ಪೋಲಿಸ್ ಜನಸಂಪರ್ಕ ಸಭೆ

ಕಿನ್ನಿಗೋಳಿ : ಸುರಕ್ಷತೆಯ ದೃಷ್ಠಿಯಿಂದ ಸಾರ್ವಜನಿಕರು ವಯೋವೃದ್ದರು ಹಾಗೂ ಮಕ್ಕಳು ಇರುವ ಮನೆಗಳಲ್ಲಿ ಬಾಗಿಲುಗಳನ್ನು ಭದ್ರವಾಗಿ ಹಾಕಬೇಕು ಹಾಗೂ ಬೇರೆ ಬೇರೆ ನೆಪದಲ್ಲಿ ಬರುವ ಪರಿಚಯವಿರದ ವ್ಯಕ್ತಿಗಳ ಬಗ್ಗೆ ಎಚ್ಚರದಿಂದ ವ್ಯವಹರಿಸಿ ಮುಂದೆ ಸಾಗಹಾಕುವ ಕೆಲಸ ಮಾಡಿ ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಅಕ್ಕ ಪಕ್ಕದ ಮನೆಯವರಲ್ಲಿ ಪರಾಮರ್ಶಿಸಿ ಕೂಡಲೇ ಪೋಲಿಸ್ ಠಾಣೆಗೆ ತಿಳಿಸಬೇಕು ಎಂದು ಮುಲ್ಕಿ ಠಾಣಾ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ಹೇಳಿದರು.
ಕೆಮ್ರಾಲ್ ಹೊಸಕಾಡಿನಲ್ಲಿ ಕಳೆದ ಕೆಲವು ದಿನಗಳ ಹಿಂದೆ ನಡೆದ ಸರಣಿ ಕಳ್ಳತನದ ಬಗ್ಗೆ ಶನಿವಾರ ಹೊಸಕಾಡು ಭಜನಾ ಮಂದಿರ ಸಭಾಂಗಣದಲ್ಲಿ ನಡೆದ ಪೋಲಿಸ್ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು. ಮುಲ್ಕಿ ಠಾಣಾ ಎಎಸ್‌ಐ ವಾಮನ್ ಸುರಕ್ಷತೆಯ ಬಗ್ಗೆ ಪೂರಕ ಮಾಹಿತಿ ನೀಡಿದರು.
ಕೆಮ್ರಾಲ್ ಗ್ರಾ. ಪಂ. ಅಧ್ಯಕ್ಷೆ ರೇವತಿ ಶೆಟ್ಟಿಗಾರ್, ಗ್ರಾ. ಪಂ. ಸದಸ್ಯ ಮಯ್ಯದ್ದಿ ಹರೀಶ್ ಉಪಸ್ಥಿತರಿದ್ದರು.

Kinnigoli-10031501

 

Comments

comments

Comments are closed.

Read previous post:
Kinnigoli-08031501
ಶಿಮಂತೂರು ದೇವಳ ವಾರ್ಷಿಕ ರಥೋತ್ಸವ

ಮೂಲ್ಕಿ: ಇತಿಹಾಸ ಪ್ರಸಿದ್ಧ ಮೂಲ್ಕಿ ಶಿಮಂತೂರು ಶ್ರೀ ಆದಿ ಜನಾರ್ದನ ದೇವಳ ವಾರ್ಷಿಕ ರಥೋತ್ಸವದ ಪ್ರಯುಕ್ತ ಹಗಲು ರಥೋತ್ಸವ ಭಾನುವಾರ ಜರುಗಿತು.

Close