ಮಹಿಳೆಯರಲ್ಲಿ ಸಂಘಟಿತ ಹೋರಾಟದ ಅಗತ್ಯವಿದೆ

ಕಿನ್ನಿಗೋಳಿ : ಇಂದು ಮಹಿಳೆ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಪ್ರಗತಿ ಹೊಂದಿದ್ದರೂ ಮಹಿಳಾ ದೌರ್ಜನ್ಯ ಶೋಷಣೆ ನಿಂತಿಲ್ಲದಿರುವುದು ವಿಷಾದನೀಯ ಮಹಿಳೆಯರಲ್ಲಿ ಸಂಘಟಿತ ಹೋರಾಟದ ಅಗತ್ಯವಿದೆ ಎಂದು ಸುರತ್ಕಲ್ ಗೋವಿಂದದಾಸ ಕಾಲೇಜು ಉಪನ್ಯಾಸಕಿ ಜ್ಯೋತಿ ಶೆಟ್ಟಿ ಕುತ್ತೆತ್ತೂರು ಹೇಳಿದರು.
ಕಿನ್ನಿಗೋಳಿಯ ರಾಜರತ್ನಪುರ ಸರಾಫ್ ಅಣ್ಣಯ್ಯಾಚಾರ್ ಸಭಾಭವನದಲ್ಲಿ ಶ್ರೀ ಕಾಳಿಕಾಂಬ ಮಹಿಳಾ ವೃಂದ ಭಾನುವಾರ ಆಯೋಜಿಸಿದ ವಿಶ್ವ ಮಹಿಳಾ ದಿನಾಚರಣೆ ಸಂದರ್ಭ ಉಪನ್ಯಾಸ ನೀಡಿ ಮಾತನಾಡಿದರು.
ಈ ಸಂದರ್ಭ ಫಲಿಮಾರು ಸುಮಿತ್ರ ಲಕ್ಷ್ಮಣ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಮಂಗಳೂರು ಶ್ರೀ ಕಾಳಿಕಾಂಬಾವಿನಾಯಕ ದೇವಳದ ಮೊಕ್ತೇಸರ ಕೆ. ಉದಯ ಆಚಾರ್ಯ, ಸರಾಫ್ ಅಣ್ಣಯ್ಯಾಚಾರ್ ಸಭಾಭವನ ಸಮಿತಿಯ ಅಧ್ಯಕ್ಷ ಎಂ. ಪ್ರಥ್ವಿರಾಜ್ ಆಚಾರ್ಯ, ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ದಿನೇಶ್ ಆಚಾರ್ಯ ಮತ್ತಿತರು ಉಪಸ್ಥಿತರಿದ್ದರು.
ಶ್ರೀ ಕಾಳಿಕಾಂಬ ಮಹಿಳಾ ವೃಂದದ ಅಧ್ಯಕ್ಷೆ ಹೇಮಾ ವಿಶ್ವನಾಥ ಆಚಾರ್ಯ ಸ್ವಾಗತಿಸಿದರು. ಸವಿತಾ ಆಚಾರ್ಯ ಶುಭ ಆಚಾರ್ಯ ಪರಿಚಯಿಸಿದರು. ಅನಿತಾ ಪ್ರಥ್ವಿರಾಜ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
Kinnigoli-10031504

Kinnigoli-10031505

Comments

comments

Comments are closed.

Read previous post:
ಪ್ರೊ.ಅರವಿಂದ ಜೋಶಿ ಸಂಸ್ಮರಣ ಕಾರ್ಯಕ್ರಮ

ಮೂಲ್ಕಿ: ಕಾಲೇಜಿನ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ, ಆರ್ಥಿಕ ಬಡ ವರ್ಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಕಾರ, ಸಾರ್ವಜನಿಕ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಮದ್ಯಾಹ್ನದ ಬಿಸಿ ಊಟ ಯೋಜನೆ,ಮೌಲ್ಯಾಧಾರಿತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳಿಗೆ...

Close