ಪಂಜ: ನಮ್ಮ ಗ್ರಾಮ ನಮ್ಮ ರಸ್ತೆ ಉದ್ಘಾಟನೆ

ಕಿನ್ನಿಗೋಳಿ: ಪಕ್ಷಿಕೆರೆ ಪಂಜದಿಂದ ಮದ್ಯ ಖಡ್ಗೇಶ್ವರೀ ದೇವಳದ ಮಧ್ಯದಲ್ಲಿರುವ ನಂದಿನಿ ನದಿಗೆ ಸರಕಾರದ ಪಶ್ಚಿಮ ವಾಹಿನಿ ಯೋಜನೆಯಡಿಯಲ್ಲಿ 4 ಕೋಟಿ ರೂ ವೆಚ್ಚದ ಕಿಂಡಿ ಅಣೆಕಟ್ಟು ಸಹಿತ ಸೇತುವೆ ರಚಿಸುವ ಪ್ರಸ್ತಾವನೆಯಿದೆ. ಇದರಿಂದ ಈ ಭಾಗದ ಜನರಿಗೆ ಸುರತ್ಕಲ್ ಹೋಗುವ ಸಮೀಪದ ರಸ್ತೆ ಸಂಪರ್ಕ ಹಾಗೂ ಹಾಗೂ ಕಿಂಡಿ ಅಣೆಕಟ್ಟು ಯೋಜನೆಯಿಂದಾಗಿ ಕೃಷಿ ನೀರಾವರಿ ಹಾಗೂ ಕುಡಿಯುವ ನೀರಿನ ಸಮಸ್ಯೆಯು ಸಂಪೂರ್ಣ ಕಡಿಮೆಯಾಗಲಿದೆ ಎಂದು ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.
ಸೋಮವಾರ ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಂಜದಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ ನಿರ್ಮಾಣಗೊಂಡ ರಸ್ತೆ ಹಾಗೂ ಪಂಜ ಶಾಲಾ ಹಿಂಬದಿ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕು ಪಂಚಾಯಿತಿ ಸದಸ್ಯ ರಾಜು ಕುಂದರ್, ಪಂಚಾಯಿತಿರಾಜ್ ಇಂಜಿನಿಯರ್ ಪ್ರಶಾಂತ್ ಆಳ್ವ, ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇವತಿ ಶೆಟ್ಟಿಗಾರ್, ಗ್ರಾ. ಪಂ. ಸದಸ್ಯರಾದ ಮಯ್ಯದ್ದಿ, ಸುರೇಶ್ ಪಂಜ, ಗುರುರಾಜ ಎಸ್. ಪೂಜಾರಿ, ಶ್ರೀಧರ ಪಂಜ, ಪ್ರವೀಣ್ ಕುಮಾರ್, ನೇಮಿರಾಜ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-03031501 Kinnigoli-03031502

Comments

comments

Comments are closed.

Read previous post:
Yoga011
ಯೋಗದಿಂದ ಮಾನಸಿಕ ಒತ್ತಡ ನಿರ್ವಹಣೆ ಕಾರ್ಯಗಾರ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಕಾಲೇಜು, ಲಲಿತ ಕಲಾ ಸಂಘ ಹಾಗೂ ಮಂಗಳೂರು ವಿ. ವಿ ಧರ್ಮನಿಧಿಯೋಗಪೀಠ ಇವುಗಳ ಸಹಯೋಗದಿಂದ ಯೋಗದಿಂದ ಮಾನಸಿಕ ಒತ್ತಡ ನಿರ್ವಹಣೆ...

Close