ಐಕಳ ಜೊಡುಕರೆ ಕಂಬಳ

ಕಿನ್ನಿಗೋಳಿ : ಇತಿಹಾಸ ಪ್ರಸಿದ್ದ ಕಾರ್ನಿಕದ ಐಕಳಭಾವ ಜೊಡುಕರೆ ಕಂಬಳ ಸಂಪ್ರದಾಯ ಬದ್ಧ ಧಾರ್ಮಿಕ ವಿಧಿ ವಿಧಾನ ಮತ್ತು ಜಾನಪದೀಯ ಸಂಸ್ಕ್ರತಿಗಳನ್ನು ಮೇಳೈಸಿಕೊಂಡು ಬಂದಿದ್ದು ಇದೀಗ ಐಕಳೋತ್ಸವ ಮಾದರಿಯಲ್ಲಿ ನಡೆಯುತ್ತಿರುವುದು ಶ್ಲಾಘನೀಯ ಎಂದು ವೈಜ್ಞಾನಿಕ ಜ್ಯೋತಿಷಿ ಹಾಗೂ ಅಂತರಾಷ್ಟೀಯ ವಾಸ್ತು ತಜ್ಞ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಶನಿವಾರ ನಡೆದ ಐಕಳ ಬಾವ ಕಾಂತಬಾರೆ -ಬೂದಾಬಾರೆ ಜೊಡುಕರೆ ಕಂಬಳ ಉದ್ಘಾಟಿಸಿ ಮಾತನಾಡಿದರು.
ಐಕಳ ಕಂಬಳ ಸಮಿತಿಯ ಅಧ್ಯಕ್ಷ ಐಕಳಬಾವ ಡಾ. ದೇವಿ ಪ್ರಸಾದ್ ಶೆಟ್ಟಿ ಬೆಳಪು ಮಾತನಾಡಿ ಐಕಳ ಕಂಬಳಕ್ಕೆ ದೀರ್ಘ ಇತಿಹಾಸವಿದ್ದು, ತುಳುನಾಡಿನಲ್ಲಿ ವಿಶೇಷ ಸಾಧನೆಗೈದ ಸಾಧಕರಿಗೆ ಸನ್ಮಾನ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕೆರೆಕಾಡಿನ ಲಿಖಿತ ಎಂಬ ಮಗುವಿಗೆ ವೈದ್ಯಕೀಯ ಚಿಕಿತ್ಸೆಗೆ ಧನ ಸಹಾಯ, ಕಂಬಳಕ್ಕೆ ಆಗಮಿಸಿದ ಹಿರಿಯ ಹಾಗೂ ಯುವ ಕಂಬಳ ಪ್ರೇಮಿಗಳಿಗೆ ಹಿಂದಿನ ಕಾಲದಲ್ಲಿ ಬಳಕೆಯಲ್ಲಿದ್ದ ಪ್ರಾಚ್ಯ ವಸ್ತುಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಹಾಗೂ ಯುವಕರಿಗೆ ಕೃಷಿಗೆ ಬಗ್ಗೆ ಒಲವು ಮೂಡುವಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭ ಐಕಳ ಬಾವ ಯಜಮಾನ ಮತ್ತು ಗೌರವಾಧ್ಯಕ್ಷ ಐಕಳ ಬಾವ ದೋಗಣ್ಣ ಶೆಟ್ಟಿ, ಐಕಳ ಪಂಚಾಯಿತಿ ಅಧ್ಯಕ್ಷೆ ಪದ್ಮಿನಿ ವಸಂತ್, ರಜನಿ ಚಂದ್ರಶೇಖರ ಮುಲ್ಕಿ, ಅವಿಭಜಿತ ದ.ಕ ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಉಪಾಧ್ಯಕ್ಷ ಮಧು ಆಚಾರ್ಯ, ಐಕಳ ಕಂಬಳ ಸಮಿತಿಯ ಸಂಚಾಲಕ ಐಕಳ ಬಾವ ಮುರಳಿಧರ್ ಶೆಟ್ಟಿ, ಕಾರ್ಯಾಧ್ಯಕ್ಷ ಚಿತ್ತರಂಜನ್ ಭಂಡಾರಿ, ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಯುಗಪುರುಷದ ಭುವನಾಭಿರಾಮ ಉಡುಪ, ಮುಲ್ಕಿ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್, ತಹಶೀಲ್ದಾರ್ ಮೊಹನ್ ರಾವ್, ಕಂದಾಯ ನಿರೀಕ್ಷಕ ನಿತ್ಯಾನಂದ ದಾಸ್ ಮತ್ತಿತರರು ಉಪಸ್ಥಿತರಿದ್ದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Aikala-24011501 Aikala-24011502 Aikala-24011503 Aikala-24011504 Aikala-24011505 Aikala-24011506 Aikala-24011507 Aikala-24011508 Aikala-24011509 Aikala-24011510 Aikala-24011511 Aikala-24011512 Aikala-24011513 Aikala-24011514 Aikala-24011515 Aikala-24011516 Aikala-24011517 Aikala-24011518 Aikala-24011519 Aikala-24011520 Aikala-24011521 Aikala-24011523

Aikala-24011524 Aikala-24011525 Aikala-24011526 Aikala-24011527 Aikala-24011528 Aikala-24011529 Aikala-24011530 Aikala-24011531 Aikala-24011532

Comments

comments

Comments are closed.

Read previous post:
ಜ. 26 ಸೈಂಟ್ ಮೇರಿಸ್ ಫೆಸ್ಟ್ 2015

ಕಿನ್ನಿಗೋಳಿ : ಕಿನ್ನಿಗೋಳಿಯ ಸೈಂಟ್ ಮೇರಿಸ್ ಸಂಸ್ಥೆಗಳು ಸಾದರಪಡಿಸುತ್ತಿರುವ ಸೈಂಟ್ ಮೇರಿಸ್ ಫೆಸ್ಟ್ 2015 ಹಾಗೂ ಗಣರಾಜ್ಯೋತ್ಸವ ಸೋಮವಾರ ಜನವರಿ 26 ರಂದು ಕಿನ್ನಿಗೋಳಿಯ ಸೈಂಟ್ ಮೇರಿಸ್ ಸೆಂಟ್ರಲ್ ಸ್ಕೂಲ್ ಮೈದಾನದಲ್ಲಿ...

Close