ಯಕ್ಷಗಾನ ಉಳಿಸುವ ಕೆಲಸ ಮಕ್ಕಳಿಂದ ಆಗಬೇಕು

ಕಿನ್ನಿಗೋಳಿ : ಇತ್ತೀಚಿನ ದಿನಗಳಲ್ಲಿ ಯುವ ಜನತೆ ಹಾಗೂ ಮಕ್ಕಳು ಯಕ್ಷಗಾನದಂತಹ ಕಲೆಯಿಂದ ಹಿಂದೆ ಸರಿಯುತ್ತಿದ್ದು ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿಕೊಡುವ ಕೆಲಸ ಹಿರಿಯರಿಂದಾಗಬೇಕು. ಎಂದು ಯುಗಪುರುಷ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಹೇಳಿದರು.
ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ತಂಡ ಮಕ್ಕಳ ಮೇಳದ ಆಶ್ರಯದಲ್ಲಿ ಶನಿವಾರ ಕೆರೆಕಾಡು ಯಕ್ಷಗಾನ ತರಬೇತಿ ಕೇಂದ್ರದಲ್ಲಿ ನಡೆದ ಯಕ್ಷಕೌಮುದಿ – 2015 ರಜತ ಕಿರಿಟ ಸಮರ್ಪಣೆ, ಸನ್ಮಾನ ಹಾಗೂ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ಕಲಾಪೋಷಕ ಜಯಕೃಷ್ಣ ಕೋಟ್ಯಾನ್, ಯಕ್ಷಗಾನ ಮಹಿಳಾ ಭಾಗವತಿಕೆದಾರರಾದ ಕಾವ್ಯಶ್ರೀ ಹಾಗೂ ಉತ್ತಮ ಸಾಧನೆಗೈದ ಯಕ್ಷಗಾನ ಕಲಾವಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ತಾರಾನಾಥ ವರ್ಕಾಡಿ ಅಧ್ಯಕ್ಷತೆ ವಹಿಸಿದ್ದರು.
ಮುಂಬಯಿ ರಂಗ ಭೂಮಿ ಫೈನ್ ಆರ್ಟ್ಸ್ ಅಧ್ಯಕ್ಷ ವಿ. ಕೆ. ಸುವರ್ಣ, ನ್ಯಾಯವಾದಿ ಬಿಪಿನ್ ಪ್ರಸಾದ್, ಕಿಲ್ಪಾಡಿ ಗ್ರಾಮ ಪಂಚಾಯಿತಿ ಅದ್ಯಕ್ಷೆ ಶಾರದಾ ವಸಂತ್ ಮತ್ತಿತರರು ಉಪಸ್ಥಿತರಿದ್ದರು.
ಮಕ್ಕಳ ಮೇಳದ ಅಧ್ಯಕ್ಷ ಜಯಂತ ಅಮೀನ್ ಸ್ವಾಗತಿಸಿದರು. ರೇಷ್ಮಾ ಬಂಗೇರ ವರದಿ ವಾಚಿಸಿದರು. ಉಮೇಶ್ ಆಚಾರ್ಯ ವಂದಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-10031502

Comments

comments

Comments are closed.

Read previous post:
Kinnigoli-10031501
ಪೋಲಿಸ್ ಜನಸಂಪರ್ಕ ಸಭೆ

ಕಿನ್ನಿಗೋಳಿ : ಸುರಕ್ಷತೆಯ ದೃಷ್ಠಿಯಿಂದ ಸಾರ್ವಜನಿಕರು ವಯೋವೃದ್ದರು ಹಾಗೂ ಮಕ್ಕಳು ಇರುವ ಮನೆಗಳಲ್ಲಿ ಬಾಗಿಲುಗಳನ್ನು ಭದ್ರವಾಗಿ ಹಾಕಬೇಕು ಹಾಗೂ ಬೇರೆ ಬೇರೆ ನೆಪದಲ್ಲಿ ಬರುವ ಪರಿಚಯವಿರದ ವ್ಯಕ್ತಿಗಳ ಬಗ್ಗೆ...

Close