ಭಾರತದ ಸಂವಿಧಾನ ದಿನಾಚರಣೆ

ಮೂಲ್ಕಿ: ಅಂಬೇಡ್ಕರ್ ರವರ ಚಿಂತನೆಯ ಸಂವಿಧಾನದ ಆಶಯಗಳು ಸರ್ಕಾರದ ಇಚ್ಚಾಶಕ್ತಿಯ ಕೊರತೆಯಿಂದ 65 ವರ್ಷ ಕಳೆದರೂ ಈಡೇರದಿರುವುದು ದುರಾದೃಷ್ಟ ಕರವಾಗಿದೆಯೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮೈಸೂರು ವಿಭಾಗದ ಸಂಚಾಲಕ ಶೇಖರ್ ಹೆಜಮಾಡಿ ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೋ ಬಿ ಕೃಷ್ಣಪ್ಪ ಸ್ಥಾಪಿತ) ಮೂಲ್ಕಿ ಹೋಬಳಿ ಶಾಖೆಯ ವತಿಯಿಂದ ಮೂಲ್ಕಿಯ ಅಮೃತಾ ಮಯಿ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ನಡೆದ ಭಾರತದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮೂಲ್ಕಿ ಹೋಬಳಿಯ ಸಂಚಾಲಕ ಸುರೇಶ್ ಕೆರೆಕಾಡು ವಹಿಸಿದ್ದು ಜಿಲ್ಲಾ ಸಂಘಟನಾ ಸಂಚಾಲಕ ಈಸು ಕುಮಾರ್, ಜಯ ಕರ್ನಿರೆ, ಗೋಪಾಲ ಕರ್ನಿರೆ, ದೇವದಾಸ್ ಕೆರೆಕಾಡು, ಲಕ್ಷ್ಮಣ್, ಮಹಿಳಾ ಘಟಕದ ವಿನೋದಾ ಚಿತ್ರಾಪು, ಗುಣವತಿ ಗೇರುಕಟ್ಟೆ, ಶೋಭಾ ಕಾರ್ನಾಡು ಮತ್ತಿತರರು ಉಪಸ್ತಿತರಿದ್ದರು.

Prakash Suvarna

Mulki-28011502

Comments

comments

Comments are closed.

Read previous post:
Mulki-28011501
ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಮೂಲ್ಕಿ: ಪಡುಪಣಂಬೂರಿನ ಸಮಾಜ ಸೇವಕ ಪದ್ಮನಾಭ ಶಣೈ ಸ್ಮರಣಾರ್ಥ ಸ್ಥಳೀಯರು ಅರಸರಾದ ದುಗ್ಗಣ್ಣ ಸಾವಂತರ ನೇತೃತ್ವದಲ್ಲಿ ಮೂಲ್ಕಿ ಸರಕಾರಿ ಆಸ್ಪತ್ರೆಯಲ್ಲಿರುವ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು. ಈ...

Close