ಮಂತ್ರದೇವತಾ ಸೇವಾ ಸಮಿತಿ ದಶಮಾನೋತ್ಸದ

ಕಿನ್ನಿಗೋಳಿ: ಮಕ್ಕಳಿಗೆ ಶಿಸ್ತು ಸಂಸ್ಕಾರ ಸಂಸ್ಕೃತಿ, ಮೌಲ್ಯಧಾರಿತ ಶಿಕ್ಷಣ ಎಳವೆಯಲ್ಲಿಯೇ ನೀಡಬೇಕು ಎಂದು ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು.
ಶನಿವಾರ ಐಕಳ ಮುಂಚಿಗುಡ್ಡೆ ಮಂತ್ರದೇವತಾ ಸೇವಾ ಸಮಿತಿಯ ದಶಮಾನೋತ್ಸದ ಅಂಗವಾಗಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಂಬಯಿ ಉದ್ಯಮಿ ವಿಶ್ವನಾಥ ಶೆಟ್ಟಿ ಐಕಳ, ದೀಪಕ್ ಪರ್ಮುದೆ, ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಾಧಕರಾದ ಐಕಳ ಕುಂರ್ಬಿಲ್‌ಗುತ್ತು ರಾಮಣ್ಣ ಶೆಟ್ಟಿ , ಶ್ರೀಧರ ಸಾಲ್ಯಾನ್, ಜಗನ್ನಾಥ ಅಮೀನ್, ಏಳಿಂಜೆ ದೇವಳ ಅರ್ಚಕ ಗಣೇಶ್ ಭಟ್, ಕೇಶವ ಕೋಟ್ಯಾನ್, ಯೋಗೀಶ್ ಕೋಟ್ಯಾನ್, ಉಮೇಶ್ ಅಮೀನ್ ಮುಂಚಿಗುಡ್ಡೆ , ಜಗನ್ನಾಥ ಅಮೀನ್, ಶರತ್ ಶೆಟ್ಟಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿ ನಿಶಾಂತ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ವಿಶ್ವನಾಥ್ ಸ್ವಾಗತಿಸಿದರು. ಶ್ರೀಶ ಐಕಳ ಕಾರ್ಯಕ್ರಮ ನಿರೂಪಿಸಿದರು.

Kinnigoli-02031502 Kinnigoli-02031503 Kinnigoli-02031504 Kinnigoli-02031505 Kinnigoli-02031506 Kinnigoli-02031507

Comments

comments

Comments are closed.

Read previous post:
Mulki-02031501
ಮೂಲ್ಕಿ ಸೈಂಟ್ ಆನ್ಸ್ ಶಿಕ್ಷಣ ಸಂಸ್ಥೆ ದಿನಾಚರಣೆ

ಮೂಲ್ಕಿ: ಕಠಿಣ ಶ್ರಮ, ಪ್ರಾಮಾಣಿಕತೆ ಪರಸ್ಪರ ಸಹಕಾರ ನೀಡುವ ಉತ್ತಮ ಗುಣವಿದ್ದಲ್ಲಿ ಮಾತ್ರ ಆರೋಗ್ಯ ಕಾರ್ಯಕ್ಷೇತ್ರದಲ್ಲಿ ಉನ್ನತಿ ಸಾಧ್ಯವಾಗಲಿದೆ ಎಂದು ಬೆಂಗಳೂರು ಸೋಲೂರಿನ ಸ್ನೇಹಾಲಯ ಕೋನ್ವೆಂಟ್ ಮುಖ್ಯಸ್ಥೆ...

Close