ಹಾಲು ಉತ್ಪನ್ನ ಹೈನುಗಾರಿಕೆ ಮಾಹಿತಿ ಕಾರ್ಯಾಗಾರ

ಬೆಳ್ಮಣ್: ನಂದಳಿಕೆ ಸರಕಾರಿ ಮಾದರಿ ಶಾಲೆಯಲ್ಲಿ ಶನಿವಾರ ನಂದಳಿಕೆ-ಮುಂಡ್ಕೂರು ಕ್ಲಸ್ಟರ್ ಶಿಕ್ಷಕರ ಮಾಸಿಕ ಸಮಾಲೋಚನಾ ಸಭೆಯಲ್ಲಿ ನಂದಳಿಕೆ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ(ರಿ) ಮಂಗಳೂರು- ಮಣಿಪಾಲ ಡೈರಿ ವಿಭಾಗದ ವತಿಯಿಂದ “ಹಾಲು ಉತ್ಪನ್ನಗಳು-ಹೈನುಗಾರಿಕೆ”ಬಗ್ಗೆ ಕಿರುಚಿತ್ರ ಪ್ರದರ್ಶನ ಹಾಗೂ ಮಾಹಿತಿ ನೀಡಲಾಯಿತು.
ಒಕ್ಕೂಟದ ಮಣಿಪಾಲ ಡೈರಿ ಶೇಖರಣೆ ವಿಭಾಗದ ಉಪ ವ್ಯವಸ್ಥಾಪಕ ಡಾ.ಅನಿಲ್‌ ಕುಮಾರ್ ಶೆಟ್ಟಿ ಮಾಹಿತಿ ನೀಡಿದರು.
ರಾಷ್ಠ್ರಪ್ರಶಸ್ತಿ ಪುರಸ್ಕೃತ ನಂದಳಿಕೆ ಶಾಲಾ ಹಿರಿಯ ಶಿಕ್ಷಕ ಕೆ.ಲಕ್ಷ್ಮೀಕಾಂತ ಭಟ್ ಅಧ್ಯಕ್ಷತೆ ವಹಿಸಿದರು. ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಚಂದ್ರಕಾಂತ ಡೇಸಾ, ಅನುದಾನಿತ ಶಾಲಾ ಶಿಕ್ಷಕ ಸಂಘದ ತಾಲೂಕು ಅಧ್ಯಕ್ಷ ವಿ.ಕೆ.ರಾವ್ ನಂದಳಿಕೆ, ತಾಲೂಕು ಉಪಾಧ್ಯಕ್ಷ ಸತೀಶ್ ಶೆಟ್ಟಿ, ಸಮಾಜ ವಿಜ್ಞಾನ ವಿಷಯ ಸಂಪನ್ಮೂಲ ವ್ಯಕ್ತಿ, ನಿವೃತ್ತ ಪ್ರಾಂಶುಪಾಲ ಕೆ.ಅನಂತ ಪಟ್ಟಾಭಿರಾಮ್ ಭಟ್ ಬೈಲೂರು ಎರ್ಲಪಾಡಿ, ಒಕ್ಕೂಟ ಮಾರುಕಟ್ಟೆ ಅಭಿಯಾನದ ಸಂಚಾಲಕ ವಿನಯಕುಮಾರ್, ವಿಸ್ತರಣಾಧಿಕಾರಿ ಯಶವಂತ್, ಕಚೇರಿ ಸಹಾಯಕಿ ಸುಮಾ, ಪ್ರವೀಣ್ ಭಕ್ತ, ಸತೀಶ್ ಪೂಜಾರಿ ಸಹಕರಿಸಿದರು. ಬೆಳ್ಮಣ್ ಸಂತ ಜೋಸೆಫ್ ಶಾಲಾ ಹಿರಿಯ ಶಿಕ್ಷಕ ಬಿ.ಪುಂಡಲೀಕ ಮರಾಠೆ ಪರಿಚಯಿಸಿದರು.

Sharath Shetty

Belmane-13031501

Comments

comments

Comments are closed.

Read previous post:
ವಿದ್ಯಾರ್ಥಿನಿಯರಿಗೆ ಕಾರು ಡಿಕ್ಕಿ

ಕಿನ್ನಿಗೋಳಿ : ಮುಲ್ಕಿ ಠಾಣಾ ವ್ಯಾಪ್ತಿಯ ಐಕಳ ಪೊಂಪೈ ಕಾಲೇಜಿನ ಬಳಿ ವಿದ್ಯಾರ್ಥಿನಿಯರಿಗೆ ಮಾರುತಿ ಓಮಿನಿ ಕಾರು ಡಿಕ್ಕಿ ಹೊಡೆದು ಓರ್ವ ವಿದ್ಯಾರ್ಥಿನಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಾಲಾದ...

Close