ಕಿನ್ನಿಗೋಳಿ : ರಸ್ತೆ ಸುರಕ್ಷತಾ ಅಭಿಯಾನ

ಕಿನ್ನಿಗೋಳಿ: ಜನಪರ ಕಾಳಜಿಯ ರಾಜಕಾರಣಿ ಹಾಗೂ ಸಮಾಜ ಸೇವಕರಾದ ಸೋಮಪ್ಪ ಸುವರ್ಣ ಹೆಸರಿನಲ್ಲಿ ಜನಪಯೋಗಿ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಯುವಜನ ಸೇವೆ ಕ್ರೀಡೆ ಮತ್ತು ಮೀನುಗಾರಿಕಾ ಸಚಿವ ಕರ. ಅಭಯಚಂದ್ರ ಜೈನ್ ಹೇಳಿದರು.
ಬುಧವಾರ ಕಿನ್ನಿಗೋಳಿ ಬಸ್‌ನಿಲ್ದಾಣದಲ್ಲಿ ಶಿಕ್ಷಣ ತಜ್ಞ ಕೆ. ಸೋಮಪ್ಪ ಸುವರ್ಣರ ಸ್ಮರಣಾರ್ಥ ಪ್ರಯಾಣಿಕರ ಸೌಲಭ್ಯಕ್ಕಾಗಿ ಕಿನ್ನಿಗೋಳಿ ಬಸ್‌ನಿಲ್ದಾಣದ ಬಳಿ 1.5 ಲಕ್ಷರೂ ವೆಚ್ಚದಲ್ಲಿ ನಿರ್ಮಿಸಿದ ಎಲ್. ಇ. ಡಿ ಡಿಸ್‌ಪ್ಲೇ ಡಿಜಿಟಲ್ ಬೋರ್ಡ್ ಹಾಗೂ ರಸ್ತೆ ಸುರಕ್ಷತಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಕಿನ್ನಿಗೋಳಿ ಗ್ರಾ. ಪಂ. ಅಧ್ಯಕ್ಷೆ ಶ್ಯಾಮಲಾ ಹೆಗ್ಡೆ , ಕಿನ್ನಿಗೋಳಿ ವಲಯ ಬಸ್ ಮಾಲಕರ ಸಂಘದ ಅದ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ , ಕಿನ್ನಿಗೋಳಿ ವಲಯ ಬಸ್ ಚಾಲಕರ ಮತ್ತು ನಿರ್ವಾಹಕರ ಸಂಘದ ಅದ್ಯಕ್ಷ ಭಾಸ್ಕರ ಅಮೀನ್, ಸುರಗಿರಿ ದೇವಳದ ಆಡಳಿತ ಮೊPಸರ ಸೀತಾರಾಮ ಶೆಟ್ಟಿ , ಸುರತ್ಕಲ್ ಟ್ರಾಫಿಕ್ ಪೋಲೀಸ್ ನಿರೀಕ್ಷಕ ಗೋಪಾಲಕೃಷ್ಣ ಭಟ್, ಎಪಿಎಮ್‌ಸಿ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು, ಉದ್ಯಮಿ ಚೆನ್ನಕೇಶವ ಸುವರ್ಣ, ಹರೀಂದ್ರ ಸುವರ್ಣ ಉಪಸ್ಥಿತರಿದ್ದರು. ಪ್ರಮೋದ್ ಕುಮಾರ್ ಪ್ರಸ್ತಾವನೆಗೈದು ಸ್ವಾಗತಿಸಿದರು. ದಿವಾಕರ ಕರ್ಕೇರಾ ಕಾರ್ಯಕ್ರಮ ನಿರೂಪಿಸಿದರು.

Kinnigoli-28011503

Comments

comments

Comments are closed.

Read previous post:
FAB_give_blood
ಕಿನ್ನಿಗೋಳಿ ಬೃಹತ್ ರಕ್ತದಾನ ಶಿಬಿರ

ಕಿನ್ನಿಗೋಳಿ: ಕಿನ್ನಿಗೋಳಿ ಬಸ್ಸು ಚಾಲಕರ - ನಿರ್ವಾಹಕರ ಸಂಘ ಕಿನ್ನಿಗೋಳಿ ವಲಯದ ನೇತೃತ್ವ, ಕೆ. ಎಮ್. ಸಿ ಮಂಗಳೂರು ಹಾಗೂ ಶ್ರೀನಿವಾಸ ಆಸ್ಪತ್ರೆ ಮುಕ್ಕ ಸಹಭಾಗಿತ್ವದಲ್ಲಿ ಈಶ್ವರ್ ಕಟೀಲು...

Close