ಪ್ಲಾಸ್ಟಿಕ್ ಸೌಧ ಹಸ್ತಾಂತರ, ಒಣ ಕಸದ ಮಾಹಿತಿ

ಬೆಳ್ಮಣ್: ಮುಂಡ್ಕೂರು ಗ್ರಾಮ ಪಂಚಾಯತ್‌ನ ಸ್ವಚ್ಛತಾ ಆಂದೋಲನದ ಭಾಗವಾಗಿರುವ ಗ್ರಾಮದ ಪ್ರತೀ ಶಾಲೆಗಳಲ್ಲಿ ಪ್ಲಾಸ್ಟಿಕ್ ಸೌಧ ನಿರ್ಮಿಸಿ ಒಣ ಕಸ ನಿರ್ವಹಿಸುವ ಬಗ್ಗೆ ಸಂಕಲಕರಿಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.
ಪಂಚಾಯತ್ ಅಧ್ಯಕ್ಷ ಸತ್ಯಶಂಕರ ಶೆಟ್ಟಿ ಶಾಲಾ ಸಂಚಾಲಕ ಹೇಮನಾಥ ಶೆಟ್ಟಿಯವರಿಗೆ ಪ್ಲಾಸ್ಟಿಕ್ ಸೌಧ ಹಸ್ತಾಂತರಿಸಿ ಒಣ ಕಸ ವಿಲೇವಾರಿ ಕುರಿತು ಮಾಹಿತಿ ನೀಡಿದರು. ಪಂಚಾಯತ್ ಸದಸ್ಯ ರಾಘು ಸಾಲ್ಯಾನ್, ಶಾರದಾ ಹೇಮನಾಥ ಶೆಟ್ಟಿ , ಪಂಚಾಯತ್ ಸಿಬಂದಿ ಪುರುಷೋತ್ತಮ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಬಾಬು ಶೆಟ್ಟಿ ಸ್ವಾಗತಿಸಿ, ಹಳೆ ವಿದ್ಯಾರ್ಥಿ ಶರತ್ ಶೆಟ್ಟಿ ವಂದಿಸಿದರು.

Sharath Shetty

Belmane-13031502

 

Comments

comments

Comments are closed.

Read previous post:
Belmane-13031501
ಹಾಲು ಉತ್ಪನ್ನ ಹೈನುಗಾರಿಕೆ ಮಾಹಿತಿ ಕಾರ್ಯಾಗಾರ

ಬೆಳ್ಮಣ್: ನಂದಳಿಕೆ ಸರಕಾರಿ ಮಾದರಿ ಶಾಲೆಯಲ್ಲಿ ಶನಿವಾರ ನಂದಳಿಕೆ-ಮುಂಡ್ಕೂರು ಕ್ಲಸ್ಟರ್ ಶಿಕ್ಷಕರ ಮಾಸಿಕ ಸಮಾಲೋಚನಾ ಸಭೆಯಲ್ಲಿ ನಂದಳಿಕೆ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ದ.ಕ.ಜಿಲ್ಲಾ ಹಾಲು ಉತ್ಪಾದಕರ...

Close