ನಂದಳಿಕೆ ಸಿರಿ ಜಾತ್ರೆಯ ಪ್ರಚಾರ ವೈಖರಿಯ ಪರಿ

ಬೆಳ್ಮಣ್: ಪ್ರತೀ ವರ್ಷವೂ ಒಂದಲ್ಲ ಒಂದು ರೀತಿಯಲ್ಲಿ ಅದ್ಬುತ ಪ್ರಚಾರದ ಪರಿಕಲ್ಪನೆಯನ್ನು ಹೊತ್ತುಕೊಂಡು ವಿಭಿನ್ನ ರೀತಿಯಲ್ಲಿ ಜಾತ್ರೆಯ ಪ್ರಚಾರವನ್ನು ಮಾಡುವ ನಂದಳಿಕೆ ಸಿರಿ ಜಾತ್ರೆ ಈ ಬಾರಿ ವರ್ಣಮಯ ಕಾಗದದ ಛತ್ರಿಗಳ ಮೂಲಕ ಹೊಸತನದೊಂದಿಗೆ ಪ್ರಚಾರಕ್ಕೆ ಇಳಿದಿದೆ.
ಕಳೆದೆರಡು ವರ್ಷಗಳಿಂದ ಮೈಲುಗಲ್ಲು ಹಾಗೂ ಅಂಚೆ ಕಾರ್ಡ್‌ನ ಮೂಲಕ ಪ್ರಚಾರ ನಡೆಸಿ ಜನಮನಗೆದ್ದ ನಂದಳಿಕೆ ಸಿರಿ ಜಾತ್ರೆ ಕಾಗದದಿಂದ ರಚಿಸಲಾದ ವರ್ಣಮಯ ಛತ್ರಿಯ ಮೂಲಕ ಪ್ರಚಾರಕ್ಕೆ ಅಣಿಯಾಗುತ್ತಿದೆ.
ಕಾರ್ಕಳ ತಾಲೂಕಿನ ನಂದಳಿಕೆ ಸಿರಿ ಜಾತ್ರೆ ಎಂದರೆ ಇಡೀ ನಾಡಿಗೆ ನಡೆ ಸಂಭ್ರಮ , ಆದಿ ಆಲಡೆ, ಸಿರಿ ಕ್ಷೇತ್ರ, ಸಿರಿಗಳ ಮೂಲ ಕ್ಷೇತ್ರ, ನಾಲ್ಕು ಸ್ಥಾನ ನಂದಳಿಕೆ ಹೀಗೆ ನಾನಾ ರೀತಿಗಳಿಂದದಲೂ ಗುರುತಿಸಿಕೊಂಡ ನಂದಳಿಕೆ ಮಹಾಲಿಂಗೇಶ್ವರನ ದೇವಾಲಯದ ಜಾತ್ರೆಯು ಪ್ರತೀ ಬಾರಿ ಹೊಸತನದ ಪ್ರಚಾರದ ಪರಿಕಲ್ಪನೆಯನ್ನು ಹೊತ್ತು ಪ್ರಶಂಸೆಗೆ ಪಾತ್ರವಾಗಿದೆ.ತುಳುನಾಡು ಧಾರ್ಮಿಕ ಶ್ರದ್ದಾ ಕೇಂದ್ರಗಳ ಬೀಡು ಕರವಳಿ ಉದ್ದಗಳಕ್ಕು ಸಹ್ಯಾದ್ರಿ ಸಾಲುಗಳಾಚೆಗೂ ಇರುವ ಪುಣ್ಯ ಕ್ಷೇತ್ರಗಳು ಆಸ್ತಿಕರು ಪ್ರವಾಸಿಗರನ್ನು ಆರ್ಕಸುವ ಭಕ್ತಿ ನೆಮ್ಮದಿಯ ತಾಣಗಳು . ಪ್ರಕೃತಿ ಸೊಬಗಿನ ಐಸಿರಿಯಲ್ಲಿ ಶೋಭಿಸುತ್ತ ಭಕ್ತ ಜನರನ್ನು ಸೆಳೆಯುವ ನಂದಳಿಕೆ ಕ್ಷೇತ್ರವೂ ಕೂಡ ಒಂದು. ಸಿರಿ , ಕುಮಾರ , ಸೊನ್ನೆ -ಗಿಂಡೆ , ಅಬ್ಬಗ- ದಾರಗ , ಎಂಬ ಮೂರು ತಲೆಮಾರಿನ ಅದ್ಭುತ ಶಕ್ತಿಗಳ ಸಾನ್ನಿಧ್ಯವಿರುವ ನಂದಳಿಕೆ ಶ್ರೀ ಮಹಾಲಿಂಗೇಶ್ವರ ಸ್ವಾಮಿ ನೆಲೆನಿಂತ ಸತ್ಯದ ಸಿರಿ ವರಪುಣ್ಯ ಕ್ಷೇತ್ರದಲ್ಲಿ ಸಂಭ್ರಮದ ಅಯನೋತ್ಸವ ಸಿರಿಜಾತ್ರೆ ಮಹೋತ್ಸವ ಇದೇ ಎಪ್ರಿಲ್ 4 ರಂದು ಮಡೆಯಲಿದ್ದ್ದು ಉಡುಪಿ,ದಕ್ಷಿಣ ಕನ್ನಡ,ಕಾಸರಗೋಡು,ಶಿವಮೊಗ್ಗ ಹಾಗೂ ಮಲೆನಾಡಿನಾದ್ಯಂತದ ಪ್ರಚಾರಕ್ಕಾಗಿ ಸುಮಾರು 400 ವರ್ಣಮಯ ಕಾಗದದ ಛತ್ರಿಗಳು ನಂದಳಿಕೆ ಸರಳಾ ಸಾ ಮಿಲ್‌ನಲ್ಲಿ ಸಿದ್ಧವಾಗಿದೆ.
