ವಿದ್ಯಾರ್ಥಿನಿಯರಿಗೆ ಕಾರು ಡಿಕ್ಕಿ

ಕಿನ್ನಿಗೋಳಿ : ಮುಲ್ಕಿ ಠಾಣಾ ವ್ಯಾಪ್ತಿಯ ಐಕಳ ಪೊಂಪೈ ಕಾಲೇಜಿನ ಬಳಿ ವಿದ್ಯಾರ್ಥಿನಿಯರಿಗೆ ಮಾರುತಿ ಓಮಿನಿ ಕಾರು ಡಿಕ್ಕಿ ಹೊಡೆದು ಓರ್ವ ವಿದ್ಯಾರ್ಥಿನಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಾಲಾದ ಘಟನೆ ಬುಧವಾರ ಮದ್ಯಾಹ್ನ ನಡೆದಿದೆ.
ಪೊಂಪೈ ಕಾಲೇಜಿನ ಎಂ. ಕಾಂ ವಿದ್ಯಾರ್ಥಿನಿಯರು ತರಗತಿ ಮುಗಿಸಿ ಮಧ್ಯಾಹ್ನ ಮನೆಗೆ ಹೋಗಲು ಮೂರು ಕಾವೇರಿಯ ಬಸ್ ನಿಲ್ದಾಣಕ್ಕೆ ನಡೆದುಕೊಂಡು ಬರುವ ಸಂದರ್ಭ ಸದ್ದಿಲ್ಲದೆ ವೇಗವಾಗಿ ಬಂದ ಮಾರುತಿ ಓಮಿನಿ ಡಿಕ್ಕಿ ಹೊಡೆದು ಪರಾರಿಯಾಗಿದೆ.
ತಲೆಗೆ ಗಾಯಗೊಂಡ ಮುಚ್ಚೂರಿನ ಮಮತಾ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಾಲಿಸಲಾಗಿದೆ. ಇನ್ನೂರ್ವ ವಿದ್ಯಾರ್ಥಿನಿ ಅಕ್ಷತಾ ಸಣ್ಣ ಪುಟ್ಟ ಗಾಯಗೊಂಡಿದ್ದಾರೆ.
ಪೊಂಪೈ ಪದವಿ ಪೂರ್ವ ಕಾಲೇಜಿನ ಸಿ. ಸಿ.ಕ್ಯಾಮರದಲ್ಲಿ ಕಾರು ಸಾಗಿದ ಚಿತ್ರಣ ದಾಖಾಲಾಗಿದ್ದು ಸ್ಥಳಕ್ಕೆ ಆಗಮಿಸಿದ ಸುರತ್ಕಲ್ ಟ್ರಾಫಿಕ್ ಪೋಲಿಸ್ ನಿರೀಕ್ಷಕ ಗೋಪಾಲಕೃಷ್ಣ ಭಟ್ ತನಿಖೆ ನಡೆಸುತ್ತಿದ್ದಾರೆ.
ಮಧ್ಯಾಹ್ನ ಘಟನೆ ನಡೆಯುವ ಮುಂಚೆ ದಾಮಸ್‌ಕಟ್ಟೆ ಹೋಟೆಲ್ ಬಳಿಯಲ್ಲಿ ನಿಲ್ಲಿಸಿದ ಒಂದು ಕಾರಿಗೆ ಡಿಕ್ಕಿ ಹೊಡೆಯುವಷ್ಟು ರಭಸದಿಂದ ಬಂದು ಕಾರು ನಿಲ್ಲಿಸಿ ನಿಲ್ಲಿಸಿದ ಕಾರಿನವರೊಂದಿಗೆ ತಕರಾರು ತೆಗೆದು ವಿರುದ್ದ ಬದಿಯಲ್ಲಿ ವೇಗವಾಗಿ ಸಾಗಿ ಹೋಗಿದ್ದು ಅದು ಢಿಕ್ಕಿ ಹೊಡೆದ ಕಾರೇ ಆಗಿರಬೇಕೆಂದು ಸ್ಥಳೀಯ ದಾಮಸ್‌ಕಟ್ಟೆ ಜನರು ಗುಮಾನಿ ವ್ಯಕ್ತ ಪಡಿಸಿದ್ದಾರೆ.

ವೇಗ ತಡೆ ನಿರ್ಮಾಣ ಆಗಬೇಕಾಗಿದೆ
ಸುಮಾರು 1600 ರಷ್ಟು ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರೌಢ ಶಾಲೆಯಿಂದ ಎಂ.ಕಾಂ ವರೆಗೆ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಹಲವಾರು ವರ್ಷಗಳ ಹಿಂದಿನಿಂದ ಕಾಲೇಜು ಮುಖ್ಯ ರಸ್ತೆಗೆ ವೇಗ ತಡೆ ನಿರ್ಮಾಣಗೊಂಡಿತ್ತು ಆದರೆ ಕಳೆದ ವರ್ಷ ರಸ್ತೆಗೆ ಡಾಮರೀಕರಣ ನಡೆದ ಸಂದರ್ಭ ವೇಗ ತಡೆ ನಿರ್ಮಿಸದೆ ವೇಗವಾಗಿ ಚಲಿಸುವ ವಾಹನಗಳಿಂದ ಇಂತಹ ಘಟನೆಗಳು ನಡೆಯುತ್ತಿದೆ ಎಂದು ಉಭಯ ಕಾಲೇಜುಗಳ ಪ್ರಿನ್ಸಿಪಾಲ್ ಹಾಗೂ ಸಾರ್ವಜನಿಕರ ಅಭಿಪ್ರಾಯಪಡುತ್ತಾರೆ. ಜನಪ್ರತಿನಿಧಿಗಳು ಗಮನಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ.

Comments

comments

Comments are closed.

Read previous post:
Kateel-10031507
ಸಕಾರಾತ್ಮಕ ಚಿಂತನೆ ಸಂತೃಪ್ತಿಯ ಬಾಳು

ಕಿನ್ನಿಗೋಳಿ : ಮಹಿಳೆ ಕುಟುಂಬದ ತಳಹದಿ. ಸಕಾರಾತ್ಮಕ ಚಿಂತನೆಯಿಂದ ಸಂತೃಪ್ತಿಯ ಬಾಳು ಬಾಳಬಹುದು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿ ಭವ್ಯ ಸಮಾಜ ನಿರ್ಮಾಣ ಮಾಡಬಹುದು ಎಂದು ಕದ್ರಿ ಮಲ್ಲಿಕಟ್ಟೆ ಯೂನಿಯನ್...

Close