ಕಂಬಳ ಜನಪದ ಧಾರ್ಮಿಕ ಕ್ರೀಡೆ,

ಕಿನ್ನಿಗೋಳಿ: ಕಂಬಳ ಕ್ರೀಡೆ ತುಳುನಾಡಿನ ಮಣ್ಣಿನ ಸಂಸ್ಕೃತಿಯನ್ನು ಬಿಂಬಿಸುವ ಕಲೆಯಾಗಿದೆ. ಪ್ರಾಣಿದಯಾ ಸಂಘದವರ ವಿರೋಧ ವ್ಯಕ್ತವಾದುದರಿಂದ ಸಮಸ್ಯೆ ಬಂದಿದೆ. ಎಂದು ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಶನಿವಾರ ಐಕಳಬಾವ ಕಾಂತಾಬಾರೆ- ಬೂದಾಬಾರೆ ಜೋಡುಕರೆ ಕಂಬಳ ಹಾಗೂ ಐಕಳೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ತುಳುನಾಡಿನ ಸಾಧಕರಾದ ಕೆ. ಅಮರನಾಥ ಶೆಟ್ಟಿ , ಪ್ರೊ. ಕೆ. ಗುಣಪಾಲ ಕಡಂಬ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಡಾ. ನರೇಶ್ ಶೆಟ್ಟಿ ಐಕಳ ಬಾವ , ಜಾನಪದ ಸಂಶೋಧಕ ಕೆ. ಎಲ್. ಕುಂಡಂತಾಯ, ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ರಾಜೀವ ಶೆಟ್ಟಿ ಎಡ್ತೂರು, ಕ್ರೀಡಾರತ್ನ ಪುರಸ್ಕೃತ ದೇವೇಂದ್ರ ಕೋಟ್ಯಾನ್, ಹಾಗೂ ದೇಹರ್ದಾಢ್ಯ ಪಟು ದೇವೀಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ವಿಜಯಾ ಬ್ಯಾಂಕ್ ಎಕ್ಸಿಕ್ಯೂಟವ್ ಡೈರೆಕ್ಟರ್ ಕೆ. ಆರ್. ಶೆಣೈ , ಕಾಪು ಬಂಟರ ಸಂಘದ ಅಧ್ಯಕ್ಷ ವಾಸುದೇವ ಶೆಟ್ಟಿ, ಮುಂಬಯಿ ಉದ್ಯಮಿ ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿ, ಭಾಜಪ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರಾಜಗೋಪಾಲ ರೈ, ಜಿಲ್ಲಾ ಬಿಜೆಪಿ ನಾಯಕ ಜಗದೀಶ ಅಧಿಕಾರಿ, ಉಡುಪಿ ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಗುಲಾಂ ಮೊಹಮ್ಮದ್, ಬಪ್ಪನಾಡು ಗ್ರ್ರೂಪ್ಸ್ ಬೆಂಗಳೂರು ಆಡಳಿತ ನಿರ್ದೇಶಕ ರಿಜ್ವಾನ್ ಬಪ್ಪನಾಡು, ಬೆಂಗಳೂರು ಉದ್ಯಮಿ ಬಾಲಕೃಷ್ಣ ಶೆಟ್ಟಿ, ಪಡುಬಿದ್ರೆ ಬಂಟರ ಸಂಘದ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ, ಬಾರ್ಕೂರು ಕಚ್ಚೂರು ನಾಗೇಶ್ವರ ದೇವಳದ ಆಡಳಿತ ಮೊಕ್ತೇಸರ ಗಂಗಾಧರ ಭಂಡಾರಿ ಬಿರ್ತಿ, ಪಣಂಬೂರು ಎಸಿಪಿ ರವಿಕುಮಾರ್, ಮೂಲ್ಕಿ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್, ಮಂಗಳೂರು ತಹಶೀಲ್ದಾರ ಮೊಹನ್ ರಾವ್, ಐಕಳ ಕಂಬಳ ಸಮಿತಿ ಅಧ್ಯಕ್ಷ ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಕಾರ್ಯಾಧ್ಯಕ್ಷ ಚಿತ್ತರಂಜನ್ ಭಂಡಾರಿ ಐಕಳಬಾವ, ಸಂಚಾಲಕ ಮುರಳೀಧರ ಶೆಟ್ಟಿ ಐಕಳ, ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಪ್ರಧಾನ ಕಾರ್ಯದರ್ಶಿ ಕೃಷ್ಣ ಮಾರ್ಲ, ಜಯಪಾಲ ಶೆಟ್ಟಿ ಐಕಳ, ಸ್ವರಾಜ್ ಶೆಟ್ಟಿ , ಶಶಿಧರ ಐಕಳ ಮತ್ತಿತರರು ಉಪಸ್ಥಿತರಿದ್ದರು.
ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-27011501 Kinnigoli-27011502 Kinnigoli-27011503

ಕಿನ್ನಿಗೋಳಿ ಸಮೀಪದ ಐಕಳದಲ್ಲಿ ಶನಿವಾರ ನಡೆದ ಕಂಬಳದಲ್ಲಿ ಒಟ್ಟು ದಾಖಲೆಯ 122 ಜೊತೆ ಕೋಣಗಳು ಭಾಗವಹಿಸಿದೆ.

