಿ ಬಳಿಯ ಸಪ್ತಗಿರಿ ಅಪಾರ್ಟಮೆಂಟಿನ ಪೈಂಟಿಂಗ್ ಕಾಮಗರಿಯನ್ನು ವಹಿಸಿಕೊಂಡಿದ್ದರು. ಅದರಂತೆ ಬಹುಮಹಡಿ ಕಟ್ಟಡದ ಎರಡನೆ ಮಹಡಿಯ ಕಟಿಕಿಯ ಮೇಲಿರುವ ಶೇಡ್‌ನಲ್ಲಿ ನಿಂತು ಪೈಂಟಿಂಗ್ ಕೊಡುತ್ತಿರುವ ವೇಳೆ ಶೇಡ್ ಕುಸಿದು ಬಿದ್ದಿದೆ, ಈ ಸಂದರ್ಭ ಸೀದಾ ಕೆಳಗೆ ಬಿದ್ದ ವೆಂಕಟೇಶ ತೀವ್ರ ಗಾಯಗೊಂಡಿದ್ದಾನೆ.ಶೇಡ್ ತುಂಡಾದ ಸಂದರ್ಭ ಕಿಟಿಕಿಯ ಬಾಗಿಲುಗಳಿಗೆ ಹಾನಿಯಾಗಿ ಭೀಕರ ಸದ್ದು ಉಂಟಾಯಿತು. ಈ ಸಂದರ್ಭ ಕೋಣೆಯಲ್ಲಿದ್ದ ಮಹಿಳೆಯೊಬ್ಬರೂ ಗಾಭರಿಯಾಗಿ ಹೊರಗೆ ದಾವಿಸಿ ಬಂದಿದ್ದಾರೆ, ಕಟ್ಟಡದ ಕಳಪೆ ಕಾಮಗಾರಿಯಿಂದಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕೂಡಲೇ ವೆಂಕಟೇಶನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದರೂ ಕುತ್ತಿಗೆ ಬಳಿ ತೀವ್ರ ಗಾಯಗೊಂಡ ಕಾರಣದಿಂದ ಬದುಕಿಸಲು ಸಾದ್ಯವಾಗಲಿಲ್ಲ ಎಂದು ಮಿತ್ರರು ಬೇಸರದಿಂದ ಹೇಳುತ್ತಾರೆ. ಬಡತನ ಕುಟುಂಬಲ್ಲಿರುವ ವೆಂಕಟೇಶನ ತಂದೆ ತಾಯಿ ಕೂಲಿಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು ನಾಲ್ಕು ಜನ ಮಕ್ಕಳಲ್ಲಿ ಈತಒಬ್ಬನು. ಮರಣದಿಂದ ಕುಟುಂಬ ಶೋಕಸಾಗರ ಮುಗಿಲುಮುಟ್ಟಿದೆ. ಬಹುಮಹಡಿ ಕಟ್ಟಡದ ಮಾಲಿಕ ಸದಾನಂದ ಕೋಟ್ಯಾನ್, ಕಾರ‍್ಯದರ್ಶಿ ಜಗದೀಶ ಶೆಟ್ಟಿ ಮತ್ತು ಪೈಂಟಿಗ್ ಗುತ್ತಿಗೆದಾರ ರತ್ನೋಜಿ ವಿರುದ್ದ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Puneethakrishna

Kinnigoli-17011501 Kinnigoli-17011502 Kinnigoli-17011503

Comments

comments

Comments are closed.

Read previous post:
Mulki-17011501
ಮಾಹಿತಿ ತಂತ್ರಜ್ಞಾನ ಸ್ಪರ್ದೆ

ಮೂಲ್ಕಿ: ವಿಜ್ಞಾನ ತಂತ್ರಜ್ಞಾನಗಳು ಅಭಿವೃದ್ಧಿಗೊಂಡಿರುವ ಪರಿಣಾಮ ಮಾಹಿತಿ ತಂತ್ರಜ್ಞಾನ ಉತ್ತುಂಗ ಸ್ಥಿತಿಯಲ್ಲಿದ್ದು ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಪೂರಕ ವಿಷಯಗಳನ್ನು ಆಯ್ಕೆ ಮಾಡುವ ಮೂಲಕ ಉನ್ನತಿಗಳಿಸಲು ಸಾಧ್ಯ ಎಂದು ಶ್ರೀನಿವಾಸ...

Close