ನಂದಳಿಕೆ ಚಾವಡಿ ಅರಮನೆ ಸುಹಾಸ್ ಹೆಗ್ಡೆ ಎಂದಿನಂತೆ ಈ ಪರಿಕಲ್ಪನೆಯ ರೂವಾರಿಯಾಗಿದ್ದು ಕಾಗದದ ರಟ್ ಶೀಟ್ ನಲ್ಲಿ ಛತ್ರಿಯನ್ನು ಹೋಲುವ ಈ ಫಲಕ ಒಂದು ಮಗ್ಗುಲಲ್ಲಿ ಕೆಂಪು ಹಾಗೂ ಇನ್ನೊಂದು ಮಗ್ಗುಲಲ್ಲಿ ನೀಲಿ ಬಣ್ಣವನ್ನು ಹೊಂದಿದೆ.ಈ ಹಿಂದಿನ ಮೈಲುಗಲ್ಲು ಹಾಗೂ ಅಂಚೆ ಕಾರ್ಡಿನ ಪ್ರಚಾರಕ್ಕಿಂತಲೂ ಈ ಛತ್ರಿ ಇನ್ನಷ್ಟು ಹೆಚ್ಚು ಪ್ರಚಾರ ಪಡೆಯುವ ಸಾಧ್ಯತೆಯಿದೆಯೆಂದು ಸುಹಾಸ ಹೆಗ್ಡೆ ತಿಳಿಸಿದ್ದು ಬೋಗಿ ಮರದ ಕಟೌಟ್ ಹೊಂದಿರುವ ಒಂದು ಛತ್ರಿಗೆ ಸುಮಾರು 60 ರೂನಷ್ಟು ವೆಚ್ಚ ತಗಲಿದೆಯೆಂದಿದ್ದಾರೆ.ಕರಾವಳಿ ಜಿಲ್ಲೆಯ ಸಹಿತ ಮಲೆನಾಡಿನಾದ್ಯಂತ ರಸ್ತೆ ಪಕ್ಕಗಳಲ್ಲಿ ಈ ಛತ್ರಿಯನ್ನು ಅಳವಡಿಸಲಾಗುತ್ತಿದೆ. ಈ ಪರಿಕಲ್ಪನೆಯ ರೂವಾರಿ ನಂದಳಿಕೆ ಚಾವಡಿ ಅರಮನೆ ನಂದಳಿಕೆ ಸುಹಾಸ್ ಹೆಗ್ಡೆ ಯವರು ಪ್ರತಿ ಬಾರಿ ಬಾರಿಯೂ ಸಿರಿ ಜಾತ್ರೆಯ ಪ್ರಚಾರದಲ್ಲಿ ಹೊಸತವನ್ನು ಸೃಷ್ಠಿಸುತ್ತಿದ್ದು ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಸಾಮಾನ್ಯವಾಗಿ ಜಾತ್ರೆ ಶುಭ ಸಮಾರಂಭಗಳು ನಡೆಯುವ ಸಂದರ್ಭದಲ್ಲಿ ಪ್ರಚಾರದ ಫಲಕವಾಗಿ ಪ್ಲೆಕ್ಸ್ ಬ್ಯಾನರ್ ಗಳು ಅಧಿಕವಾಗಿದ್ದು, ನಂದಳಿಕೆ ಸಿರಿಜಾತ್ರೆ ಮಾತ್ರ ಪ್ರಚಾರವನ್ನು ವಿಭಿನ್ನ ರೀತಿಯಲ್ಲಿ ಮಾಡುತ್ತಿರುವುದು ಎಲ್ಲರ ಗಮನ ಸೆಳೆದಿದೆ.

Sharath Shetty

Belmane-13031503 Belmane-13031504

Comments

comments

Comments are closed.

Read previous post:
Belmane-13031502
ಪ್ಲಾಸ್ಟಿಕ್ ಸೌಧ ಹಸ್ತಾಂತರ, ಒಣ ಕಸದ ಮಾಹಿತಿ

ಬೆಳ್ಮಣ್: ಮುಂಡ್ಕೂರು ಗ್ರಾಮ ಪಂಚಾಯತ್‌ನ ಸ್ವಚ್ಛತಾ ಆಂದೋಲನದ ಭಾಗವಾಗಿರುವ ಗ್ರಾಮದ ಪ್ರತೀ ಶಾಲೆಗಳಲ್ಲಿ ಪ್ಲಾಸ್ಟಿಕ್ ಸೌಧ ನಿರ್ಮಿಸಿ ಒಣ ಕಸ ನಿರ್ವಹಿಸುವ ಬಗ್ಗೆ ಸಂಕಲಕರಿಯ ಅನುದಾನಿತ ಹಿರಿಯ...

Close