ಕಂಬಳ ಫಲಿತಾಂಶ
ಕನಹಲಗೆ
ಬೇಲಾಡಿ ಬಾವ ಅಶೋಕ್ ಶೆಟ್ಟಿ (ಆರೂವರೆ ಕೋಲು ನಿಶಾನಿಗೆ ನೀರು ಹಾಯಿಸಿದೆ) (ಕೋಣ ಓಡಿಸಿದವರು ನಾರಾವಿ ಯುವರಾಜ್ ಜೈನ್)

ಹಗ್ಗ ಹಿರಿಯ
ಪ್ರಥಮ : ನಂದಳಿಕೆ ಶ್ರೀಕಾಂತ ಭಟ್. ಎ (ಕೋಣ ಓಡಿಸಿದವರು ನಕ್ರೆ ಜಯಕರ ಮಡಿವಾಳ)
ದ್ವಿತೀಯ: ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್. ಎ (ಕೋಣ ಓಡಿಸಿದವರು ಕೊಳಕೆ ಇರ್ವತ್ತೂರು ಆನಂದ)

ಹಗ್ಗ ಕಿರಿಯ
ಪ್ರಥಮ: ಹೊಸಬೆಟ್ಟು ಏರಿಮಾರು ಗೋಪಾಲಕೃಷ್ಣ ಭಟ್ (ಕೋಣ ಓಡಿಸಿದವರು ಆರಳ ಭಂಡಸಾಲೆ ಜಯ ಶೆಟ್ಟಿ)
ದ್ವಿತೀಯ : ಕಾಂತಾವರ ಬಾಂದೊಟ್ಟು ನಿಖಿಲ್ ಮೋಕ್ಷಿಕುಮಾರ್ (ಕೋಣ ಓಡಿಸಿದವರು ಕಾಂತಾವರ ಗುರುಪ್ರಸಾದ್ ಕೋಟ್ಯಾನ್)

ಅಡ್ಡ ಹಲಗೆ
ಪ್ರಥಮ : ಹಂಕರ್ ಜಾಲ್ ಬಿರ್ಮಣ್ಣ ಶೆಟ್ಟಿ ಬಿ (ಕೋಣ ಓಡಿಸಿದವರು ಮುಳಿಕಾರು ಕೇವುಡೇಲು ಅಣ್ಣಿ ದೇವಾಡಿಗ)
ದ್ವಿತೀಯ : ಗುರುಪುರ ಕೆದುಬರಿ ಯಶೋದ ಗುರುವಪ್ಪ ಪೂಜಾರಿ (ಕೋಣ ಓಡಿಸಿದವರು ನಾರಾವಿ ಯುವರಾಜ್ ಜೈನ್)

ನೇಗಿಲು ಹಿರಿಯ
ಪ್ರಥಮ: ಇರುವೈಲು ಪಾಣಿಲಾ ಬಾಡ ಪೂಜಾರಿ (ಕೋಣ ಓಡಿಸಿದವರು ಕೊಳಕೆ ಇರ್ವತ್ತೂರು ಆನಂದ)
ದ್ವಿತೀಯ : ವಿಟ್ಲ ಕುಂಡಡ್ಕ ಮರುವಾಳ ನಿಶಾನ್‌ದಾಸ (ಕೋಣ ಓಡಿಸಿದವರು ಹೊಕ್ಕಾಡಿಗೋಳಿ ಹಕ್ಕೇರಿ ಸಚಿನ್ ಶೆಟ್ಟಿ)

ನೇಗಿಲು ಕಿರಿಯ
ಪ್ರಥಮ : ಫರಂಗಿಪೇಟೆ ಗರಡಿಮನೆ ಸಂಜೀವ ಹೆಗ್ಡೆ (ಕೋಣ ಓಡಿಸಿದವರು ಬಂಗಾಡಿ ಆಶ್ರಫ್)
ದ್ವಿತೀಯ : ಎಲ್ಲೂರು ಭಂಡಾರ ಮನೆ ಹರೀಶ್ ಶೆಟ್ಟಿ (ಕೋಣ ಓಡಿಸಿದವರು ಉಜಿರೆ ಇಚ್ಛಾವು ದೇರಣ್ಣ ನಾಯ್ಕ)

Comments

comments

Comments are closed.

Read previous post:
Aikala-24011512
ಐಕಳ ಜೊಡುಕರೆ ಕಂಬಳ

ಕಿನ್ನಿಗೋಳಿ : ಇತಿಹಾಸ ಪ್ರಸಿದ್ದ ಕಾರ್ನಿಕದ ಐಕಳಭಾವ ಜೊಡುಕರೆ ಕಂಬಳ ಸಂಪ್ರದಾಯ ಬದ್ಧ ಧಾರ್ಮಿಕ ವಿಧಿ ವಿಧಾನ ಮತ್ತು ಜಾನಪದೀಯ ಸಂಸ್ಕ್ರತಿಗಳನ್ನು ಮೇಳೈಸಿಕೊಂಡು ಬಂದಿದ್ದು ಇದೀಗ ಐಕಳೋತ್ಸವ ಮಾದರಿಯಲ್ಲಿ...

Close