ಸಕಾರಾತ್ಮಕ ಚಿಂತನೆ ಸಂತೃಪ್ತಿಯ ಬಾಳು

ಕಿನ್ನಿಗೋಳಿ : ಮಹಿಳೆ ಕುಟುಂಬದ ತಳಹದಿ. ಸಕಾರಾತ್ಮಕ ಚಿಂತನೆಯಿಂದ ಸಂತೃಪ್ತಿಯ ಬಾಳು ಬಾಳಬಹುದು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿ ಭವ್ಯ ಸಮಾಜ ನಿರ್ಮಾಣ ಮಾಡಬಹುದು ಎಂದು ಕದ್ರಿ ಮಲ್ಲಿಕಟ್ಟೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಶಾಖಾ ಮ್ಯಾನೇಜರ್ ಜೆಸಿಂತಾ ಮಥಾಯಸ್ ಹೇಳಿದರು.
ಕಟೀಲು ಪ್ರಜ್ವಲ್ ಸ್ತ್ರೀ ಸಂಘಟನೆ ಆಶ್ರಯದಲ್ಲಿ ಕಟೀಲು ಚರ್ಚ್ ಆವರಣದಲ್ಲಿ ಭಾನುವಾರ ನಡೆದ ವಿಶ್ವ ಮಹಿಳಾ ದಿನಾಚರಣೆ, ಕಿನ್ನಿಗೋಳಿ ವಾರಡೊ ಮಟ್ಟದ ಮಹಿಳಾ ಸಾಂಸ್ಕ್ರತಿಕ ಹಬ್ಬ ಹಾಗೂ ಸಮನ್ವಯ ಸ್ತ್ರೀ ಸಾಧಕಿ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಏಳು ಬಣ್ಣಗಳ ದ್ರಾವಣವನ್ನು ಗಾಜಿನ ಪಾತ್ರೆಗೆ ಸುರಿಯುವ ಮೂಲಕ ಮತ್ತು ವೇದಿಕೆಯ ಹಿಂಭಾಗ ಏಳು ಬಣ್ಣಗಳ ಪರದೆ ಅನಾವರಣಗೊಳಿಸಿ ವಿಶಿಷ್ಟ ರೀತಿಯಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು.
ಕಿನ್ನಿಗೋಳಿ ವಾರಾಡೊ ಚರ್ಚ್‌ಗಳ ಮುಖ್ಯಸ್ಥ ಫಾ. ವಿನ್ಸೆಂಟ್ ಮೊಂತೆರೊ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಕೊಡುಗೈ ದಾನಿಗಳಾದ ಹೆನ್ರಿ ಸಿಸಿಲಿಯಾ ಅರಾನ್ಹಾ ದಂಪತಿಗಳು ಹಾಗೂ ಉಡುಪಿ ತಾಲೂಕು ಪಂಚಾಯಿತಿ ಸದಸ್ಯೆ, ಸಾಧಕಿ ವೆರೋನಿಕ ಕೊರ್ನೆಲಿಯೊ ಅವರನ್ನು ಸಮನ್ವಯ ಸ್ತ್ರೀ ಸಾಧಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಟೀಲು ಚರ್ಚ್ ಧರ್ಮಗುರು ಫಾ. ಡಾ. ರೋನಾಲ್ಡ್ ಕುಟಿನ್ಹೊ, ಕಿನ್ನಿಗೋಳಿ ವಾರಡೊ ಸ್ತ್ರೀ ಸಂಘಟನೆಯ ನಿರ್ದೇಶಕ ಫಾ. ನೋರ್ಬಟ್ ಲೋಬೊ, ಅಧ್ಯಕ್ಷೆ ಪ್ರಮೀಳಾ ಸಲ್ಡಾನ, ಕಾರ್ಯದರ್ಶಿ ಎಮಿಲ್ಡಾ ರೆಬೆಲ್ಲೊ ಉಪಸ್ಥಿತರಿದ್ದರು.
ಕಟೀಲು ಪ್ರಜ್ವಲ್ ಸ್ತ್ರೀ ಸಂಘಟನೆ ಅಧ್ಯಕ್ಷೆ ಶಾಂತಿ ಸಲ್ಡಾನ ಸ್ವಾಗತಿಸಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ಸುನಿತಾ ತಾವ್ರೋ ವರದಿ ವಾಚಿಸಿದರು. ವೈಲೆಟ್ ಡಿಸೋಜ ವಂದಿಸಿದರು. ಜೆಸಿಂತಾ ರೋಡ್ರಿಗಸ್ ಮತ್ತು ನಿವೇದಿತಾ ಮಿರಾಂದ ಕಾರ್ಯಕ್ರಮ ನಿರೂಪಿಸಿದರು.

 Kateel-10031501Kateel-10031502Kateel-10031503Kateel-10031504Kateel-10031505Kateel-10031506Kateel-10031507 Kateel-10031508 Kateel-10031509 Kateel-10031510 Kateel-10031511 Kateel-10031512

Comments

comments

Comments are closed.

Read previous post:
Kinnigoli-10031508
ಮಹಿಳೆಯರು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಬೇಕು

ಕಿನ್ನಿಗೋಳಿ : ಸಶಕ್ತ ಮಹಿಳೆಯರು ದೇಶದ ಅಭಿವೃದ್ಧಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಮಾತ್ರ ಮಹಿಳೆಗೆ ಗೌರವದ ಸ್ಥಾನಮಾನ ದೊರೆಯಲು ಸಾಧ್ಯ. ಈ ನಿಟ್ಟಿನಲ್ಲಿ ಮಹಿಳೆಯರು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಬೇಕು...

Close