ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘ ವಾರ್ಷಿಕೋತ್ಸವ

ಮೂಲ್ಕಿ : ಯುವ ಪೀಳಿಗೆ ಡ್ರಗ್ಸ್ ಚಟಕ್ಕೆ ಬಲಿಯಾಗುತ್ತಿದ್ದು ಹೆತ್ತವರು ಮಕ್ಕಳ ಚಟುವಟಿಕೆ ಬಗ್ಗೆ ಗಮನಹರಿಸುವುದರ ಜೊತೆಗೆ ಉತ್ತಮ ಸಂಸ್ಕಾರ,ಸಂಸ್ಕ್ರತಿಯನ್ನು ತಿಳಿಸಿ ಅವರ ಭವಿಷ್ಯವನ್ನು ರೂಪುಗೊಳಿಸುವ ಕಾರ್ಯ ಮಾಡಬೇಕೆಂದು ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಹೇಳಿದರು.
ಮೂಲ್ಕಿಯ ರುಕ್ಕರಾಮ ಸಾಲ್ಯಾನ್ ಸಭಾಗೃಹದಲ್ಲಿ ಜರಗಿದ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘ ಹಾಗೂ ಸಂಘದ ಶ್ರೀ ನಾರಾಯಣ ಗುರು ಮಹಿಳಾ ಮಂಡಳಿ ಮತ್ತು ಶ್ರೀ ನಾರಾಯಣ ಗುರು ಸೇವಾ ದಳದ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ನಮ್ಮ ಹಿರಿಯರು ನಮಗೆ ನೀಡಿದ ಉತ್ತಮ ಂಸ್ಕಾರಗಳನ್ನು ನಮ್ಮ ಮಕ್ಕಳಿಗೆ ನೀಡುವಲ್ಲಿ ನಾವು ವಿಫಲರಾಗಿರುವುದರಿಂದ ಮಕ್ಕಳು ಹಾದಿ ತಪ್ಪುತ್ತಿದ್ದು ಅವರ ಭವಿಷ್ಯವನ್ನು ಉಜ್ವಲಗೊಳಿಸಲು ಪ್ರಯತ್ನಿಸಬೇಕೆಂದು ಅವರು ಹೇಳಿದರು.ಅದ್ಯಕ್ಷತೆಯನ್ನು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅದ್ಯಕ್ಷ ಹರಿಶ್ಚಂದ್ರ ಪಿ ಸಾಲ್ಯಾನ್ ವಹಿಸಿದ್ದು ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕೆ ಸುಂದರ ಸುವರ್ಣ ಕೊಕ್ಕರ್ ಕಲ್,,ಆನಂದ ದೇವಾಡಿಗ ಒಡೆಯರಬೆಟ್ದು ಮತ್ತು ಭಾಸ್ಕರ ಸಫಳಿಗ ಒಡೆಯರಬೆಟ್ಟು ರನ್ನು ಸನ್ಮಾನಿಸಲಾಯಿತು.ವಾರ್ಷಿಕೋತ್ಸವದ ಪ್ರಯುಕ್ತ ಹಮ್ಮಿಕೊಂಡ ಕಾಂತಾಬಾರೆ-ಬೂದಾಬಾರೆ ಕ್ರೀಡೋತ್ಸವದಲ್ಲಿ ವಿಜೇತರಾದವರಿಗೆ ಹಾಗೂ ಶ್ರೀ ನಾರಾಯಣ ಸೇವಾ ದಳದ ವತಿಯಿಂದ ಹಮ್ಮಿಕೊಂಡ ಕ್ರಿಕೆಟ್ ಪಂದ್ಯಾಟದಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.ಶ್ರೀ ನಾರಾಯಣ ಗುರು ಸೇವಾ ದಳದ ದಳಪತಿ ಸತೀಶ್ ಅಂಚನ್,ಶ್ರೀ ನಾರಾಯಣ ಗುರು ಮಹಿಳಾ ಮಂಡಳಿಯ ಅಧ್ಯಕ್ಷೆ ಸರೋಜಿನಿ ಸುವರ್ಣ,ಸಂಘದ ಉಪಾಧ್ಯಕ್ಷರಾದ ವಾಸು ಪೂಜಾರಿ,ಗೋಪಿನಾಥ ಪಡಂಗ,ಪ್ರಧಾನ ಕಾರ್ಯದರ್ಶಿ ರಮೇಶ್ ಕೊಕ್ಕರ್ ಕಲ್,ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ತೆಯ ಸಂಚಾಲಕ ಎಚ್ ವಿ ಕೋಟ್ಯಾನ್ ಉಪಸ್ತಿತರಿದ್ದರು.
ಸಂಘದ ಅಧ್ಯಕ್ಷ ಹರಿಶ್ಚಂದ್ರ ಪಿ ಸಾಲ್ಯಾನ್ ಸ್ವಾಗತಿಸಿದರು,ಗೋಪಿನಾಥ ಪಡಂಗ ಪ್ರಸ್ತಾವನೆಗೈದೆರು,ಕೋಶಾಧಿಕಾರಿ ಪ್ರಕಾಶ್ ಸುವರ್ಣ ವಂದಿಸಿದರು,ನರೇಂದ್ರ ಕೆರೆಕಾಡು ನಿರೂಪಿಸಿದರು.

Kinnigoli-18011510

Comments

comments

Comments are closed.

Read previous post:
Kinnigoli-18011506
ಗ್ರಾಮೀಣ ಮಟ್ಟದಲ್ಲೂ ಬಹಳಷ್ಟು ಪ್ರತಿಭೆಗಳಿವೆ

ಕಿನ್ನಿಗೋಳಿ : ಗ್ರಾಮೀಣ ಮಟ್ಟದಲ್ಲೂ ಬಹಳಷ್ಟು ಪ್ರತಿಭೆಗಳಿದ್ದು ನಿರಂತರ ಪ್ರೋತ್ಸಾಹ ತರಬೇತಿ ನೀಡಿದಾಗ ಸಾಧನೆಯ ಗುರಿಮುಟ್ಟಬಹುದು ಎಂದು ಯುವಜನ ಸೇವಾ ಕ್ರೀಡಾ ಮತ್ತು ಮೀನುಗಾರಿಕೆ ಸಚಿವ ಕೆ. ಅಭಯಚಂದ್ರ...

Close