ಜ. 28 ಬಬ್ಬು ಸ್ವಾಮಿ ಸ್ಥಳ ಮಹಿಮೆ ಡಿ.ವಿ.ಡಿ ಬಿಡುಗಡೆ.

 ಕಿನ್ನಿಗೋಳಿ : ಗ್ರಾಮೀಣ ಪ್ರದೇಶವಾದ ಪಕ್ಷಿಕೆರೆ ಸಮೀಪದ ಅತ್ತೂರು ಕಾಪಿಕಾಡು ಪ್ರದೇಶದಲ್ಲಿ ನೆಲೆಯಾದ ಬಬ್ಬು ಸ್ವಾಮಿ ಮತ್ತು ಪರಿವಾರ ದೈವಗಳು ಭಕ್ತರ ಆಸೆ ಆಕಾಂಕ್ಷೆಗಳನ್ನು ಈಡೇರಿಸುವ ಮೂಲಕ ದೇಶ ವಿದೇಶಗಳಿಂದ ಭಕ್ತ ವೃಂದವನ್ನು ಹೊಂದಿದ್ದು ಬಬ್ಬು ಸ್ವಾಮಿಯ ಸ್ಥಳೀಯ ಮಹಿಮೆ ಹಾಗೂ ಇತರ 17  ಕ್ಷೇತ್ರಗಳ ಸ್ಥಳ ಪುರಾಣವನ್ನು ಒಳಗೊಂಡ ವಿಶೇಷ ತುಳು ಭಕ್ತಿ ಗೀತೆ ಹಾಗೂ ಚರಿತ್ರೆಯ ಡಿ.ವಿ.ಡಿಯನ್ನು ಜ. 28 ಬುಧವಾರ ಕ್ಷೇತ್ರದಲ್ಲಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಗುವುದು ಹಾಗೂ ಎಂದು ಅತ್ತೂರು ಕಾಫಿಕಾಡು ಶ್ರೀ ಕೋರ‍್ದಬ್ಬು ದೈವಸ್ಥಾನದ ಮುಖ್ಯಸ್ಥ ಸೀನಾ ಸ್ವಾಮಿ ಕಿನ್ನಿಗೋಳಿಯ ಅಭಿನಂದನ್ ಸಭಾಂಗಣದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಶ್ರೀ ಕ್ಷೇತ್ರವು ಸ್ವಾಮಿಯ ದಯದಿಂದ ಭಕ್ತರ ಆಸೆ ಆಕಾಂಕ್ಷೆಗಳನ್ನು ತೀರಿಸುವುದರೊಂದಿಗೆ ವಿವಾಹ ಸಂಬಂದ, ಮಕ್ಕಳಿಗಾಗಿ ಕೋರಿಕೆ, ಕಳವು ಪತ್ತೆಗಾಗಿ ಹರಕೆಗೆ ಕ್ಷೇತ್ರ ಬಹಳ ಪ್ರಸಿದ್ದಿಯಾಗಿದ್ದು ವಾರ್ಷಿಕ ಉತ್ಸವದ ಸಂದರ್ಭ ಸಹಸ್ರಾರು ಜನರಿಗೆ ಅನ್ನ ಸಂತರ್ಪಣೆ, ಹಾಗೂ ಇತರ ದಿನಗಳಲ್ಲಿ ಸಾಮೂಹಿಕ ವಿವಾಹ ಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಗಳ ವಿವಾಹಕ್ಕೆ ಸಹಕಾರಗಳನ್ನು ಕ್ಷೇತ್ರದ ವತಿಯಿಂದ ನೀಡಲಾಗುತ್ತಿದೆ. ಜ. 29 ರಂದು ಶ್ರೀ ಕೋರ‍್ದಬ್ಬು ತನ್ನಿಮಾನಿಗ ಹಾಗೂ ಜ.30 ರಂದು ಶ್ರೀ ಧೂಮವತಿ ಬಂಟ ದೈವಗಳ ನೇಮೋತ್ಸವ ಜರುಗಲಿದೆ ಎಂದು ಹೇಳಿದರು.
ಸೀನಾ ಸ್ವಾಮಿ ನಂಬಿನ ಕಾರ್ಣಿಕದ ಬಬ್ಬು ಸ್ವಾಮಿ ಎಂಬ ತುಳು ಭಕ್ತಿಗೀತೆಗಳು ಹಾಗೂ ಚರಿತ್ರೆಯ ಡಿವಿಡಿಯನ್ನು ಪಕ್ಷಿಕೆರೆ ಎಸ್.ಬಿ.ಎಸ್. ಡಿಜಿಟಲ್ಸ್‌ನ ಸತೀಶ್ ನಿರ್ಮಿಸಿದ್ದು ಸಾಹಿತ್ಯ ಹಿರಿಯ ರಂಗಕರ್ಮಿ ಕೆ.ಕೆ. ಪೇಜಾವರ ಮತ್ತು ಸಂಗೀತವನ್ನು ಗುರುರಾಜ್ ಎಂ.ಬಿ ನೀಡಿದ್ದಾರೆ.
ಈ ಸಂದರ್ಭ ಸತೀಶ್, ಪ್ರಕಾಶ್ ಆಚಾರ್ ಉಪಸ್ಥಿತರಿದ್ದರು.

Comments

comments

Comments are closed.

Read previous post:
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘ ವಾರ್ಷಿಕೋತ್ಸವ

ಮೂಲ್ಕಿ : ಯುವ ಪೀಳಿಗೆ ಡ್ರಗ್ಸ್ ಚಟಕ್ಕೆ ಬಲಿಯಾಗುತ್ತಿದ್ದು ಹೆತ್ತವರು ಮಕ್ಕಳ ಚಟುವಟಿಕೆ ಬಗ್ಗೆ ಗಮನಹರಿಸುವುದರ ಜೊತೆಗೆ ಉತ್ತಮ ಸಂಸ್ಕಾರ,ಸಂಸ್ಕ್ರತಿಯನ್ನು ತಿಳಿಸಿ ಅವರ ಭವಿಷ್ಯವನ್ನು ರೂಪುಗೊಳಿಸುವ ಕಾರ್ಯ ಮಾಡಬೇಕೆಂದು...

Close