ಮಾಹಿತಿ ತಂತ್ರಜ್ಞಾನ ಸ್ಪರ್ದೆ

ಮೂಲ್ಕಿ: ವಿಜ್ಞಾನ ತಂತ್ರಜ್ಞಾನಗಳು ಅಭಿವೃದ್ಧಿಗೊಂಡಿರುವ ಪರಿಣಾಮ ಮಾಹಿತಿ ತಂತ್ರಜ್ಞಾನ ಉತ್ತುಂಗ ಸ್ಥಿತಿಯಲ್ಲಿದ್ದು ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಪೂರಕ ವಿಷಯಗಳನ್ನು ಆಯ್ಕೆ ಮಾಡುವ ಮೂಲಕ ಉನ್ನತಿಗಳಿಸಲು ಸಾಧ್ಯ ಎಂದು ಶ್ರೀನಿವಾಸ ಇನ್ಸಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಎಂ.ಸಿ.ಎ ವಿಭಾಗ ಮುಖ್ಯಸ್ಥ ಡಾ. ಜೀವನ್ ಪಿಂಟೋ ಹೇಳಿದರು.
ಮೂಲ್ಕಿ ವಿಜಯಾ ಕಾಲೇಜಿನ ಕಂಪ್ಯೂಟರ್ ವಿಭಾಗದ ಆಶ್ರಯದಲ್ಲಿ ಅಂತರ್ ಹೈಸ್ಕೂಲು ವಿದ್ಯಾರ್ಥಿಗಳಿಗಾಗಿ ಶುಕ್ರವಾರ ನಡೆದ ಮಾಹಿತಿ ತಂತ್ರಜ್ಞಾನ ಸ್ಪರ್ದೆ ವಿಜ್‌ಐಟಿ ಟೆಕ್ನೋ ವಿಝಾರ‍್ಡ್ ಉದ್ಘಾಟಿಸಿ ಅವರು ಮಾತನಾಡಿದರು.
ಮಾಹಿತಿ ತಂತ್ರಜ್ಞಾನದ ಅಂಗವಾಗಿರುವ ಅಂತರ್‌ಜಾಲದಲ್ಲಿ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳು ಸಮಾನವಾಗಿದ್ದು ಉತ್ತಮ ವಿಷಯಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಬದುಕನ್ನು ಸದುಪಯೋಗಗೊಳಿಸಿ ಉತ್ತಮ ಔದ್ಯಮಿಕ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯವಿದೆ ಎಂದರು. ಈ ಸಂದರ್ಭ ಡಾ. ಜೀವನ್ ಪಿಂಟೋ ವಿಜ್‌ಐಟಿ ಟೆಕ್ನೋ ವಿಝಾರ‍್ಡ್ ಟ್ರೋಫಿ ಅನಾವರಣ ಗೊಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಪ್ರೊ. ಕೆ.ಆರ್.ಶಂಕರ್ ವಹಿಸಿದ್ದರು.
ವಿಜಯಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಪಮಿದಾ ಬೇಗಂ,ಕಂಪ್ಯೂಟರ್ ವಿಭಾಗ ಮುಖ್ಯಸ್ಥೆ ಜ್ಯೋತಿ ಶಂಕರ್ ಸಾಲ್ಯಾನ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ನಾರಾಯಣ, ಕಂಪ್ಯೂಟರ್ ಸಂಘ ಕಾರ್ಯದರ್ಶಿ ರವೀಶ್ ಮಲ್ಯ ಅತಿಥಿಗಳಾಗಿದ್ದರು.
ಜ್ಯೋತಿ ಶಂಕರ್ ಸಾಲ್ಯಾನ್ ಸ್ವಾಗತಿಸಿದರು. ದಿಶಾ ಪುತ್ರನ್ ಅತಿಥಿ ಪರಿಚಯ ನಡೆಸಿದರು. ಸ್ಟೆಫಿ ವೆಲೆಂಟಿನಾ ನಿರೂಪಿಸಿದರು. ರವೀಶ್ ಮಲ್ಯ ವಂದಿಸಿದರು.

Bhagyavan Sanil

Mulki-17011501

Comments

comments

Comments are closed.

Read previous post:
Kinnigoli--15011505
ಬಪ್ಪನಾಡಿನಲ್ಲಿ ಚಂಡಿಕಾಯಾಗ

ಮೂಲ್ಕಿ:  ರಾಜ್ಯ ಸರಕಾರದ ನಗರಾಬಿವೃದ್ದಿ ಸಚಿವರೂ ಉಡುಪಿ ಉಸ್ತುವಾರಿ ಸಚಿವರೂ ಆಗಿರುವ ವಿನಯ ಕುಮಾರ್ ಸೊರಕೆಯವರ ಕುಟುಂಬ ಸಮೇತರಾಗಿ ಮೂಲ್ಕಿಯ ಬಪ್ಪನಾಡು ದುರ್ಗಾಪರಮೇಶ್ವರಿ ದೇವಳದಲ್ಲಿ ಚಂಡಿಕಾಯಾಗ ಗುರುವಾರ...

Close