ಪ್ರೊ.ಅರವಿಂದ ಜೋಶಿ ಸಂಸ್ಮರಣ ಕಾರ್ಯಕ್ರಮ

ಮೂಲ್ಕಿ: ಕಾಲೇಜಿನ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ, ಆರ್ಥಿಕ ಬಡ ವರ್ಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಕಾರ, ಸಾರ್ವಜನಿಕ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಮದ್ಯಾಹ್ನದ ಬಿಸಿ ಊಟ ಯೋಜನೆ,ಮೌಲ್ಯಾಧಾರಿತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳಿಗೆ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ದಿ.ಅರವಿಂದ ಜೋಶಿಯವರು ಕಾಲೇಜು ಮತ್ತು ವಿದ್ಯಾರ್ಥಿಗಳ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸಿದವರು ಎಂದು ಪ್ರೊ.ಅರವಿಂದ ಜೋಶಿಯವರ ಒಡನಾಡಿಯಾಗಿದ್ದ ಹಿರಿಯ ಬಹು ಬಾಷಾ ಸಾಹಿತಿ ಎನ್.ಪಿ.ಶೆಟ್ಟಿ ಹೇಳಿದರು.
ಮೂಲ್ಕಿ ವಿಜಯಾ ಕಾಲೇಜಿನಲ್ಲಿ ಶುಕ್ರವಾರ ನಡೆದ ಮಾಜಿ ಪ್ರಾಂಶುಪಾಲ ಪ್ರೊ.ಅರವಿಂದ ಜೋಶಿಯವರ ಸಂಸ್ಮರಣ ಕಾರ್ಯಕ್ರಮದಲ್ಲಿ ಸಂಸ್ಮರಣ ಬಾಷಣ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ಎಂ.ಎ.ಆರ್.ಕುಡ್ವಾ ವಹಿಸಿದ್ದರು.
ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್ ಶಂಕರ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಪ್ರೊ.ಪಮೀದಾ ಬೇಗಂ, ಮುಂಬೈ ಬಂಟರ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಅತಿಥಿಗಳಾಗಿದ್ದರು.
ಪ್ರೊ.ಕೆ.ಆರ್.ಶಂಕರ್ ಸ್ವಾಗತಿಸಿದರು. ಶರ್ಮಿಳಾ ರಾಜೇಶ್ ನಿರೂಪಿಸಿದರು. ಪಮೀದಾ ಬೇಗಂ ವಂದಿಸಿದರು.

Kinnigoli-10031503

Comments

comments

Comments are closed.

Read previous post:
Kinnigoli-10031502
ಯಕ್ಷಗಾನ ಉಳಿಸುವ ಕೆಲಸ ಮಕ್ಕಳಿಂದ ಆಗಬೇಕು

ಕಿನ್ನಿಗೋಳಿ : ಇತ್ತೀಚಿನ ದಿನಗಳಲ್ಲಿ ಯುವ ಜನತೆ ಹಾಗೂ ಮಕ್ಕಳು ಯಕ್ಷಗಾನದಂತಹ ಕಲೆಯಿಂದ ಹಿಂದೆ ಸರಿಯುತ್ತಿದ್ದು ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿಕೊಡುವ ಕೆಲಸ ಹಿರಿಯರಿಂದಾಗಬೇಕು. ಎಂದು ಯುಗಪುರುಷ ಪ್ರಧಾನ...

Close