ಕೊಲ್ನಾಡು ಬಳಿ ಓವರ್ ಟೇಕ್ ಭರದಲ್ಲಿ ಅಪಘಾತ

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಕೋಲ್ನಾಡು ಬಳಿ ಬಸ್ಸು, ಟೆಂಪೋ ಮತ್ತು ಅಡುಗೆ ಅನಿಲ ಸಿಲಿಂಡರುಗಳನ್ನು ಸಾಗಿಸುತ್ತಿದ್ದ ಲಾರಿ ನಡುವೆ ಅಪಘಾತ ನಡೆದು ನಾಲ್ವರು ಗಂಭೀರ ಗಾಯಗೊಂಡಿದ್ದು ಬಸ್ಸಿನಲ್ಲಿದ್ದ ಸುಮಾರು 20 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕಾರ್ಕಳದಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ಸು ಕೊಲ್ನಾಡು ಬಳಿಯಲ್ಲಿ ವಾಹನವೊಂದನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಉಡುಪಿ ಕಡೆಗೆ ಚಲಿಸುತ್ತಿದ್ದ 407 ಟೆಂಪೊಗೆ ಡಿಕ್ಕಿ ಹೊಡೆದು ಅದರ ಹಿಂದಿನಿಂದ ಬರುತ್ತಿದ್ದ ಅಡುಗೆ ಅನಿಲ ಸಾಗಾಟದ ಲಾರಿಗೆ ಡಿಕ್ಕಿ ಹೊಡೆದಿದೆ. ಬಸ್ಸು ಡಿಕ್ಕಿ ಹೊಡೆದ ರಭಸಕ್ಕೆ ಟೆಂಪೋ ಡಿವೈಡರ್ ಮೇಲೆ ಪಲ್ಟಿಯಾಗಿ ಬಿದ್ದಿದ್ದು ಅಡುಗೆ ಅನಿಲ ಸಾಗಾಟದ ಲಾರಿಯ ಎದುರು ಬಾಗ ಸಂಪೂರ್ಣ ನಜ್ಜು ಗುಜ್ಜಾಗಿ ಅದರಲ್ಲಿ ಸಿಲುಕಿದ್ದ ಚಾಲಕನನ್ನು ತೆಗೆಯಲು ಸ್ಥಳೀಯ ರಿಕ್ಷಾ ಚಾಲಕರು ಹರಸಾಹಸ ಪಡಬೇಕಾಯಿತು. ಅಪಘಾತದ ರಭಸಕ್ಕೆ ಬಸ್ಸಿನ ಒಂದು ಭಾಗ ಪೂರ್ತಿ ಹರಿದು ಹೋಗಿದೆ.

 ಸುರತ್ಕಲ್ ಸಂಚಾರಿ ಠಾಣೆ ಪೋಲಿಸರು ಹಾಗೂ ಮುಲ್ಕಿ ಪೋಲಿಸರು ಘಟನಾ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿದ್ದಾರೆ.

Reshma Studio Indiranagar

Kinnigoli-05031501

Kinnigoli-05031505Kinnigoli-05031504Kinnigoli-05031502Kinnigoli-05031503

Comments

comments

Comments are closed.

Read previous post:
Kinnigoli-04031503
ಕಲ್ಲಾಪು ವಿವಿಧ ರಸ್ತೆಗಳ ಲೋಕಾರ್ಪಣೆ

ಕಿನ್ನಿಗೋಳಿ : ಪಡಪಣಂಬೂರು ಪಂಚಾಯಿತಿ ವ್ಯಾಪ್ತಿಯ ಕಲ್ಲಾಪು ಪರಿಸರದಲ್ಲಿ ಮೂಲ್ಕಿ ಮೂಡಬಿದ್ರೆ ಶಾಸಕ ಮತ್ತು ಸಚಿವ ಕೆ. ಅಭಯಚಂದ್ರ ಜೈನ್ ವಿವಿಧ ಕಾಮಾಗಾರಿ ಯೋಜನೆಗಳಾದ ಶಾಸಕರ ವಿಶೇಷ...

Close