ಕೆ. ಸೋಮಪ್ಪ ಸುವರ್ಣ – ಪ್ರಶಸ್ತಿ ಪ್ರಧಾನ

ಕಿನ್ನಿಗೋಳಿ: ಪ್ರಗತಿ ಪರ ಕೃಷಿಕ, ಶಿಕ್ಷಣ ತಜ್ಞ ಹಾಗೂ ಸಾಮಾಜಿಕ ನೇತಾರನಾಗಿ ಸಮಾಜಕ್ಕೆ ಅನೇಕ ಕೊಡುಗೆ ಅನನ್ಯ. ಅವರ ಉದಾತ್ತ ಧ್ಯೇಯ ಯೋಜನೆ ಯೋಚನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಬೇಕು ಎಂದು ಮಂಗಳೂರು ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸದಾನಂದ ಸುವರ್ಣ ಹೇಳಿದರು.
ಬುಧವಾರ ಕಿನ್ನಿಗೋಳಿ ಸಮೀಪದ ತಾಳಿಪಾಡಿ ಬಿಲ್ಲವ ಸಂಘದ ವಠಾರದಲ್ಲಿ ಕೆ. ಸೋಮಪ್ಪ ಸುವರ್ಣ ನೆರಳು ನೆಂಪು ಸಮಿತಿ ಮುಲ್ಕಿ ಇದರ ವತಿಯಿಂದ ಕೆ. ಸೋಮಪ್ಪ ಸುವರ್ಣರ ಸಂಸ್ಮರಣಾ- ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಪ್ರಗತಿಪರ ಕೃಷಿಕ ಪುನರೂರು ಮೂಡುಮನೆ ರಮೇಶ್ ರಾವ್, ಹಿರಿಯ ಸಾಹಿತಿ ಸುಮುಖಾನಂದ ಜಲವಳ್ಳಿ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ತಾಳಿಪಾಡಿ ಬಿಲ್ಲವ ಸಂಘದ ಅಧ್ಯಕ್ಷ ಬಾಲಕೃಷ್ಣ ಡಿ. ಸಾಲ್ಯಾನ್, ಕೆ. ಮುರಳೀಧರ ಭಂಡಾರಿ, ಎಚ್. ವಿ. ಕೋಟ್ಯಾನ್, ಗಣೇಶ್ ಅಮೀನ್ ಸಂಕಮಾರ್, ಹರೀಶ್ಚಂದ್ರ ಸಾಲ್ಯಾನ್, ಚೆನ್ನಕೇಶವ ಸುವರ್ಣ, ಪ್ರಮೋದ್ ಕುಮಾರ್, ಹರೀಂದ್ರ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಚಂದ್ರಶೇಖರ ಸುವರ್ಣ ಸ್ವಾಗತಿಸಿ, ವೈ. ಎನ್. ಸಾಲ್ಯಾನ್ ಪ್ರಸ್ತಾವನೆಗೈದರು. ಪೊಂಪೈ ಕಾಲೇಜು ಉಪನ್ಯಾಸಕ ಪ್ರೊ. ಜಗದೀಶ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು.

Kinnigoli-29011502

Comments

comments

Comments are closed.

Read previous post:
Mulki-29011501
ರಿಕ್ಷಾ ಸಂಚಾರ ಬಂದ್ ಮಾಡಿ ಪ್ರತಿಭಟನೆ

ಮೂಲ್ಕಿ: ಜಿಲ್ಲಾ ಸಾರಿಗೆ ಪ್ರಾಧಿಕಾರವು ಅಟೋ ದರವನ್ನು ಇಳಿಸಿದನ್ನು ಖಂಡಿಸಿ ಮೂಲ್ಕಿ ವ್ಯಾಪ್ತಿಯ ರಿಕ್ಷಾ ಚಾಲಕ-ಮಾಲಕರು ತಮ್ಮ ಸಂಘಟನೆಯ ನೇತ್ರತ್ವದಲ್ಲಿ ರಿಕ್ಷಾ ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದರು....

Close