ಐಕಳ ಕಂಬಳ ಜಾನಪದ ಕ್ರೀಡಾ ಮೇಳ

 ಕಿನ್ನಿಗೋಳಿ : ಇಂದಿನ ಯುವ ಜನತೆಗೆ ಕೃಷಿಯ ಬಗ್ಗೆ, ಕೆಸರು ಗದ್ದೆ ಹಾಗೂ ಹಿರಿಯರು ಎಷ್ಟು ಕಷ್ಟಪಟ್ಟು ಕೃಷಿ ಮಾಡುತ್ತಿ ದ್ದರು ಎಂಬ ಅರಿವು ಆಗಬೇಕು. ಇಂತಹ ಕ್ರೀಡಾ ಕೂಟ ಆಯೋಜಿಸಿದಾಗ ಗ್ರಾಮೀಣ ಜನರ ಒಗ್ಗಟ್ಟು ಪ್ರದರ್ಶನಗೊಳ್ಳುತ್ತದೆ. ಐಕಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಪದ್ಮಿನಿ ವಸಂತ್ ಹೇಳಿದರು.
ಐಕಳಬಾವ ಕಾಂತಾಬಾರೆ- ಬೂದಾಬಾರೆ ಐಕಳ ಕಂಬಳ ಹಾಗೂ ಐಕಳೋತ್ಸವದ ಅಂಗವಾಗಿ ಹಾಗೂ ಭಾನುವಾರ ಜಾನಪದ ಕ್ರೀಡಾಮೇಳ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭ ಐಕಳ ಕಂಬಳ ಸಮಿತಿಯ ಅಧ್ಯಕ್ಷ ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ, ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಬರ್ಟನ್ ಸಿಕ್ವೇರಾ, ಕಂಬಳ ಸಮಿತಿ ಕಾರ್ಯಾಧ್ಯಕ್ಷ ಚಿತ್ತರಂಜನ್ ಭಂಡಾರಿ ಐಕಳಬಾವ, ಸಂಚಾಲಕ ಮುರಳೀಧರ ಶೆಟ್ಟಿ ಐಕಳ, ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಪ್ರಧಾನ ಕಾರ್ಯದರ್ಶಿ ಕೃಷ್ಣ ಮಾರ್ಲ, ಸಂಜೀವ ಶೆಟ್ಟಿ ಐಕಳ, ಲೀಲಾಧರ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಶಶಿಧರ ಐಕಳ, ಸ್ವರಾಜ್ ಶೆಟ್ಟಿ, ಶರತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-18011502

Comments

comments

Comments are closed.

Read previous post:
Kinnigoli-18011503
ಏಳಿಂಜೆ ಪಲ್ಸ್ ಪೋಲಿಯೋ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಏಳಿಂಜೆ ಶ್ರೀದೇವಿ ಮಹಿಳಾ ಮಂಡಳಿಯ ಕಟ್ಟಡದಲ್ಲಿ ಪಟ್ಟೆ ಮತ್ತು ಏಳಿಂಜೆ ಗ್ರಾಮದ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಭಾನುವಾರ ನಡೆಯಿತು. ಏಳಿಂಜೆ...

Close