ಬಪ್ಪನಾಡು ದಾರಿದೀಪ ಉದ್ಘಾಟನೆ

ಮೂಲ್ಕಿ: ರಾಜ್ಯ ಸರಕಾರದ ಮುಕ್ತ ನಿಧಿಯಿಂದ ಮೂಲ್ಕಿ ನಗರಪಂಚಾಯತಿ ವ್ಯಾಪ್ತಿಯ ಬಪ್ಪನಾಡು ಗ್ರಾಮದ ದೇವಸ್ಥಾನ ರಸ್ತೆಯಲ್ಲಿ ಅಳವಡಿಸಲಾದ ದಾರಿ ದೀಪ ವಿಸ್ತರಣಾ ಕಾಮಗಾರಿಯ ಉದ್ಘಾಟನಾ ಕಾರ‍್ಯಕ್ರಮವನ್ನು ಶ್ರೀ ಕ್ಷೇತ್ರ ಬಪ್ಪನಾಡು ದೇವಸ್ಥಾನದ ಅರ್ಚಕರಾದ ಕೃಷ್ಣದಾಸ ಭಟ್ ನೆರವೇರಿಸಿದರು.

ಈ ಸಂದರ್ಭ ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಮೂಲ್ಕಿ ಪ.ಪಂ. ಅಧ್ಯಕ್ಷೆ ಮೀನಾಕ್ಷಿ ಬಂಗೇರಾ, ಉಪಾಧ್ಯಕ್ಷೆ ವಾಸಂತಿ ಭಂಡಾರಿ, ಸ್ಥಾಯಿ ಸಮಿತಿಯ ಅಧ್ಯಕ್ಷ ಸುನಿಲ್ ಆಳ್ವ, ಸದಸ್ಯರಾದ ಪುರುಷೋತ್ತಮ ಬಡಗುಹಿತ್ಲು, ಶಂಕ್ರವ್ವ, ದೇವಳದ ಮ್ಯಾನೇಜರ್ ಶಿವಶಂಕರ್, ಬಪ್ಪನಾಡು ಯುವಕ ವೃಂದದ ಹರಿಶ್ಚಂದ್ರ ದೇವಾಡಿಗ, ಉದ್ಯಮಿ ರಾಮಚಂದ್ರ ನಾಯಕ್, ಸ್ಥಳೀಯರಾದ ಪಾಂಡುರಂಗ ದೇವಾಡಿಗ, ದೇವಾನಂದ ಬಪ್ಪನಾಡು ಮತ್ತಿತರರು ಉಪಸ್ಥಿತರಿದ್ದರು.

Puneethakrishna

Kinnigoli-17011505

Comments

comments

Comments are closed.

Read previous post:
Kinnigoli-17011504
ದೇಶ ಭಕ್ತಿ- ಯುವಶಕ್ತಿಯ ಸ್ಫೂರ್ತಿ

ಮುಲ್ಕಿ: ವಿಶ್ವಮಟ್ಟದಲ್ಲಿ ಭಾರತದ ಸಂಸ್ಕೃತಿ, ಭಾರತೀಯರ ವಿಶಾಲ ಹೃದಯವಂತಿಕೆ,ಆಧ್ಯಾತ್ಮಿಕ ಮೌಲ್ಯಗಳೊಂದಿಗೆ ದೇಶಭಕ್ತಿ ಮತ್ತು ಮಾತೃಭಕ್ತಿಯ ಮೂಲಪರಿಕಲ್ಪನೆಗಳನ್ನು ಬಿತ್ತರಿಸಿ, ವಿಶ್ವಭೂಪಟದಲ್ಲಿ ಭಾರತಕ್ಕೆ ವಿಶಿಷ್ಠ ಸ್ಥಾನವನ್ನು ಕಲ್ಪಿಸಿಕೊಟ್ಟ ಮಹಾನ್ ಸಂತ...

Close