ವ್ಯಾಸ ಮಹರ್ಷಿ ಮಡಿಲಿಗೆ ವಿಜ್‌ಐಟಿ ಪ್ರಶಸ್ತಿ 

ಮೂಲ್ಕಿ: ಮೂಲ್ಕಿ ವಿಜಯಾ ಕಾಲೇಜು ಕಂಪ್ಯೂಟರ್ ವಿಭಾಗ ಆಯೋಜಿಸಿರುವ ಅಂತರ್ ಹೈಸ್ಕೂಲು ವಿಭಾಗದ ಮಾಹಿತಿ ತಂತ್ರಜ್ಞಾನ ಸ್ಪರ್ದೆ ವಿಜ್‌ಐಟಿ ಟೆಕ್ನೊವಿಝಾಡ್ಸ್ ಸ್ಪರ್ದೆಯ ಸಮಗ್ರ ಪ್ರಶಸ್ತಿಯನ್ನು ಮೂಲ್ಕಿ ಕಿಲ್ಪಾಡಿ ಶ್ರೀ ವ್ಯಾಸ ಮಹರ್ಷಿ ಆಂಗ್ಲ ಮಾದ್ಯಮ ಶಾಲೆ ಪಡೆದುಕೊಂಡಿತು.
ಸ್ಪರ್ದಾ ಫಲಿತಾಂಶ: ಐಸ್ ಬ್ರೇಕರ್: ಪ್ರಥಮ: ಶ್ರೀ ವ್ಯಾಸ ಮಹರ್ಷಿ.ದ್ವಿತೀಯ:ಸಾಗರ್ ವಿದ್ಯಾ ಮಂದಿರ್ ಪಡುಬಿದ್ರಿ. ಸ್ಮಾರ್ಟ್‌ಅಪ್: ಪ್ರಥಮ: ಶ್ರೀ ವ್ಯಾಸ ಮಹರ್ಷಿ.ದ್ವಿತೀಯ:ಸಾಗರ್ ವಿದ್ಯಾ ಮಂದಿರ್ ಪಡುಬಿದ್ರಿ.ಆಡ್-ಒ-ಮ್ಯಾಡ್: ಪ್ರಥಮ ಶ್ರೀ ನಾರಾಯಣ ಗುರು ಆಂಗ್ಲ ಮಾದ್ಯಮ ಶಾಲೆ ಮೂಲ್ಕಿ.ದ್ವಿತೀಯ: ಶ್ರೀ ವ್ಯಾಸಮಹರ್ಷಿ ಮೂಲ್ಕಿ.ಗೇಮ್ ಒವರ್:ಪ್ರಥಮ ಸಿ.ಎಸ್.ಐ ಆಂಗ್ಲ ಮಾದ್ಯಮ ಶಾಲೆ ಮೂಲ್ಕಿ. .ದ್ವಿತೀಯ: ಶ್ರೀ ವ್ಯಾಸಮಹರ್ಷಿ ಮೂಲ್ಕಿ. ಸ್ಕಾವೆಂಜರ್ ಹಂಟ್: ಪ್ರಥಮ: .ದ್ವಿತೀಯ: ಶ್ರೀ ವ್ಯಾಸಮಹರ್ಷಿ ಮೂಲ್ಕಿ.ಅಲ್ಟಿಮೇಟ್ ಪ್ಲೇಯರ್: ಪ್ರಥಮ: ರೋಟರಿ ಆಂಗ್ಲ ಮಾದ್ಯಮ ಶಾಲೆ ಕಿನ್ನಿಗೋಳಿ.ದ್ವಿತೀಯ:ಸಾಗರ್ ವಿದ್ಯಾ ಮಂದಿರ್ ಪಡುಬಿದ್ರಿ. ಬ್ರೈನ್‌ಕ್ರಶ್:ಪ್ರಥಮ: ಸಾಗರ್ ವಿದ್ಯಾ ಮಂದಿರ್ ಪಡುಬಿದ್ರಿ.ದ್ವಿತೀಯ ಶ್ರೀ ಮಹಲಿಂಗೇಶ್ವರ ಆಂಗ್ಲ ಮಾದ್ಯಮ ಶಾಲೆ ಸುರತ್ಕಲ್. ಗಳಿಸಿಕೊಂಡಿತು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಮಂಗಳೂರು ಇನ್ಫೋಸೀಸ್ ಹಿರಿಯ ಯೋಜನಾ ಪ್ರಭಂದಕ ಭರತೇಶ್ ಬಂಗೇರಾ ಮಾತನಾಡಿ, ವಿದ್ಯಾರ್ಥಿಗಳು ಅಂಕಗಳಿಕೆ ಯೊಂದಿಗೆ ಪಠ್ಯೇತರ ವಿಷಯಗಳಲ್ಲಿ ತಿಳುವಳಿಕೆ ಹೊಂದುವುದು ಬಹು ಮುಖ್ಯವಾಗಿದ್ದು ಇಂಹತ ಸ್ಪರ್ದೆಗಳು ಹೈಸ್ಕೂಲು ವಿಭಾಗದ ಮಕ್ಕಳಿಗೆ ತನ್ನ ನೈಪುಣ್ಯತೆಯ ಪ್ರದರ್ಶನ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಸಂಘಟನೆಯ ಅನುಭವಗಳಿಸಲು ಉತ್ತಮ ವೇದಿಕೆಯಾಗಿದೆ ಎಂದರು. ಈ ಸಂದರ್ಭ ಕಾಲೇಜು ಕಂಪ್ಯೂಟರ್ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಎಂ.ಎ.ಆರ್.ಕುಡ್ವಾ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜು ಪ್ರಾಂಶುಪಾಲ,ಪ್ರೊ.ಕೆ.ಆರ್.ಶಂಕರ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಪಮೀದಾ ಬೇಗಂ,ಕಂಪ್ಯೂಟರ್ ವಿಭಾಗ ಮುಖ್ಯಸ್ಥೆ ಜ್ಯೋತಿ ಶಂಕರ್ ಸಾಲ್ಯಾನ್, ಸಂಘ ಕಾರ್ಯದರ್ಶಿ ರವೀಶ್ ಮಲ್ಯ ಅತಿಥಿಗಳಾಗಿದ್ದರು.ವಿಜಯಶ್ರೀ ಪ್ರಾರ್ಥಿಸಿದರು.ಶ್ರೀಲಕ್ಷ್ಮಿ ಶೆಟ್ಟಿ ಸ್ವಾಗತಿಸಿದರು.ಧರ್ಶನ್ ಎಸ್.ಕೆ ಅತಿಥಿಯವರನ್ನು ಪರಿಚಯಿಸಿದರು.ಅಮೃತಾ ಶೆಟ್ಟಿ ನಿರೂಪಿಸಿದರು. ನಾಗರಾಜ್ ರಾವ್ ವಂದಿಸಿದರು.

Bhagyawan Sanil

Kinnigoli-17011506

Comments

comments

Comments are closed.

Read previous post:
Kinnigoli-17011505
ಬಪ್ಪನಾಡು ದಾರಿದೀಪ ಉದ್ಘಾಟನೆ

ಮೂಲ್ಕಿ: ರಾಜ್ಯ ಸರಕಾರದ ಮುಕ್ತ ನಿಧಿಯಿಂದ ಮೂಲ್ಕಿ ನಗರಪಂಚಾಯತಿ ವ್ಯಾಪ್ತಿಯ ಬಪ್ಪನಾಡು ಗ್ರಾಮದ ದೇವಸ್ಥಾನ ರಸ್ತೆಯಲ್ಲಿ ಅಳವಡಿಸಲಾದ ದಾರಿ ದೀಪ ವಿಸ್ತರಣಾ ಕಾಮಗಾರಿಯ ಉದ್ಘಾಟನಾ ಕಾರ‍್ಯಕ್ರಮವನ್ನು ಶ್ರೀ...

Close