ಹೊನಲು ಬೆಳಕಿನ ಕ್ರಿಕೆಟ್ ಎಸ್‌ಎಸ್‌ಸಿಎಕೆ ಸಂತೋಷ್ ನಗರ ವಿಜಯಿ

ಕಿನ್ನಿಗೋಳಿ : ಶಾಂತಿನಗರ ಗುತ್ತಕಾಡು ಯಂಗ್ ಫ್ರೆಂಡ್ಸ್ ಸ್ಫೋಟ್ಸ್ ಕ್ಲಬ್ ಆಯೋಜಿಸಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟದಲ್ಲಿ ಎಸ್‌ಎಸ್‌ಸಿಎಕೆ ಸಂತೋಷ್ ನಗರ ಉಡುಪಿ ಹಾಗೂ ಸಿಟಿ ಪ್ರೆಂಡ್ಸ್ ಕೊಲ್ನಾಡು ಮುಲ್ಕಿ ನಡುವಣ ನಡೆದ ಫೈನಲ್ ಪಂದ್ಯದಲ್ಲಿ ಪ್ರಥಮ ಪ್ರಶಸ್ತಿಯನ್ನು ಎಸ್‌ಎಸ್‌ಸಿಎಕೆ ಸಂತೋಷ್ ನಗರ ಉಡುಪಿ ೧ ಲಕ್ಷ ರೂ. ನಗದು ಹಾಗೂ ಶಾಶ್ವತ ಯಂಗ್ ಫ್ರೆಂಡ್ಸ್ ಟ್ರೋಫಿ ಪಡೆದುಕೊಂಡಿತು. ದ್ವಿತೀಯ ಪ್ರಶಸ್ತಿಯನ್ನು ಸಿಟಿ ಫ್ರೆಂಡ್ಸ್ ಕೊಲ್ನಾಡು ಮುಲ್ಕಿ ೫೦ ಸಾವಿರ ನಗದು ಪುರಸ್ಕಾರ ಹಾಗೂ ಶಾಶ್ವತ ಯಂಗ್ ಫ್ರೆಂಡ್ಸ್ ಟ್ರೋಫಿ ಪಡೆದು ಕೊಂಡಿತು.
ಡಾ. ಐಕಳಬಾವ ದೇವಿ ಪ್ರಸಾದ್ ಶೆಟ್ಟಿ ಬೆಳಪು ವಿಜಯಿ ತಂಡಗಳಿಗೆ ಪ್ರಶಸ್ತಿ ವಿತರಿಸಿದರು.
ಬಪ್ಪನಾಡ್ ಸಮೂಹ ಸಂಸ್ಥೆಗಳ ಮಾಲಕ ರಿಝ್ವಾನ್ ಬಪ್ಪನಾಡ್, ಮೂಕಾಂಬಿಕಾ ದೇವಸ್ಥಾನ ದರ್ಮದರ್ಶಿ ವಿವೇಕಾನಂದ, ದಲಿತ ಸಂಘರ್ಷ ಸಮೀತಿಯ ಅಧ್ಯಕ್ಷ ಕೃಷ್ಣ ಅಂಚನ್, ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ವಿಲಿಯಂ ಸಿಕ್ವೇರಾ, ಕಿನ್ನಿಗೋಳಿ ಕಾರು ಚಾಲಕ ಮಾಲಕರ ಸಂಘದ ಅಧ್ಯಕ್ಷ ಭವಾನಿ ಶಂಕರ್, ಮುಲ್ಕಿ ನ.ಪಂ.ಸದಸ್ಯ ಪುತ್ತುಬಾವಾ, ಯುವ ಉದ್ಯಮಿ ರಾಜನ್ ಡಿ.ಕೋಸ್ತಾ, ರಾಜ್ಯ ಎಲ್‌ಐಸಿ ಪ್ರತಿನಿಧಿ ಲಕ್ಷ್ಮಣ್ ಸಾಲ್ಯಾನ್ ಪುನರೂರು, ಟಿ.ಎಚ್ ಮಯ್ಯದ್ದಿ, ಗಣೇಶ್ ಚೋಟರ್ಕೆ, ಹಸನಬ್ಬ ಟಿಂಬರ್, ವೈಎಫ್‌ಎಸ್‌ಸಿ ಕ್ಲಬ್‌ನ ಅಧ್ಯಕ್ಷ ಅಬೂಬಕರ್, ಕ್ರೀಡಾ ಗೌರವಾಧ್ಯಕ್ಷ ಮುಹಮ್ಮದ್ ಆಲಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-31021501

Comments

comments

Comments are closed.

Read previous post:
Kinnigoli-30011501
ಮಾನಂಪಾಡಿ ಶ್ರೀ ಧೂಮಾವತಿ ಜಾರಂದಾಯ ದೈವಸ್ಥಾನ

ಮೂಲ್ಕಿ: ಮಾನಂಪಾಡಿ ಶ್ರೀ ಧೂಮಾವತಿ ಜಾರಂದಾಯ ದೈವಸ್ಥಾನದಲ್ಲಿ ಪೂರ್ಣ ಅನುಗ್ರಹ ಪ್ರಾಪ್ತಿಗಾಗಿ ಮಾಗಣೆ ಅರಮನೆ ತಂತ್ರಿವರೇಣ್ಯರು, ಪ್ರಧಾನ ಅರ್ಚಕರು, ಗ್ರಾಮದ ಗುತ್ತು, ಮನೆತನ, ಊರ ಪರವೂರ ಹಾಗೂ ಕುಟುಂಬದ...

Close