ದೇಶ ಭಕ್ತಿ- ಯುವಶಕ್ತಿಯ ಸ್ಫೂರ್ತಿ

ಮುಲ್ಕಿ: ವಿಶ್ವಮಟ್ಟದಲ್ಲಿ ಭಾರತದ ಸಂಸ್ಕೃತಿ, ಭಾರತೀಯರ ವಿಶಾಲ ಹೃದಯವಂತಿಕೆ,ಆಧ್ಯಾತ್ಮಿಕ ಮೌಲ್ಯಗಳೊಂದಿಗೆ ದೇಶಭಕ್ತಿ ಮತ್ತು ಮಾತೃಭಕ್ತಿಯ ಮೂಲಪರಿಕಲ್ಪನೆಗಳನ್ನು ಬಿತ್ತರಿಸಿ, ವಿಶ್ವಭೂಪಟದಲ್ಲಿ ಭಾರತಕ್ಕೆ ವಿಶಿಷ್ಠ ಸ್ಥಾನವನ್ನು ಕಲ್ಪಿಸಿಕೊಟ್ಟ ಮಹಾನ್ ಸಂತ ಹಾಗೂ ದೇಶಭಕ್ತಿ ಮತ್ತು ಯುವ ಶಕ್ತಿಯ ಸ್ಫೂರ್ತಿಯ ಸೆಳೆ ಸ್ವಾಮಿ ವಿವೇಕಾನಂದ ಎಂದು ಹಿರಿಯ ಶಿಕ್ಷಕ ಬಿ.ಪುಂಡಲೀಕ ಮರಾಠೆ ಶಿರ್ವ ನುಡಿದರು.
ಅವರು ಶುಕ್ರವಾರ ಮುಲ್ಕಿ ವಿಜಯಾ ಕಾಲೇಜಿನಲ್ಲಿ ರಾಷ್ಠ್ರೀಯ ಸೇವಾ ಯೋಜನೆಯ “ಯುವ ಸಪ್ತಾಹ”ದ ಅಂಗವಾಗಿ ಸ್ವಾಮೀ ವಿವೇಕಾನಂದರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ, ಭಾರತದಲ್ಲಿ ಯುವ ಶಕ್ತಿ ಸಮೃದ್ಧವಾಗಿದ್ದು, ವಿವೇಕಾನಂದರ ತತ್ವ ಅದರ್ಶಗಳನ್ನು ಯುವಕರು ಮೈಗೂಡಿಸಿ,ಅದನ್ನು ರಾಷ್ಠ್ರಶಕ್ತಿಯನ್ನಾಗಿ ಪರಿವರ್ತಿಸಿದಾಗ ಭಾರತಮಾತೆ ವಿಶ್ವವಂದ್ಯಳಾಗುತ್ತಾಳೆ. ೨೧ನೇ ಶತಮಾನ ಭಾರತದ ಶತಮಾನವಾಗಲಿದೆ ಎಂದರು.
ಸಮಾರಂಬದ ಅದ್ಯಕ್ಷತೆಯನ್ನು ವಹಿಸಿ ಮತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಆರ್.ಶಂಕರ್, ಯುವ ಮನಸ್ಸು ಅಶುದ್ಧವಾಗದಂತೆ ಎಚ್ಚರ ವಹಿಸಿ,ವಿವೇಕಾನಂದರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿ, ಇತರರಿಗೂ ಪ್ರೇರಣೆ ನೀಡುವ ಕಾರ್ಯಕ್ಕೆ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಮುಂದಾಗಬೇಕು ಎಂದರು..ವೇದಿಕೆಯಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಫಾಮಿದಾ ಬೇಗಂ,ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ.ನಾರಾಯಣ, ಎನ್‌ಎಸ್‌ಎಸ್ ಯೋಜನಾಧಿಕಾರಿ ಪ್ರೊ.ಸಂಪತ್‌ಕುಮಾರ್,ಯೋಜನಾ ಘಟಕದ ಕಾರ್ಯದರ್ಶಿಗಳಾದ ರಾಕೇಶ್,ವಿಜೇತಾ ಕಾಮತ್, ಕಾಲೇಜು ವಿದ್ಯಾರ್ಥಿ ನಾಯಕ ಮಂಜುನಾಥ್ ಉಪಸ್ಥಿತರಿದ್ದರು. ಕಿರಣ್ ಪರಿಚಯಿಸಿದರು. ಸ್ವಾತಿಲಕ್ಷ್ಮೀ ಸ್ವಾಗತಿಸಿದರು. ಶ್ರೀವಿದ್ಯಾ,ಜಯಲಕ್ಷ್ಮೀ ಪ್ರಾರ್ಥಿಸಿದರು. ನಯನಾಶ್ವಿನಿ ಧನ್ಯವಾದವಿತ್ತರು.ದ್ವಿತೀಯ ಬಿಕಾಂ ಮುರಳಿ ನಿರೂಪಿಸಿದರು.

Bhagyavan Sanil

Kinnigoli-17011504

Comments

comments

Comments are closed.

Read previous post:
Kinnigoli-17011501
ಬಪ್ಪನಾಡು ಕಟ್ಟಡದಿಂದ ಬಿದ್ದು ಸಾವು

ಮೂಲ್ಕಿ: ಬಪ್ಪನಾಡಿನ ಸಪ್ತಗಿರಿ ಬಹುಮಹಡಿ ಕಟ್ಟಡದಲ್ಲಿ ಕಾಮಗಾರಿ ಮಾಡುತ್ತಿದ್ದ ಪೈಂಟರ್ ಕಿಟಿಕಿಯ ಮೇಲಿನ ಶೇಡ್ ತುಂಡಾಗಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಸುರತ್ಕಲ್...

Close