ಗ್ರಾಮೀಣ ಮಟ್ಟದಲ್ಲೂ ಬಹಳಷ್ಟು ಪ್ರತಿಭೆಗಳಿವೆ

ಕಿನ್ನಿಗೋಳಿ : ಗ್ರಾಮೀಣ ಮಟ್ಟದಲ್ಲೂ ಬಹಳಷ್ಟು ಪ್ರತಿಭೆಗಳಿದ್ದು ನಿರಂತರ ಪ್ರೋತ್ಸಾಹ ತರಬೇತಿ ನೀಡಿದಾಗ ಸಾಧನೆಯ ಗುರಿಮುಟ್ಟಬಹುದು ಎಂದು ಯುವಜನ ಸೇವಾ ಕ್ರೀಡಾ ಮತ್ತು ಮೀನುಗಾರಿಕೆ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು. ಮಂಗಳವಾರ ಕಟೀಲು ದೇವಳ ಪ್ರಥಮ ದರ್ಜೆ ಕಾಲೇಜು ಬಳಿಯ ಕಟೀಲು ಸ್ಪೋರ್ಟ್ಸ್ ಮತ್ತು ಗೇಮ್ಸ್ ಕ್ಲಬ್ ವತಿಯಿಂದ ಹೊನಲು ಬೆಳಕಿನ ವಾಲಿಬಾಲ್ ಹಾಗೂ ಶಟಲ್ ಬ್ಯಾಡ್ಮಿಂಟನ್ ಕೋರ್ಟ್ ಉದ್ಘಾಟಿಸಿ ಮಾತನಾಡಿದರು.
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ದನ ಕಿಲೆಂಜೂರು ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್, ತುಳು ಚಲನಚಿತ್ರ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು, ಬಜಪೆ ವ್ಯವಸಾಯ ಸಹಕಾರಿ ಬ್ಯಾಂಕ್ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು, ಕಟೀಲು ಪ್ರೌಢಶಾಲಾ ವೈಸ್ ಪ್ರಿನ್ಸಿಪಾಲ್ ಕೆ. ವಿ. ಶೆಟ್ಟಿ, ನಿವೃತ್ತ ಶಿಕ್ಷಕ ಸುಂದರ ಪೂಜಾರಿ, ಉದ್ಯಮಿಗಳಾದ ಲಾರೆನ್ಸ್, ನಾಗೇಶ್, ಕಟೀಲು ದೇವಳ ಪದವಿ ಕಾಲೇಜು ಪ್ರಿನ್ಸಿಪಾಲ್ ಎಮ್ ಬಾಲಕೃಷ್ಣ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕಟೀಲು ಸ್ಪೋರ್ಟ್ಸ್ ಮತ್ತು ಗೇಮ್ಸ್ ಕ್ಲಬ್ ಅಧ್ಯಕ್ಷ ಕೇಶವ ಕಟೀಲ್ ಪ್ರಸಾವನೆಗೈದು ಸ್ವಾಗತಿಸಿದರು. ಭರತ್ ಭಟ್ ವಂದಿಸಿದರು. ಐವನ್ ಕಾರ್ಯಕ್ರಮ ನಿರೂಪಿಸಿದರು.

Kinnigoli-18011506 Kinnigoli-18011507 Kinnigoli-18011508 Kinnigoli-18011509

Comments

comments

Comments are closed.

Read previous post:
Kinnigoli-18011504
ರಾಜ್ಯಮಟ್ಟದ ಕ್ರಿಕೆಟ್ ಟ್ರೋಫಿ ಅನಾವರಣ

ಕಿನ್ನಿಗೋಳಿ : ಯಂಗ್ ಫ್ರೆಂಡ್ಸ್ ಸೋಟ್ಸ್ ಕ್ಲಬ್ ಗುತ್ತಕಾಡು ಶಾಂತಿನಗರ ಇದರ ಆಶ್ರಯದಲ್ಲಿ ಜನವರಿ ೨೪ರಿಂದ ೨೬ ರ ವರೆಗೆ ನಡೆಯುವ ರಾಜ್ಯಮಟ್ಟದ ಹೊನಲು ಬೆಳಕಿನ ಓವರ ಆರ್ಮ್...

Close