ಕಟೀಲು ಗ್ರಾಮ ಪಂಚಾಯಿತಿ ಎಂದು ನಾಮಕರಣವಾಗಲಿ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿಗೆ ಒಳಪಟ್ಟ ಮೆನ್ನಬೆಟ್ಟು, ಕಿಲೆಂಜೂರು, ನಡುಗೋಡು, ಕೊಂಡೆಮೂಲ ಗ್ರಾಮಗಳ 2014-15ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಬುಧವಾರ ಪಂಚಾಯಿತಿ ಅಧ್ಯಕ್ಷ ಜನಾರ್ದನ ಕಿಲೆಂಜೂರು ಅವರ ಅಧ್ಯಕ್ಷತೆಯಲ್ಲಿ ರಾಜೀವ ಗಾಂಧಿ ಸೇವಾ ಕೇಂದ್ರ ಸಭಾ ಭವನದಲ್ಲಿ ನಡೆಯಿತು.
ಕೊಂಡೆಮೂಲ ಪ್ರತ್ಯೇಕ ಗ್ರಾಮ ಪಂಚಾಯಿತಿ ಎಂದು ಈಗಾಗಲೇ ಫೋಷಣೆಯಾಗಿದ್ದು ಮುಂದೆ ಪಂಚಾಯಿತಿ ರಚನೆ ಸಂದರ್ಭ ಕಟೀಲು ಗ್ರಾಮ ಪಂಚಾಯಿತಿ ಎಂದು ನಾಮಕರಣ ಮಾಡಬೇಕು ಎಂದು ಗ್ರಾಮ ಸಭೆಯಲ್ಲಿ ಎಂದು ನಿರ್ಣಯಿಸಲಾಯಿತು.
ಕಟೀಲು ಬಸ್ಸು ನಿಲ್ದಾಣ ಹಾಗೂ ರಥಬೀದಿಯ ಸಮೀಪ ತ್ಯಾಜ್ಯ ನೀರು ಚರಂಡಿಯಲ್ಲಿ ಹರಿದು ದುರ್ವಾಸನೆ ಹೆಚ್ಚಾಗುತ್ತದೆ. ಇನ್ನು ಬೇಸಿಗೆ ಕಾಲದಲ್ಲಿ ಇನ್ನೂ ಹೆಚ್ಚಾಗುವ ಸಂದರ್ಭವಿದ್ದು ಸಾಂಕ್ರಮಿಕ ರೋಗಗಳು ಹರಡುವ ಮುನ್ನ ಮತ್ತು ಯಾತ್ರಾರ್ಥಿ ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ ಎಂದು ಮೆನ್ನಬೆಟ್ಟು ಗ್ರಾಮ ಸಭೆಯಲ್ಲಿ ಒಕ್ಕೊಲರಿನಿಂದ ಗ್ರಾಮಸ್ಥರು ಒತ್ತಾಯಿಸಿದರು. ಕಟೀಲು ರಥ ಬೀದಿಯಲ್ಲಿ ಹರಿಯುವ ತ್ಯಾಜ್ಯ ನೀರು ರಸ್ತೆಯ ಬದಿಯಲ್ಲಿ ಹರಿಯುತ್ತಿದೆ ಈ ಸಮಸ್ಯೆ ಪರಿಹಾರಕ್ಕೆ ಮುಜರಾಯಿ ಸಚಿವರಿಗೆ ಮನವಿ ನೀಡಬೇಕು ಎಂದು ಗ್ರಾಮ ಸಭೆಯಲ್ಲಿ ಸಂಜೀವ ಮಡಿವಾಳ ಒತ್ತಾಯಿಸಿದರು.
ಮೂರುಕಾವೇರಿ ಮಾರಿಗುಡಿ ಸಮೀಪದ ಮೂಡಬಿದ್ರೆ- ಕಟೀಲು ಕೂಡು ರಸ್ತೆ ಬಳಿಯ ರಸ್ತೆಯ ಉಬ್ಬು ಹಾಗೂ ಘನ ವಾಹನ ಸಮಸ್ಯೆಯನ್ನು ನ್ಯಾಯ ಸಮಿತಿ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಎಂದು ಅಧ್ಯಕ್ಷರು ಹಾಗೂ ಇಂಜೀನಿಯರ್ ತಿಳಿಸಿದರು.
