ಮೂಲ್ಕಿ ಸೈಂಟ್ ಆನ್ಸ್ ಶಿಕ್ಷಣ ಸಂಸ್ಥೆ ದಿನಾಚರಣೆ

ಮೂಲ್ಕಿ: ಕಠಿಣ ಶ್ರಮ, ಪ್ರಾಮಾಣಿಕತೆ ಪರಸ್ಪರ ಸಹಕಾರ ನೀಡುವ ಉತ್ತಮ ಗುಣವಿದ್ದಲ್ಲಿ ಮಾತ್ರ ಆರೋಗ್ಯ ಕಾರ್ಯಕ್ಷೇತ್ರದಲ್ಲಿ ಉನ್ನತಿ ಸಾಧ್ಯವಾಗಲಿದೆ ಎಂದು ಬೆಂಗಳೂರು ಸೋಲೂರಿನ ಸ್ನೇಹಾಲಯ ಕೋನ್ವೆಂಟ್ ಮುಖ್ಯಸ್ಥೆ ಸಿ. ಲೂಸಿ ರೋಡ್ರಿಗಸ್ ಹೇಳಿದರು.
ಮೂಲ್ಕಿ ಸೈಂಟ್ ಆನ್ಸ್ ಸಮೂಹ ನರ್ಸಿಂಗ್ ಶಿಕ್ಷಣ ಸಂಸ್ಥೆಗಳ ದಿನಾಚರಣೆ ಹಾಗೂ ಪದವಿ ಪ್ರಧಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಮಂಗಳೂರು ಫಾದರ್ ಮುಲ್ಲರ‍್ಸ್ ಶಿಕ್ಷಣ ಸಂಸ್ಥೆಯ ಅದ್ಯಾಪಕಿ ಸಿ. ಲೋರದಾನಾ ಕೋರಾ ಮಾತನಾಡಿ,ಶಿಕ್ಷಣದ ಮೂಲಕ ಉನ್ನತ ಸಾಧನೆಗಳನ್ನು ಮಾಡಿ ಬಳಿಕ ಸಮಾಜದ ಸೇವೆಗಾಗಿ ತಮ್ಮನ್ನು ತೊಡಗಿಸಿಕೊಳ್ಳುವುದು ನರ್ಸಿಂಗ್ ಕ್ಷೇತ್ರದ ಮಹತ್ವವಾಗಿದೆ ಈ ಬಗ್ಗೆ ಯುವ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೋಬೋಟೀಚರ‍್ಸ್ ಫೌಂಡೇಶನ್ ಮುಖ್ಯಸ್ಥ ಎರಿಕ್.ಸಿ ಲೋಬೋ ವಹಿಸಿದ್ದರು.
ಮುಖ್ಯ ಅತಿಥಿ ಸಿ. ಲೂಸಿ ರೋಡ್ರಿಗಸ್ ನರ್ಸಿಂಗ್ ನ ವಿವಿಧ ಪದವಿ ಗಳಿಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ವಿತರಿಸಿದರು.
ಕಲಿಕೆ, ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ದಾ ವಿಜೇತರಿಗೆ ಬಹುಮಾನ ನೀಡಲಾಯಿತು.
ಈ ಸಂದರ್ಭ ಕಾಲೇಜ್ ಆಫ್ ನರ್ಸಿಂಗ್ ಪ್ರಾಂಶುಪಾಲೆ ಹೆಲೆನ್ ಕ್ಲಾರೆಟ್ ಡಿಸೋಜಾ, ಸ್ಕೂಲ್ ಆಫ್ ನರ್ಸಿಂಗ್ ಪ್ರಾಂಶುಪಾಲೆ ಫಾತಿಮಾ ವಾಲೆಟ್ ಫೆರ್ನಾಂಡೀಸ್,ಪ್ಯಾರಾ ಮೆಡಿಕಲ್ ಕಾಲೇಜಿನ ಕೋ-ಆರ್ಡಿನೇಟರ್ ಮಂಗಳಾ, ಉಪಸ್ಥಿತರಿದ್ದರು. ಶೆರಿನ್ ಮ್ಯಾಥ್ಯು ಮತ್ತು ಸಿ. ಎಲಿಜಬೆತ್ ಅನಿಸಿಕೆಗಳನ್ನು ಹೇಳಿದರು. ಸಹಾಯಕ ಪ್ರಾಂಶುಪಾಲೆ ಎಮ್ಮಾ ಜೋಸೆಫ್ ಸ್ವಾಗತಿಸಿದರು. ಎಸೋಸಿಯೇಟ್ ಪ್ರೊ.ಜಾನೆಟ್ ಸಿಕ್ವೇರಾ ವಂದಿಸಿದರು. ರೇಷ್ಮಾ ಮತ್ತು ಯಶಸ್ವಿನಿ ನಿರೂಪಿಸಿದರು ಸಭಾ ಕಾರ್ಯಕ್ರಮದ ಬಳಿಕ ಕಾಲೇಜು ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮಗಳು ನಡೆದವು.

Bhagyavan Sanil

Mulki-02031501

Comments

comments

Comments are closed.

Read previous post:
Kinnigoli-28021505
ಸಿಲಿಕಾನ್ ಚೇಂಬರ್ ಹಾಗೂ ಸೌರ ದೀಪ ಕೊಡುಗೆ

ಮೂಲ್ಕಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಇದರ ಸಮುದಾಯ ಅಭಿವೃದ್ಧಿ ವಿಭಾಗದ ವತಿಯಿಂದ ಹಿಂದೂ ರುದ್ರಭೂಮಿ ನಿರ್ವಹಣಾ ಸಮಿತಿ ಹಳೆಯಂಗಡಿ ಇವರಿಗೆ ಸಿಲಿಕಾನ್ ಚೇಂಬರ್ ಹಾಗೂ...

Close