ಬಲಿಗೆ ಕಾಯುತ್ತಿರುವ ವಿದ್ಯುತ್ ತಂತಿಗಳು

 ಕಿನ್ನಿಗೋಳಿ: ಸುಮಾರು 6 ತಿಂಗಳಿಂದ ಪಕ್ಷಿಕೆರೆ ಸಮೀಪದ ತಾಳಿಗುರಿ ಪ್ರದೇಶದ ವಿದ್ಯುತ್ ತಂತಿಗಳು ಕೈಗೆಟಕುವ ರೀತಿಯಲ್ಲಿದ್ದು ಬಲಿಗಾಗಿ ಕಾಯುತ್ತಿದೆ

ತಾಳಿಗುರಿ ಎಂಬ ಪ್ರದೇಶದಲ್ಲಿ ಸುಮಾರು 50 ಸೆಂಟ್ಸ್ ಜಾಗವನ್ನು ಸ್ಥಳೀಯರೊಬ್ಬರು ಜಾಗ ಖರೀದಿಸಿದ್ದು ತಗ್ಗು ಪ್ರದೇಶವಾಗಿದ್ದರಿಂದ 6 ತಿಂಗಳ ಹಿಂದೆ ಸಮತಟ್ಟು ಗೊಳಿಸಿದ್ದಾರೆ. ಜಾಗದ ಬದಿಯಲ್ಲಿನ ಒಂದು ಕಂಬದಿಂದ ಇನ್ನೊಂದು ಕಂಬಕ್ಕೆ ಎಳೆದಿರುವ ನಾಲ್ಕು ವಿದ್ಯುತ್ ತಂತಿಗಳು ಕೈಗೆಟಗುವ ಸ್ಥಿತಿಯಲ್ಲಿದ್ದು ಸ್ಥಳೀಯ ಜನರಿಗೆ ಇದು ಅಪಾಯವನ್ನು ಸೃಷ್ಟಿಸಿದೆ. ಜಾಗ ಸಮತಟ್ಟುಗೊಳಿಸಿದ್ದರಿಂದ ವಿದ್ಯುತ್ ತಂತಿಗಳು ಮತ್ತು ನೆಲದ ಅಂತರ ಕಡಿಮೆಯಾಗಿದ್ದು ಅಪಾಯವನ್ನು ತಂದೊಡ್ಡಿದೆ. ಈ ಸಮಸ್ಯೆಯನ್ನು ಮುಲ್ಕಿ ಮೆಸ್ಕಾಂ ಇಲಾಖೆಗೆ ಸ್ಥಳೀಯರು ಮೌಖಿಕವಾಗಿ ತಿಳಿಯಪಡಿಸಿದ್ದರೂ ಯಾವುದೇ ಸಮಸ್ಯೆ ಬಗೆಹರಿಯಲಿಲ್ಲ. ಅವರು ಈ ಬಗ್ಗೆ ಕಿನ್ನಿಗೋಳಿ ಮೆಸ್ಕಾಂನಲ್ಲಿ ದೂರು ಕೊಡಿ, ಟ್ರಾನ್ಸ್‌ಪಾರ್ಮರ್ ಕಿನ್ನಿಗೋಳಿ ಮೆಸ್ಕಾಂ ಸಮೀಪವಿರುವುದರಿಂದ ಅಲ್ಲೀಂದಲೇ ವಿದ್ಯುತ್ ಸರಭರಾಜು ಆಗುತ್ತಿದೆ ಎಂದು ಸಮಜಾಯಿಸಿ ಹೇಳುತ್ತಾರೆ. ಕಿನ್ನಿಗೋಳಿ ಮೆಸ್ಕಾಂ ಇಲಾಖೆಯವರು ಜಾಗ ಮುಲ್ಕಿ ಮೆಸ್ಕಾಂ ಇಲಾಖೆಯ ಪರಿಧಿಯಲ್ಲಿ ಬರುತ್ತದೆ ಎಂದು ಸಬೂಬು ಹೇಳುತ್ತಾರೆ. ಒಟ್ಟಾರೆ ಮೆಸ್ಕಾಂ ಗಡಿ ಪ್ರದೇಶದ ಸಮಸ್ಯೆ ಇಲ್ಲಿಯ ಸ್ಥಳೀಯರನ್ನು ಕಾಡುತ್ತಿದೆ. ಮಕ್ಕಳು ಮತ್ತು ಸ್ಥಳೀಯರು ಪರಿಸರದಲ್ಲಿ ಓಡಾಡಿಕೊಳ್ಳುತ್ತಿರುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಅದಷ್ಟು ಬೇಗ ಇದನ್ನು ಸರಿ ಪಡಿಸದಿದ್ದಲ್ಲಿ ದೊಡ್ದದೊಂದು ಅಪಘಾತ ಮಾತ್ರ ಗ್ಯಾರಂಟಿ ಸಂಭವಿಸಲಿದೆ.

ಕೆಲ ದಿನಗಳ ಹಿಂದೆ ಸ್ಥಳಿಯ ಮಹಿಳೆಯೋರ್ವರು ಕಟ್ಟಿಗೆಗಾಗಿ ಈ ಕಡೆ ತೆರಳಿದ್ದು ವಿದ್ಯುತ್ ತಂತಿ ತಗುವುದರಲ್ಲಿದ್ದು ಸ್ಥಳೀಯೊಬ್ಬರ ಕೂಗಿಗೆ ಎಚ್ಚೆತ್ತು ಸ್ವಲ್ಪದರಲ್ಲೇ ಪಾರಾಗಿದ್ದಾರೆ, ಅತ್ತೂರು ಕಡೆಯಿಂದ ಇಲ್ಲಿಗೆ ಬಂದ ಇನ್ನೊಬ್ಬರಿಗೂ ಇದೇ ರೀತಿಯ ಅನುಭವವಾಗಿತ್ತು.

Kinnigoli-17011509

Comments

comments

Comments are closed.

Read previous post:
Kinnigoli-17011508
ಕಿನ್ನಿಗೋಳಿ ಮಸೀದಿ ಪದಾಧಿಕಾರಿಗಳ ಆಯ್ಕೆ

ಕಿನ್ನಿಗೋಳಿ: ಕಿನ್ನಿಗೋಳಿ ಮೊಹಿದ್ದೀನ್ ಜುಮಾ ಮಸೀದಿಯ ೨೦೧೫ ನೇ ಸಾಲಿನ ಅಧ್ಯಕ್ಷರಾಗಿ ಕೆ. ಎ. ಅಬ್ದುಲ್ಲಾ ಕಿನ್ನಿಗೋಳಿ ಆಯ್ಕೆಯಾದರು. ಉಪಾಧ್ಯಕ್ಷ ಮಹಮ್ಮದ್ ರಫೀಕ್ ಕಿನ್ನಿಗೋಳಿ, ಕಾರ್ಯದರ್ಶಿ ಮಹಮ್ಮದ್ ರಫೀಕ್...

Close