ಕಿನ್ನಿಗೋಳಿಯ ಮೆಸ್ಕಾಂ ಕಚೇರಿ ಮುಲ್ಕಿಗೆ ಸ್ಥಳಾಂತರದ ಬಗ್ಗೆ ಹುನ್ನಾರ ನಡೆಯುತ್ತಿದೆ ಈ ಬಗ್ಗೆ ಮೆನ್ನಬೆಟ್ಟು ಹಾಗೂ ಕ್ರಮ ತೆಗೆದುಕೊಳ್ಳಿ ಎಂದು ಭುವನಾಭಿರಾಮ ಉಡುಪ ತಿಳಿಸಿದರು.
ಕಟೀಲು ಸಮೀಪದ ಬಲ್ಲಣದ ಬಳಿಯ ನೀರಿನ ಟ್ಯಾಂಕ್ ಶುಚಿಗೊಳಿಸಬೇಕು,ರಸ್ತೆ ಬದಿಯ ಕೈಪಂಪು ನಾಪತ್ತೆಯಾಗಿದೆ ಎಂದು ಸ್ಥಳೀಯ ನಿವಾಸಿ ಆನಂದಿ ಹೇಳಿದರು.
ಕೊರಗ ಜನಾಂಗದವರಿಗೆ ಬಹಳಷ್ಟು ಸವಲತ್ತುಗಳು ಇದ್ದು ಆದರೇ ಅವರ ಜಾಗದ ಕಾಗದ ಪತ್ರಗಳು ಸರಿಯಾಗಿ ಇರದೆ ಅವರು ಸರ್ಕಾರದ ಸೌಲಭ್ಯಗಳು ಸಿಗುವುದು ಕಷ್ಟ ಸಾಧ್ಯವಾಗಿದೆ ಆದ್ದರಿಂದ ಈ ಬಗ್ಗೆ ಸರಿಯಾದ ಮಾಹಿತಿಯನ್ನು ಗ್ರಾಮ ಪಂಚಾಯಿತಿ ಸದಸ್ಯರು ಅವರಿಗೆ ತಿಳುವಳಿಕೆ ಹಾಗೂ ಮನವರಿಕೆ ಮಾಡಿ ಸಹಾಯ ಮಾಡಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು.
ಶಿಕ್ಷಣ ಇಲಾಖೆಯ ದಿನೇಶ್ ಕೆ. ನೋಡಲ್ ಅಧಿಕಾರಿಯಾಗಿದ್ದರು. ಪಿಡಿಒ ಪ್ರಕಾಶ್ ಬಿ., ಜಿ. ಪಂ. ಸದಸ್ಯ ಈಶ್ವರ್ ಕಟೀಲ್, ತಾ. ಪಂ. ಸದಸ್ಯೆ ಬೇಬಿ ಕೋಟ್ಯಾನ್, ಉಪಾಧ್ಯಕ್ಷೆ ಸರೋಜಿನಿ, ಇಂಜೀನಿಯರ್ ಪ್ರಶಾಂತ್ ಆಳ್ವ, ಸಹಾಯಕ ಕೃಷಿ ಅಧಿಕಾರಿ ಎಂ. ಬಾಲಕೃಷ್ಣ, ತೋಟಗಾರಿಕೆ ಇಲಾಖೆಯ ಏಕಾಂತ್ ಎಚ್., ಅಂಗನವಾಡಿ ಮೇಲ್ವಿಚಾರಕಿ ಅಶ್ವಿನಿ ಎಂ.ಕೆ., ಸಿ.ಆರ್.ಪಿ. ಜಗದೀಶ್ ನಾವಡ, ಗ್ರಾಮ ಕರಣಿಕ ಕಿರಣ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-28011505

Comments

comments

Comments are closed.

Read previous post:
Kinnigoli-29011503
ಯುವಪೀಳಿಗೆಯಲ್ಲಿ ಅರಿವು ಸಮಾಜದ ನಿರ್ಮಾಣ

ಕಿನ್ನಿಗೋಳಿ: ಸದ್ವಿಚಾರದ ಧಾರ್ಮಿಕ ನಂಬಿಕೆಗಳನ್ನು ಯುವಪೀಳಿಗೆಯಲ್ಲಿ ಅರಿವು ಮೂಡಿಸುವಂತಹ ಕಾರ್ಯ ಹಿರಿಯರಿಂದಾಗಬೇಕು ಹಾಗಾದಾಗ ಸಂಸ್ಕಾರಭರಿತ ಸಮಾಜ ನಿರ್ಮಾಣವಾಗುವುದು ಎಂದು ವೆ.ಮೂ. ವಾಸುದೇವ ಭಟ್ ಪಂಜ ಹೇಳಿದರು. ಅತ್ತೂರು ಕಾಫಿಕಾಡು...

Close