ಯುವಪೀಳಿಗೆಯಲ್ಲಿ ಅರಿವು ಸಮಾಜದ ನಿರ್ಮಾಣ

ಕಿನ್ನಿಗೋಳಿ: ಸದ್ವಿಚಾರದ ಧಾರ್ಮಿಕ ನಂಬಿಕೆಗಳನ್ನು ಯುವಪೀಳಿಗೆಯಲ್ಲಿ ಅರಿವು ಮೂಡಿಸುವಂತಹ ಕಾರ್ಯ ಹಿರಿಯರಿಂದಾಗಬೇಕು ಹಾಗಾದಾಗ ಸಂಸ್ಕಾರಭರಿತ ಸಮಾಜ ನಿರ್ಮಾಣವಾಗುವುದು ಎಂದು ವೆ.ಮೂ. ವಾಸುದೇವ ಭಟ್ ಪಂಜ ಹೇಳಿದರು.
ಅತ್ತೂರು ಕಾಫಿಕಾಡು ಶ್ರೀ ಕೋರ‍್ದಬ್ಬು ದೈವಸ್ಥಾನದ ವಾರ್ಷಿಕ ನೇಮೋತ್ಸವದ ಅಂಗವಾಗಿ ಬುಧವಾರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಈ ಸಂಧರ್ಭ ಯಕ್ಷಗಾನದ ತೆಂಕು ಹಾಗೂ ಬಡಗು ತಿಟ್ಟುಗಳಲ್ಲಿ ಪಳಗಿದ ಖ್ಯಾತ ಹಾಸ್ಯ ಕಲಾವಿದ ಸೀತರಾಮ್‌ಕುಮರ್ ಕಟೀಲ್ ಹಾಗೂ ಕರಾಟೆ ಶಿಕ್ಷಕ ಈಶ್ವರ್ ಕಟೀಲ್ ಅವರನ್ನು ಸನ್ಮಾನಿಸಲಾಯಿತು.
ಎಸ್.ಬಿ.ಎಸ್. ಡಿಜಿಟಲ್ಸ್‌ನ ಸತೀಶ್ ನಿರ್ಮಿಸಿದ, ಹಿರಿಯ ರಂಗಕರ್ಮಿ ಕೆ.ಕೆ. ಪೇಜಾವರ ಅವರ ಸಾಹಿತ್ಯ ಮತ್ತು ಗುರುರಾಜ್ ಎಂ.ಬಿ ಸಂಗೀತದ ಶೀನಾ ಸ್ವಾಮಿ ನಂಬಿನ ಕಾರ್ಣಿಕದ ಬಬ್ಬು ಸ್ವಾಮಿ ತುಳು ಭಕ್ತಿಗೀತೆಗಳು ಹಾಗೂ ಬಬ್ಬು ಚರಿತ್ರೆಯ ಡಿವಿಡಿಯನ್ನು ಬಿಡುಗಡೆಗೊಳಿಸಲಾಯಿತು.
ಕೆಮ್ರಾಲ್ ಮಾಜಿ ಮಂಡಲ ಪ್ರಧಾನ ಬಾಲಾದಿತ್ಯ ಆಳ್ವ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಯುಗಪುರುಷದ ಭುವನಾಭಿರಾಮ ಉಡುಪ, ಮುಂಬೈ ಉದ್ಯಮಿಗಳಾದ ವಾಸು ಪೂಜಾರಿ, ಮಾಧವ ಅಮೀನ್, ಉದ್ಯಮಿ ಗುರುರಾಜ್ ಎಸ್. ಪೂಜಾರಿ, ಸುರಗಿರಿ ಯುವಕ ಸಂಘ ಅಧ್ಯಕ್ಷ ಸಚಿನ್ ಶೆಟ್ಟಿ ಅತ್ತೂರು, ಅತ್ತೂರು ಕಾಫಿಕಾಡು ಕೋರ‍್ದಬ್ಬು ದೈವಸ್ಥಾನ ಆಡಳಿತ ಮೊಕ್ತೇಸರ ಶೀನ ಸ್ವಾಮಿ, ಅಧ್ಯಕ್ಷ ರಾಮಚಂದ್ರ ಕುಲಾಲ್, ಅರ್ಚಕ ಸಾಧು ಗುರಿಕಾರ ಉಪಸ್ಥಿತರಿದ್ದರು.

ಜಗದೀಶ ಸ್ವಾಗತಿಸಿ, ನಿಶಾ ಮತ್ತು ಗೋಪಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

Kinnigoli-29011503

Comments

comments

Comments are closed.

Read previous post:
Kinnigoli-29011502
ಕೆ. ಸೋಮಪ್ಪ ಸುವರ್ಣ – ಪ್ರಶಸ್ತಿ ಪ್ರಧಾನ

ಕಿನ್ನಿಗೋಳಿ: ಪ್ರಗತಿ ಪರ ಕೃಷಿಕ, ಶಿಕ್ಷಣ ತಜ್ಞ ಹಾಗೂ ಸಾಮಾಜಿಕ ನೇತಾರನಾಗಿ ಸಮಾಜಕ್ಕೆ ಅನೇಕ ಕೊಡುಗೆ ಅನನ್ಯ. ಅವರ ಉದಾತ್ತ ಧ್ಯೇಯ ಯೋಜನೆ ಯೋಚನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಬೇಕು...

Close