ಮೂಡಬಿದಿರೆ ಜಿಎಸ್‌ಬಿ ಸಮಾವೇಶ ಬೈಕ್ ಜಾಥಾ

 ಕಿನ್ನಿಗೋಳಿ : ಮೂಡಬಿದಿರೆ ಪದ್ಮಾವತಿ ಕಲಾ ಮಂದಿರದಲ್ಲಿ ಫೆ.1 ರಂದು  ನಡೆಯಲಿರುವ ಗುರುಪುರ- ಮೂಡಬಿದಿರೆ- ಮೂಲ್ಕಿ ವಲಯ ಮಟ್ಟದ ಸಮಾವೇಶಕ್ಕೆ ಪೂರ್ವಭಾವಿಯಾಗಿ ಶನಿವಾರ ಬಕ್ ರ‍್ಯಾಲಿ ನಡೆಯಿತು. ಜನಪ್ರಿಯ ವೈದ್ಯ ಡಾ.  ಹರೀಶ್ ನಾಯಕ್ ಬೈಕ್ ಜಾಥಾ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಮಾವೇಶ ಸಮಿತಿಯ ಅಧ್ಯಕ್ಷ ಜಿ. ಉಮೇಶ್ ಪೈ , ವೇದಿಕೆಯ ಅಧ್ಯಕ್ಷ ಜಿ. ಸತೀಶ್ ಹೆಗ್ಡೆ , ಸಂಯೋಜಕ ಎಂ. ಅಶೋಕ್‌ಮಲ್ಯ , ರ‍್ಯಾಲಿ ಪ್ರಮುಖರಾದ ಸ್ವಾತಿಕ್ ಮಲ್ಯ, ಬಿ. ರಾಜೇಶ್ ಬಾಳಿಗಾ, ಪ್ರಧಾನ ಕಾರ್ಯದರ್ಶಿ ರವೀಂದ್ರ ಪೈ, ಕೋಶಾಧ್ಯಕ್ಷ ಶ್ರೀಕಾಂತ್ ಕಾಮತ್, ಸಂಘಟನಾ ಕಾರ್ಯದರ್ಶಿ ಪ್ರಸನ್ನ ಶೆಣೈ , ಸಂಚಾಲಕ ರಘುವೀರ ಶೆಣೈ ಹಾಗೂ ಗುರುಪುರ, ಮೂಲ್ಕಿ , ಬಜಪೆ, ಕಿನ್ನಿಗೋಳಿ ಜಿಎಸ್‌ಬಿ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

ಬೈಕ್ ಜಾಥಾ ಸ್ವರಾಜ್ ಮೈದಾನದಿಂದ ಆರಂಭಗೊಂಡ ರ‍್ಯಾಲಿಯು ಪೇಪರ್ ಮಿಲ್ ರಸ್ತೆಯಾಗಿ ಮಹಾವೀರ್ ಕಾಲೇಜು ಬಳಿಯಿಂದ ಹಾದು ಹೋಗಿ ಹಳೆ ಪೋಲೀಸ್ ಠಾಣೆಯ ಬಳಿಯಿಂದ ಅಲಂಗಾರು , ಕೆಸರ್‌ಗದ್ಡೆ ಬೆಳುವಾಯಿ ಮೂಲಕ ವಾಗಿ ಹಿಂದುರಿಗಿ ಕೊಡ್ಯಡ್ಕ ಮಾರ್ಗವಾಗಿ ಮಿತ್ತಬಲು ಮಾರ್ಗವಾಗಿ ಪಾಲಡ್ಕ ಮೈದಾನವಾಗಿ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಸಮಾಪನ ಗೊಂಡಿತು. ಸುಮಾರು 400 ಕ್ಕೂ ಮಿಕ್ಕಿ ದ್ವಿಚಕ್ರವಾಹನಗಳು ರ‍್ಯಾಲಿಯಲ್ಲಿ ಭಾಗವಹಿಸಿದ್ದವು ಎಂದು ಹಿತರಕ್ಷಣಾ ವೇದಿಕೆಯ ಸಂಚಾಲಕ ಆರ್ ವಿವೇಕಾನಂದ ಶೆಣೈ ತಿಳಿಸಿದರು.

Kinnigoli-31011509

Comments

comments

Comments are closed.

Read previous post:
Kinnigoli-31021501
ಹೊನಲು ಬೆಳಕಿನ ಕ್ರಿಕೆಟ್ ಎಸ್‌ಎಸ್‌ಸಿಎಕೆ ಸಂತೋಷ್ ನಗರ ವಿಜಯಿ

ಕಿನ್ನಿಗೋಳಿ : ಶಾಂತಿನಗರ ಗುತ್ತಕಾಡು ಯಂಗ್ ಫ್ರೆಂಡ್ಸ್ ಸ್ಫೋಟ್ಸ್ ಕ್ಲಬ್ ಆಯೋಜಿಸಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟದಲ್ಲಿ ಎಸ್‌ಎಸ್‌ಸಿಎಕೆ ಸಂತೋಷ್ ನಗರ ಉಡುಪಿ ಹಾಗೂ ಸಿಟಿ...

Close